More

    ಟಿಇಟಿ ಅರ್ಹತಾ ಪ್ರಮಾಣಪತ್ರದ ಸಿಂಧುತ್ವದ ಅವಧಿ 7 ವರ್ಷದಿಂದ ಜೀವಮಾನದವರೆಗೆ ವಿಸ್ತರಣೆ

    ನವದೆಹಲಿ: ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಯಲ್ಲಿ ಉತ್ತೀರ್ಣರಾದ ಪ್ರಶಿಕ್ಷಣಾರ್ಥಿಗಳ ಅರ್ಹತಾ ಪ್ರಮಾಣ ಪತ್ರದ ಸಿಂಧೂತ್ವವನ್ನು 7 ವರ್ಷದಿಂದ ಜೀವಮಾನ ಅವಧಿಯವರೆಗೆ ವಿಸ್ತರಣೆ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿರುವುದಾಗಿ ಕೇಂದ್ರ ಶಿಕ್ಷಣ ಸಚಿವ ರಮೇಶ್​ ಪೊಖ್ರಿಯಾಲ್​ ಗುರುವಾರ ಘೋಷಣೆ ಮಾಡಿದ್ದಾರೆ.

    2011ರಿಂದ ಜೀವಮಾನದವರೆಗೂ ಟಿಇಟಿ ಪ್ರಮಾಣ ಪತ್ರ ಮಾನ್ಯವಾಗಿರಲಿದ್ದು, ಸರ್ಕಾರ ನಡೆಸುವ ನೇಮಕಾತಿಗಳಲ್ಲಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಈ ಹಿಂದೆ ಕೇವಲ 7 ವರ್ಷಗಳಿಗೆ ಮಾತ್ರ ಟಿಇಟಿ ಪ್ರಮಾಣ ಪತ್ರ ಸೀಮಿತವಾಗಿತ್ತು. ಅವಧಿ ಮುಗಿದರೆ ಮತ್ತೊಮ್ಮೆ ಪ್ರಶ್ನೆ ಎದುರಿಸಬೇಕಿತ್ತು. ಆದರೆ, ಸದ್ಯದ ನಿಯಮವನ್ನು ಕೇಂದ್ರ ಸರ್ಕಾರ ಬದಲಾವಣೆ ಮಾಡಿದೆ.

    ಆಯಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ಕುರಿತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ 7 ವರ್ಷಗಳ ಕಾಲಾವಧಿ ಮುಗಿದಿರುವ ಅಭ್ಯರ್ಥಿಗಳಿಗೆ ಹೊಸ ಟಿಇಟಿ ಪ್ರಮಾಣಪತ್ರಗಳನ್ನು ಮರು ಮೌಲ್ಯಮಾಪನ ಮಾಡಲು ಅಥವಾ ನೀಡಲು ಸಚಿವರು ಸೂಚನೆ ನೀಡಿದ್ದಾರೆ.

    ಶಿಕ್ಷಕರಿಗೆ ಉದ್ಯೋಗಾವಕಾಶ ಹೆಚ್ಚಿಸುವ ಹೆಜ್ಜೆ
    ಈ ಬಗ್ಗೆ ಮಾತನಾಡಿರುವ ರಮೇಶ್​ ಪೊಖ್ರಿಯಾಲ್​, ಬೋಧನಾ ಕ್ಷೇತ್ರದಲ್ಲಿ ವೃತ್ತಿಜೀವನ ಮಾಡಲು ಬಯಸುವ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವಲ್ಲಿ ಇದು ಸಕಾರಾತ್ಮಕ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ.

    ಶಿಕ್ಷಕರ ಅರ್ಹತಾ ಪರೀಕ್ಷೆಯು ಒಬ್ಬ ವ್ಯಕ್ತಿಯು ಶಾಲೆಗಳಲ್ಲಿ ಶಿಕ್ಷಕನಾಗಿ ನೇಮಕಗೊಳ್ಳಲು ಅರ್ಹತೆ ಪಡೆಯಲು ಅಗತ್ಯವಾದ ಅರ್ಹತೆಗಳಲ್ಲಿ ಒಂದಾಗಿದೆ.

    ಇದನ್ನು ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿಯ (ಎನ್‌ಸಿಟಿಇ) 2011, ಫೆಬ್ರವರಿ 11ರ ಮಾರ್ಗಸೂಚಿಯಂತೆ ಟಿಇಟಿಯನ್ನು ಆಯಾ ರಾಜ್ಯ ಸರ್ಕಾರಗಳು ನಡೆಸಲಿವೆ ಮತ್ತು ಟಿಇಟಿ ಪ್ರಮಾಣಪತ್ರದ ಸಿಂಧುತ್ವದ ಅವಧಿಯನ್ನು ಟಿಇಟಿ ಉತ್ತೀರ್ಣರಾದ ದಿನಾಂಕದಿಂದ 7 ವರ್ಷಗಳವರೆಗೆ ಈ ಹಿಂದೆ ನಿಗದಿ ಮಾಡಲಾಗಿತ್ತು. (ಏಜೆನ್ಸೀಸ್​)

    ಮತ್ತೆ ಸ್ಲಿಮ್​ ಆಗುತ್ತಿದ್ದಾರೆ ಕರೀನಾ; ಹಾಟ್​ ಫೋಟೋ ಹರಿಬಿಟ್ಟ ಬಾಲಿವುಡ್​ ಬೆಡಗಿ

    “ತುರ್ತು ಕ್ರಮ ಕೈಗೊಳ್ಳದ ಅಧಿಕಾರಿಗಳ ಮೇಲೆ ನರಹತ್ಯೆಯ ಕೇಸ್​ ಹಾಕಬೇಕು”

    ಬೆಂಗಳೂರು ನಗರದಲ್ಲಿ ಮಳೆ ವಿಕೋಪ ತಡೆಯಲು ಪೂರ್ವ ಸಿದ್ಧತೆ ಪರಿಶೀಲಿಸಿದ ಮುಖ್ಯಮಂತ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts