More

    ಕನಸು ನನಸಾಯಿತು: ಅಪ್ಪ-ಅಮ್ಮನನ್ನು ಮೊದಲ ಬಾರಿಗೆ ವಿಮಾನದಲ್ಲಿ ಕರೆದೊಯ್ದ ಖುಷಿ ಹಂಚಿಕೊಂಡ ಚಿನ್ನದ ಹುಡುಗ

    ನವದೆಹಲಿ: ಟೋಕಿಯೋ ಒಲಿಂಪಿಕ್ಸ್​ನಲ್ಲಿ ಜಾವಲಿನ್​ ಎಸೆತದಲ್ಲಿ ಚಿನ್ನದ ಪದಕ ಗೆದ್ದು ಒಲಿಂಪಿಕ್ಸ್​ ಇತಿಹಾಸದಲ್ಲೇ ಅಥ್ಲೆಟಿಕ್ಸ್​ ವಿಭಾಗದಲ್ಲಿ ಭಾರತಕ್ಕೆ ಮೊಟ್ಟ ಮೊದಲ ಬಾರಿಗೆ ಸ್ವರ್ಣ ಪದಕವನ್ನು ತಂದು ಕೊಡುವ ಮೂಲಕ ಐತಿಹಾಸಿಕ ಸಾಧನೆ ಮಾಡಿರುವ ಚಿನ್ನದ ಹುಡುಗನೆಂದೇ ಖ್ಯಾತಿಯಾಗಿರುವ ಹರಿಯಾಣ ಮೂಲದ ನೀರಜ್​ ಚೋಪ್ರಾ, ತಮ್ಮ ಬಹುದಿನಗಳ ಸಣ್ಣ ಕನಸೊಂದನ್ನು ನನಸು ಮಾಡಿಕೊಂಡಿದ್ದಾರೆ.

    ಚೋಪ್ರಾ ಅವರ ಆ ಕನಸು ಯಾವುದೆಂದರೆ ತಮ್ಮ ಅಪ್ಪ-ಅಮ್ಮನನ್ನು ಒಮ್ಮೆ ಆದರೂ ವಿಮಾನದಲ್ಲಿ ಕರೆದೊಯ್ಯಬೇಕೆಂಬುದು. ಕೊನೆಗೂ ಆ ಕನಸು ಇಂದು ನನಸಾಗಿದೆ. ಈ ಬಗ್ಗೆ ಟ್ವೀಟ್​ ಮಾಡಿರುವ ನೀರಜ್​ ಚೋಪ್ರಾ, ನನ್ನದೊಂದು ಸಣ್ಣ ಕನಸು ಇಂದು ನನಸಾಗಿದೆ. ನನ್ನ ಪಾಲಕರನ್ನು ಮೊದಲ ಬಾರಿಗೆ ವಿಮಾನದಲ್ಲಿ ಕರೆದೊಯ್ಯಲು ಸಫಲನಾದೆ ಎಂದು ಬರೆದುಕೊಂಡಿದ್ದು, ಅಪ್ಪ ಅಮ್ಮನೊಂದಿಗೆ ವಿಮಾನ ಒಳಗೆ ಇರುವ ಮತ್ತು ವಿಮಾನದಿಂದ ಇಳಿಯುತ್ತಿರುವ ಫೋಟೋಗಳನ್ನು ಜತೆಯಲ್ಲಿ ನೀರಜ್​ ಪೋಸ್ಟ್​ ಮಾಡಿದ್ದಾರೆ.

    ನೀರಜ್ ಚೋಪ್ರಾ ಫೋಟೋ ಪೋಸ್ಟ್​ ಮಾಡುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಅಭಿನಂದನೆಗಳು ಹರಿದುಬರುತ್ತಿದೆ.

    ಟೋಕಿಯೊದಲ್ಲಿ ನಡೆದ ಪುರುಷರ ಜಾವೆಲಿನ್ ಫೈನಲ್‌ನಲ್ಲಿ ನೀರಜ್ 87.58 ಮೀಟರ್ ಜಾವಲಿನ್​ ಎಸೆಯುವ ಮೂಲಕ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ. ಆದಾಗ್ಯೂ, ನೀರಜ್ ಭಾರತಕ್ಕೆ ಹಿಂದಿರುಗಿದ ನಂತರ ಅನಾರೋಗ್ಯದ ಕಾರಣದಿಂದಾಗಿ ನೀರಜ್ ತನ್ನ 2021ರ ಅಭಿಯಾನವನ್ನು ಕೊನೆಗೊಳಿಸಬೇಕಾಗಿದೆ. ವಿಶ್ವ ಚಾಂಪಿಯನ್‌ಶಿಪ್‌ಗಳು, ಏಷ್ಯನ್ ಗೇಮ್‌ಗಳು ಮತ್ತು ಕಾಮನ್‌ವೆಲ್ತ್ ಗೇಮ್ಸ್‌ಗಳಂತಹ ದೊಡ್ಡ ಈವೆಂಟ್‌ಗಳನ್ನು ಒಳಗೊಂಡ ಮುಂದಿನ ಋತುವಿನಲ್ಲಿ ಪ್ರಬಲವಾಗಿ ಮರಳ ಪ್ರತಿಜ್ಞೆಯನ್ನು ನೀರಜ್​ ಚೋಪ್ರಾ ಮಾಡಿದ್ದಾರೆ. (ಏಜೆನ್ಸೀಸ್​)

    ನಟ ಧರಮ್ ತೇಜ್​ ಇತ್ತೀಚೆಗೆ ಖರೀದಿಸಿದ್ದ ದುಬಾರಿ ಬೈಕ್​ನಿಂದಲೇ ದುರಂತ: ಅದರ ಬೆಲೆ ಕೇಳಿದ್ರೆ ದಂಗಾಗ್ತೀರಾ!

    ಗಣೇಶನ ಮೂರ್ತಿ ಹಿಡಿದ ಎಬಿಡಿ: ವೈರಲ್​ ಫೋಟೋ ಹಿಂದಿರುವ ಅಸಲಿಯತ್ತು ಹೀಗಿದೆ ನೋಡಿ…

    ಸಂಚಾರಿ ಪೊಲೀಸ್ ಆಯುಕ್ತರು ಓದಲೇಬೇಕಾದ ಸ್ಟೋರಿ ಇದು: ಪೊಲೀಸರಿಗೆ ಸವಾಲಾದ ಬೈಕ್ ಸವಾರ ಈತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts