More

    ಸರ್ಕಾರಿ ವಿರೋಧಿ ಪ್ರತಿಭಟನಾ ಶಿಬಿರಗಳ ಮೇಲೆ ಶ್ರೀಲಂಕಾ ಭದ್ರತಾ ಪಡೆಗಳಿಂದ ದಾಳಿ: 50 ಮಂದಿಗೆ ಗಂಭೀರ ಗಾಯ

    ಕೊಲಂಬೊ: ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ದ್ವೀಪ ರಾಷ್ಟ್ರ ಶ್ರೀಲಂಕಾಕ್ಕೆ ಹೊಸ ಅಧ್ಯಕ್ಷರ ನೇಮಕವಾದ ಬೆನ್ನಲ್ಲೇ ಸರ್ಕಾರಿ ವಿರೋಧಿ ಪ್ರತಿಭಟನಾ ಶಿಬಿರದ ಮೇಲೆ ಲಂಕಾದ ಭದ್ರತಾ ಪಡೆಗಳು ಶುಕ್ರವಾರ ಬೆಳಗ್ಗೆಯೇ ದಾಳಿ ಮಾಡಿವೆ. ಈ ಮೂಲಕ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸಕ್ಕೆ ನೂತನ ಅಧ್ಯಕ್ಷ ರಾನಿಲ್​ ವಿಕ್ರಮಸಿಂಘೆ ಮುಂದಾಗಿದ್ದಾರೆ ಎಂದು ಇಬ್ಬರು ಪ್ರತಿಭಟನಾ ಸಂಘಟಕರು ಆರೋಪಿಸಿದ್ದಾರೆ.

    ಸೈನಿಕರು ರೈಫಲ್‌ಗಳೊಂದಿಗೆ ಶಸ್ತ್ರಸಜ್ಜಿತರಾಗಿ ಆಕ್ರಮಣಕಾರಿಯಾಗಿ ಪ್ರತಿಭಟನಾ ಶಿಬಿರವನ್ನು ಕೆಡವಲು ಪ್ರಯತ್ನಿಸುತ್ತಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಕಾಣಬಹುದು. ಇಂದು ಬೆಳ್ಳಂಬೆಳಗ್ಗೆ ಸಾಕಷ್ಟು ಸೈನಿಕರು ಅಧ್ಯಕ್ಷರ ಸೆಕ್ರೆಟರಿಯೇಟ್ ಮುಂದೆ ಹಾದು ಹೋಗುವ ರಸ್ತೆಯ ಎರಡು ಬದಿಯಲ್ಲಿದ್ದ ಶಿಬಿರಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿದ್ದಾರೆ.

    ನೂರಾರು ಭದ್ರತಾ ಸಿಬ್ಬಂದಿ ಮಧ್ಯರಾತ್ರಿಯ ಬಳಿಕ ನಿರ್ಗಮಿತ ಅಧ್ಯಕ್ಷ ಗೋತಬಯ ರಾಜಪಕ್ಸ ಅವರ ಹೆಸರನ್ನು ಅಪಹಾಸ್ಯ ಮಾಡುವ “ಗೋಟಾ ಗೋ ಗಾಮಾ” ಪ್ರತಿಭಟನಾ ಶಿಬಿರವನ್ನು ಸುತ್ತುವರೆದು ತೆರವುಗೊಳಿಸಿದರು. ಈ ವೇಳೆ ಉಂಟಾದ ಘರ್ಷಣೆಯಲ್ಲಿ 50 ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ಪ್ರಕರ್ತರೂ ಸೇರಿದಂತೆ ಬಹುತೇಕರ ಮೇಲೆ ಭದ್ರತಾ ಪಡೆಗಳು ದಾಳಿ ಮಾಡಿದ್ದಾರೆ ಎಂದು ಪ್ರತಿಭಟನಾ ಸಂಘಟಕರು ಆರೋಪ ಮಾಡಿದ್ದಾರೆ.

    ಇದು ವ್ಯವಸ್ಥಿತ ಮತ್ತು ಪೂರ್ವನಿಯೋಜಿತ ದಾಳಿ ಎಂದು ಪ್ರತಿಭಟನಾ ಸಂಘಟಕ ಚಮೀರ ಡೆಡ್ಡುವಾಗೆ ರಾಯಿಟರ್ಸ್​ಗೆ ತಿಳಿಸಿದರು. ಅವರು ವಾಸ್ತವವಾಗಿ ಜನರ ಮೇಲೆ ಕ್ರೂರವಾಗಿ ದಾಳಿ ಮಾಡಿದರು. ಏನು ನಡೆದಿದೆಯೋ ಅದು ಅತ್ಯಂತ ಕಳಪೆ ಶಕ್ತಿ ಪ್ರದರ್ಶನವಾಗಿದೆ ಎಂದಿದ್ದಾರೆ. ಈ ಘಟನೆ ಬಗ್ಗೆ ರಾಯಿಟರ್ಸ್​ ಪೊಲೀಸರು ಮತ್ತು ಸೇನಾ ವಕ್ತಾರರನ್ನು ಸಂಪರ್ಕಿಸಿದಾಗ ಅವರು ಪ್ರತಿಕ್ರಿಯಸಲಿಲ್ಲ ಎಂದು ಹೇಳಲಾಗಿದೆ.

    ಶ್ರೀಲಂಕಾದಲ್ಲಿ ವಿಕ್ರಮಸಿಂಘೆ ಅವರು ಹಂಗಾಮಿ ಅಧ್ಯಕ್ಷರಾಗಿದ್ದಾಗ ಕಳೆದ ಭಾನುವಾರ ತುರ್ತು ಪರಿಸ್ಥಿತಿಯನ್ನು ಹೇರಿದ್ದರು. ಪ್ರತಿಭಟನಾಕಾರರನ್ನು ಬಂಧಿಸಲು ಮತ್ತು ಪ್ರತಿಭಟಿಸುವ ಹಕ್ಕನ್ನು ಮೊಟಕುಗೊಳಿಸಲು ಮಿಲಿಟರಿಗೆ ಅಧಿಕಾರ ನೀಡಲು ಹಿಂದಿನ ತುರ್ತು ನಿಯಮಾವಳಿಗಳನ್ನು ಬಳಸಿಕೊಂಡಿದ್ದರು.

    ಏಳು ದಶಕಗಳಲ್ಲಿ ದೇಶದ ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟಿನಿಂದ ಪ್ರಚೋದಿಸಲ್ಪಟ್ಟ ಬೃಹತ್ ಸಾರ್ವಜನಿಕ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಹೆದರಿ ಶ್ರೀಲಂಕಾದಿಂದ ಪಲಾಯನ ಮಾಡಿದ ರಾಜಪಕ್ಸ ಅವರ ರಾಜೀನಾಮೆಯ ನಂತರ, ಮಾಜಿ ಪ್ರಧಾನಿ ವಿಕ್ರಮಸಿಂಘೆ ಅವರು ಈ ವಾರ ಸಂಸತ್ತಿನಲ್ಲಿ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ಬಳಿಕ ಗುರುವಾರ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಇದರ ಬೆನ್ನಲ್ಲೇ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಆರಂಭವಾಗಿದೆ. (ಏಜೆನ್ಸೀಸ್​)

    ತಮಿಳುನಾಡಿನಿಂದ ಬಸ್​ನಲ್ಲಿ ಬಂದು ಡಿಯೋ ಬೈಕ್​​ಗಳನ್ನೇ ಕದಿಯುತ್ತಿದ್ದ ಖದೀಮರ ಗ್ಯಾಂಗ್​ ಸಿಕ್ಕಿಬಿದ್ದಿದ್ದೇ ರೋಚಕ!

    #BBK9: ಬಿಗ್​ಬಾಸ್​ ಸೀಸನ್​ 9 ನಡೆಸಿಕೊಡಲು ಕಿಚ್ಚ ಸುದೀಪ್​ ಪಡೆದ ಸಂಭಾವನೆ ಇಷ್ಟೊಂದಾ?

    ಒಬಿಸಿಯಲ್ಲಿ ಮತ್ತೆರಡು ವರ್ಗ ವಿಂಗಡಣೆ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೀಸಲಾತಿ ನಿಗದಿ ವಿಚಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts