More

    ಸುಮಾರು ಒಂದು ಗಂಟೆಗಳ ಕಾಲ ಲಿಫ್ಟ್​ನಲ್ಲಿ ಸಿಲುಕಿ ಪರದಾಡಿದ ಆಸಿಸ್​ ಮಾಜಿ ನಾಯಕ ಸ್ಟೀವ್​ ಸ್ಮಿತ್ ​

    ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ಉಪನಾಯಕ ಸ್ಟೀವ್​ ಸ್ಮಿತ್​ ಅವರು ಸುಮಾರು ಒಂದು ಗಂಟೆಗಳ ಕಾಲ ಒಬ್ಬರೇ ಲಿಫ್ಟ್​ನಲ್ಲಿ ಸಿಲುಕಿದ ಘಟನೆ ಮೆಲ್ಬೋರ್ನ್​ನ ಹೋಟೆಲ್​ ಒಂದರಲ್ಲಿ ನಿನ್ನೆ ರಾತ್ರಿ ನಡೆದಿದೆ.

    ಸ್ಮಿತ್​ ಅವರು ಲಿಫ್ಟ್​ ಒಳಗೆ ಸಿಲುಕಿದ್ದ ವೇಳೆ ಇನ್​ಸ್ಟಾಗ್ರಾಂನಲ್ಲಿ ಲೈವ್​ ಸ್ಟ್ರೀಮಿಂಗ್​ ಮಾಡುವ ಮೂಲಕ ತಮ್ಮ ಅನುಭವವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ವೇಳೆ ಸಹ ಆಟಗಾರ ಮಾರ್ನಸ್​ ಲಬುಶೇನ್​ ಅವರು ಲಿಫ್ಟ್​ನ ರಂಧ್ರದ ಮೂಲಕ ಸ್ಮಿತ್​ ಅವರಿಗೆ ಚಾಕೋಲೆಟ್​ ನೀಡುವುದರೊಂದಿಗೆ ಸಹಾಯಕ್ಕೆ ನೆರವಾದರು.

    ನಾನೀಗ ಲಿಫ್ಟ್​ ಒಳಗಡೆ ಇದ್ದೇನೆ. ನಾನಿರುವ ಮಹಡಿಗೆ ಲಿಫ್ಟ್​ ತಲುಪಿದೆ. ಆದರೆ, ಬಾಗಿಲು ಓಪನ್​ ಆಗುತ್ತಿಲ್ಲ. ಮೇಲ್ನೋಟಕ್ಕೆ ಸೇವೆಯಿಂದ ಹೊರಗಿದೆ ಎಂದು ಕಾಣಿಸುತ್ತಿದೆ. ಬಾಗಿಲು ತೆರೆಯಲು ಯತ್ನಿಸಿದೆ. ಇನ್ನೊಂದು ಕಡೆಯಿಂದ ಮಾರ್ನಸ್​ ಕೂಡ ಬಾಗಿಲು ತೆರೆಯಲು ಯತ್ನಿಸುತ್ತಿದ್ದಾರೆ ಎಂದು ಇನ್​ಸ್ಟಾಗ್ರಾಂ ಲೈವ್​ ವೇಳೆ ಸ್ಮಿತ್​ ಹೇಳಿದ್ದಾರೆ.

    ಅಂತಿಮವಾಗಿ ತಂತ್ರಜ್ಞರು ಲಿಫ್ಟ್​ ಬಾಗಿಲು ತೆರೆಯುವಲ್ಲಿ ಯಶಸ್ವಿಯಾದರು ಮತ್ತು ಲಿಫ್ಟ್​ನಿಂದ ಹೊರಬಂದ ಸ್ಮಿತ್​ ಅವರಿಗೆ ಆಸಿಸ್​ನ ಸಹ ಆಟಗಾರರು ಚಪ್ಪಾಳೆ ತಟ್ಟಿ ಬರಮಾಡಿಕೊಂಡರು. ಕೊನೆಗೂ ಸುರಕ್ಷಿತವಾಗಿ ಕೊಠಡಿಗೆ ಮರಳಿದೆ. ಖಂಡಿತವಾಗಿಯೂ ಅದೊಂದು ಅನುಭವ ಆಗಿತ್ತು. ಆ 55 ನಿಮಿಷಗಳನ್ನು ನಾನು ಬಹುಶಃ ನಾನೆಂದಿಗೂ ನೆನಪಿಸಿಕೊಳ್ಳುವುದಿಲ್ಲ ಎಂದು ಸ್ಮಿತ್​ ಹೇಳಿದ್ದಾರೆ.

    ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಈಗಾಗಲೇ 3-0 ಅಂತರದಲ್ಲಿ ಮುನ್ನಡೆ ಸಾಧಿಸುವ ಮೂಲಕ ಆಸಿಸ್​ ಪಡೆ ಸರಣಿ ವಶಪಡಿಸಿಕೊಂಡಿದೆ. ನಾಲ್ಕನೇ ಟೆಸ್ಟ್​ ಪಂದ್ಯ ಜನವರಿ 5 ರಿಂದ ಆರಂಭವಾಗಲಿದೆ. (ಏಜೆನ್ಸೀಸ್​)

    ಪಾಪ-ಪುಣ್ಯ ಗೊತ್ತಿರೋರು ಯೋಚನೆ ಮಾಡಲಿ… ಎನ್ನುತ್ತಲೇ ವೇದಿಕೆಯಲ್ಲಿ ಕಣ್ಣೀರಿಟ್ಟ ಸಚಿವ ಮಾಧುಸ್ವಾಮಿ

    50 ರೂಪಾಯಿ ಆಮಿಷವೊಡ್ಡಿ 6ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಕೊಟ್ಟ ಮುಖ್ಯಶಿಕ್ಷಕ ಅರೆಸ್ಟ್​

    ಗಂಡನ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ ನಟಿಗೆ ಬಿಗ್​ ಶಾಕ್​: ಇದು ನಿಜ ಪ್ರೀತಿಗೆ ಸಿಕ್ಕ ಗೆಲುವೆಂದ ನಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts