More

    18 ವರ್ಷ ಮೇಲ್ಪಟ್ಟವರಿಗೆ ಕಡ್ಡಾಯ ಮದ್ವೆ! ಹೀಗಿದೆ ನೋಡಿ ಪಾಕ್ ಮುಖಂಡ ಕೊಟ್ಟ ಅಚ್ಚರಿಯ ಕಾರಣ

    ಇಸ್ಲಮಾಬಾದ್​: ಮಕ್ಕಳಿಗೆ 18 ವರ್ಷ ಮೇಲ್ಪಟ್ಟವರಿಗೆ ಪಾಲಕರು ಕಡ್ಡಾಯವಾಗಿ ಮದುವೆ ಮಾಡಬೇಕೆಂಬ ಖಾಸಗಿ ಕರಡು ಮಸೂದೆಯೊಂದನ್ನು ಪಾಕಿಸ್ತಾನದ ಸಿಂಧ್​ ಪ್ರಾಂತ್ಯದ ವಿಧಾನಸಭೆಯಲ್ಲಿ ಸಲ್ಲಿಸಲಾಗಿದೆ.

    ಪಸ್ತಾಪಿತ ಕಾನೂನನ್ನು ಉಲ್ಲಂಘಟನೆ ಮಾಡಿದರೆ, 500 ರೂಪಾಯಿ ದಂಡವನ್ನು ವಿಧಿಸಲು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ಗುರುವಾರ ವರದಿ ಮಾಡಿವೆ.

    ಮಸೂದೆಯನ್ನು ಸಿಂಧ್​ ಕಡ್ಡಾಯ ವಿವಾಹ ಕಾಯ್ದೆ 2021 ಎಂದು ಕರೆಯಲಾಗಿದೆ. ಮುತ್ತಾಹಿದ್​ ಮಜ್ಲೀಸ್​-ಇ-ಅಮಾಲ್​ ಪಕ್ಷದ ಮುಖಂಡ ಹಾಗೂ ಪ್ರತಿಪಕ್ಷದ ನಾಯಕ ಸೈಯದ್​ ಅಬ್ದುಲ್​ ರಶೀದ್ ಈ ಕರಡನ್ನು ಮಸೂದೆಯನ್ನು ಸಿಂಧ್​ ವಿಧಾನಸಭೆಯ ಸಚಿವಾಲಯಕ್ಕೆ ಸಲ್ಲಿಸಿದ್ದಾರೆ. ಇದರ ಪ್ರಕಾರ 18 ವರ್ಷ ಮೇಲ್ಪಟ್ಟ ಮಕ್ಕಳಿಗೆ ಪಾಲಕರು ಕಡ್ಡಾಯವಾಗಿ ಮದುವೆ ಮಾಡಲೇಬೇಕೆಂಬ ನಿಯಮವಿದೆ.

    ಒಂದು ವೇಳೆ ಮದುವೆ ಮಾಡಲು ಆಗದಿದ್ದರೆ, ಅದಕ್ಕೆ ಸೂಕ್ತ ಕಾರಣ ನೀಡಲು ಪ್ರಸ್ತಾವಿತ ಕಾನೂನಿನ ಅಡಿಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪಾಲಕರು ಅಫಿಡವಿಟ್ ಸಲ್ಲಿಸಬೇಕಾಗುತ್ತದೆ. ಒಂದು ವೇಳೆ ಅಫಿಡೆವಿಟ್​ ಸಲ್ಲಿಸಲು ವಿಫಲವಾದರೆ, ಮದುವೆಯಾಗದ ಪ್ರತಿ ಮಕ್ಕಳಿಗೆ 500 ರೂ. ದಂಡ ತೆರಬೇಕಾಗುತ್ತದೆ.

    ಮಸೂದೆಯನ್ನು ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಎಂಎಂಎ ಶಾಸಕ, ನನ್ನ ಮಸೂದೆ ಇಸ್ಲಾಂ ಧರ್ಮದ ಬೋಧನೆಗಳಿಗೆ ಅನುಗುಣವಾಗಿದೆ. ಇದು ಪ್ರೌಢಾವಸ್ಥೆಗೆ ಬಂದ ನಂತರ ಮದುವೆಗೆ ಕರೆ ನೀಡಿದೆ ಎಂದು ತಿಳಿಸಿದ್ದಾರೆ.

    ಸರ್ಕಾರವು ಕೂಡಲೇ ಈ ಕಾನೂನುಗಳನ್ನು ಜನರಿಗೆ ಪರಿಚಯಿಸಬೇಕು ಮತ್ತು ಮದುವೆ ಕಾರ್ಯಗಳ ಕಟ್ಟುನಿಟ್ಟಿನ ಕ್ರಮಗಳನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಗಳನ್ನು ಮಾಡಬೇಕು. ನಮ್ಮ ಉದ್ದೇಶಿತ ಕಾನೂನು ಯುವಕರನ್ನು ಬೆಂಬಲಿಸಲು ಮತ್ತು ಸಮಾಜದಲ್ಲಿ ಅನೈತಿಕ ಚಟುವಟಿಕೆಗಳನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಸೈಯದ್​ ಅಬ್ದುಲ್​ ರಶೀದ್ ಸಮರ್ಥನೆ ನೀಡಿದರು.

    ಇಸ್ಲಾಂ ಧರ್ಮದ ಬೋಧನೆಗಳಿಗೆ ಅನುಗುಣವಾಗಿ ಪೋಷಕರ ಮೇಲೆ ಯಾವುದೇ ಅನಗತ್ಯ ಹೊರೆ ಬೀಳದಂತೆ, ಮದುವೆಗಳನ್ನು ಸುಲಭದ ಕೆಲಸವನ್ನಾಗಿ ಮಾಡಲು ಸರ್ಕಾರ ತನ್ನ ಪಾತ್ರವನ್ನು ವಹಿಸಬೇಕು ಎಂದು ಅವರು ಒತ್ತಾಯಿಸಿದರು. (ಏಜೆನ್ಸೀಸ್​)

    ಕೂಲ್‌ಡ್ರಿಂಗ್ಸ್‌ ಬಾಟಲಿಯ ಮುಚ್ಚಳ ಜೇನ್ನೊಣ ತೆಗೆಯುವುದನ್ನು ಕಂಡಿದ್ದೀರಾ? ಇಲ್ಲಿದೆ ನೋಡಿ ಅಚ್ಚರಿ ವಿಡಿಯೋ

    ಹಾವನ್ನು ಕೊಂದು ತಿಂದ ವಿಡಿಯೋ ವೈರಲ್​: ಬಂಧಿತ ಆರೋಪಿ ಕೊಟ್ಟ ಹೇಳಿಕೆಗೆ ಪೊಲೀಸರೇ ಶಾಕ್!​

    ಹುಟ್ಟಿದ ಹಸುಗೂಸಿನ ಗಾತ್ರ ನೋಡಿ ದಿಗಿಲುಗೊಂಡ ವೈದ್ಯರು- ತಲೆತಿರುಗಿಬಿದ್ದ ಅಮ್ಮ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts