More

    ರಾಜ್ಯದಲ್ಲಿ 4 ದಿನ ಮಳೆ ಮುಂದುವರಿಕೆ: ಒಂದೇ ರಾತ್ರಿಗೆ ಬಿದ್ದ ಆಲಿಕಲ್ಲು ಮಳೆಗೆ ವಿಜಯಪುರದಲ್ಲಿ 200 ಕೋಟಿ ರೂ.ನಷ್ಟ

    ಬೆಂಗಳೂರು: ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮುಂದಿನ 4 ದಿನ ಮುಂದುವರಿಯಲಿದೆ. ಒಂದೇ ರಾತ್ರಿಗೆ ಬಿದ್ದ ಆಲಿಕಲ್ಲು ಮಳೆಗೆ ವಿಜಯಪುರದಲ್ಲಿ 200 ಕೋಟಿ ರೂ.ನಷ್ಟವಾಗಿದೆ. ಓರ್ವ ಮೃತಪಟ್ಟಿದ್ದು, ದ್ರಾಕ್ಷಿತೋಟಕ್ಕೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.

    ಶನಿವಾರ ರಾತ್ರಿ ಮತ್ತು ಭಾನುವಾರದವರೆಗೆ ದಕ್ಷಿಣ ಕನ್ನಡದ ಪಣಂಬೂರಿನಲ್ಲಿ ಅತಿ ಹೆಚ್ಚು 17 ಸೆಂಮೀ ಮಳೆಯಾದರೆ ಮಂಗಳೂರು 17, ಹಾವೇರಿಯ ಗುಟ್ಟಲ್ 11, ಮುಲ್ಕಿ 10, ರಾಣಿಬೆನ್ನೂರು 9, ತುಮಕೂರಿನ ಮಧುಗಿರಿ 11, ಮಿಡಿಗೇಶಿ ಮತ್ತು ಬಳ್ಳಾರಿಯ ಕುಡತಿನಿಯಲ್ಲಿ ತಲಾ 8 ಸೆಂಮೀ ಮಳೆ ಬಿದ್ದಿದೆ.

    ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಆ.29ರಿಂದ ಸೆ.1ರವರೆಗೆ ಹಾಗೂ ಶಿವಮೊಗ್ಗ, ಹಾಸನ, ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಆ.29ರಿಂದ ಮುಂದಿನ ಮೂರು ದಿನವರೆಗೆ ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ನೀಡಿದೆ. ಕಲಬುರಗಿ, ಗದಗ, ಧಾರವಾಡ, ಹಾವೇರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಾಮರಾಜನಗರ, ಮೈಸೂರು, ಬೆಂಗಳೂರಿನಲ್ಲಿ ಆ.29ರಂದು ಹಾಗೂ ಬೆಳಗಾವಿ, ಧಾರವಾಡ ಮತ್ತು ಹಾವೇರಿಯಲ್ಲಿ ಆ.30ರಂದು ಯೆಲ್ಲೋ ಅಲರ್ಟ್ ನೀಡಲಾಗಿದೆ.

    ಅಕ್ಟೋಬರ್​ 17ಕ್ಕೆ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ: ಅ. 19ಕ್ಕೆ ಫಲಿತಾಂಶ, ಕಾಂಗ್ರೆಸ್​ ಸಭೆಯಲ್ಲಿ ನಿರ್ಧಾರ

    ಬಿಜೆಪಿ ನಾಯಕಿ ಸೊನಾಲಿ ಸಾವು ಪ್ರರಕಣ: ಗೋವಾ ಪೊಲೀಸರಿಂದ ಮತ್ತೊಬ್ಬ ಡ್ರಗ್ಸ್​ ಪೆಡ್ಲರ್​ ಅರೆಸ್ಟ್​

    ಬಿಜೆಪಿ ರಾಜ್ಯಾಧ್ಯಕ್ಷ ಬದಲಾಗ್ತಾರಾ ಎಂಬ ಪ್ರಶ್ನೆಗೆ ಮುಖ್ಯಮಂತ್ರಿ ಬೊಮ್ಮಾಯಿ ಪ್ರತಿಕ್ರಿಯೆ ಹೀಗಿತ್ತು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts