ಒಳಉಡುಪು ಕಾಣಿಸುವಂತಹ ಪಾರದರ್ಶಕ ಬಟ್ಟೆ ಧರಿಸಿ ಬಂದು ಮುಜುಗರಕ್ಕೀಡಾದ ಶ್ರುತಿ! ವಿಡಿಯೋ ವೈರಲ್​

1276299
Published on

ಚೆನ್ನೈ: ಸಕಲಕಲಾವಲ್ಲಭ ಕಮಲ್​ ಹಾಸನ್ ಅವರ ಪುತ್ರಿ ಶ್ರುತಿ ಹಾಸನ್ ಬಹುಬೇಡಿಕೆಯ ಬಹುಭಾಷಾ ನಟಿ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ನಟನೆ, ಡಾನ್ಸ್​, ಗ್ಲಾಮರ್​ ಮತ್ತು ಗಾಯನದ ಮೂಲಕ ಶ್ರುತಿ ತುಂಬಾ ಮನೆ ಮಾತಾಗಿದ್ದಾರೆ. ಇನ್ನು ವೈಯಕ್ತಿಕ ವಿಚಾರದಿಂದಲೂ ಶ್ರುತಿ ಆಗಾಗ ಸುದ್ದಿಯಾಗುತ್ತಿರುತ್ತಾರೆ.

ಇತ್ತೀಚೆಗೆ ಶ್ರುತಿ ತಮ್ಮ ತಾಯಿ ಸಾರಿಕಾ ಠಾಕೂರ್​ ಮತ್ತು ಬಾಯ್​ಫ್ರೆಂಡ್​ ಶಾಂತನು ಹಜಾರಿಕಾ ಜತೆ ಮುಂಬೈನ ಬಾಂದ್ರಾದಲ್ಲಿ ಕಾಣಿಸಿಕೊಂಡಿದ್ದರು. ಊಟಕ್ಕೆಂದು ಎಲ್ಲರು ಮಿಜು ರೆಸ್ಟೊರೆಂಟ್​ ಬಂದಿದ್ದರು. ಈ ವೇಳೆ ಶ್ರುತಿ ಅವರು ಧರಿಸಿ ಬಂದಿದ್ದ ಉಡುಗೆ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿತು. ಉಡುಗೆ ಪಾರದರ್ಶಕವಾಗಿದ್ದರಿಂದ ಶ್ರುತಿ ಮುಜುಗರ ಅನುಭವಿಸಬೇಕಾಯಿತು.

ಅಂದಹಾಗೆ ಶ್ರುತಿ ಕಪ್ಪು ಬಣ್ಣದ ಸರಳ ಉಡುಗೆಯನ್ನು ಧರಿಸಿದ್ದರು. ಊಟ ಮುಗಿಸಿ ರೆಸ್ಟೊರೆಂಟ್​ನಿಂದ ಹೊರಗಡೆ ಬಂದಾಗ ಅಲ್ಲಿದ್ದ ಪಾಪಾರಾಜಿಗಳು ಶ್ರುತಿ ಅವರ ಫೋಟೋ ಮತ್ತು ವಿಡಿಯೋಗಳನ್ನು ಚಿತ್ರೀಕರಿಸಿದ್ದಾರೆ. ಈ ವೇಳೆ ಶ್ರುತಿ ಅವರು ಅಕ್ಷರಶಃ ಮುಜುಗರ ಅನುಭವಿಸಿದ್ದಾರೆ.

ಶ್ರುತಿ ಅವರ ವಿಡಿಯೋ ವೈರಲ್​ ಆಗಿದ್ದು, ತಮ್ಮ ತಾಯಿ ಮತ್ತು ಬಾಯ್​ಫ್ರೆಂಡ್​ ಜತೆಗೆ ರೆಸ್ಟೊರೆಂಟ್​ನಿಂದ ಹೊರಬರುವ ಶ್ರುತಿ ಹಾಸನ್, ಕ್ಯಾಮೆರಾಮೆನ್​ಗಳಿಗೆ ಫೋಸ್​ ನೀಡಿ ಧನ್ಯವಾದ ತಿಳಿಸುತ್ತಾರೆ. ಈ ವೇಳೆ ಶ್ರುತಿ​ ಉಡುಗೆ ನೋಡಿ ಅಲ್ಲಿದ್ದವರೆಲ್ಲ ಒಂದು ಕ್ಷಣ ಅವಕ್ಕಾಗಿದ್ದಾರೆ. ಶ್ರುತಿ ಧರಿಸಿದ್ದ ಬಟ್ಟೆ ತುಂಬಾ ಪಾರದರ್ಶಕವಾಗಿತ್ತು ಮತ್ತು ಒಳಉಡುಪು ಸ್ಪಷ್ಟವಾಗಿ ಕಾಣಿಸುವಂತಿತ್ತು. ಕೆಲ ಕಾಲ ಅಲ್ಲಿಯೇ ಇದ್ದ ಶ್ರುತಿ ನಂತರ ತಮ್ಮ ಕಾರನ್ನೇರಿ ಹೊರಟರು. ಆದರೆ, ಶ್ರುತಿ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್​ ಮಾಡುತ್ತಿದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಇತ್ತೀಚೆಗೆ ಅಮೆಜಾನ್ ಪ್ರೈಮ್ ವಿಡಿಯೋದ ವೆಬ್ ಸರಣಿ 'ಬೆಸ್ಟ್ ಸೆಲ್ಲರ್' ನಲ್ಲಿ ಕಾಣಿಸಿಕೊಂಡಿದ್ದರು. ಇದಲ್ಲದೆ, ಮುಂದಿನ ತೆಲುಗು ಚಿತ್ರ 'ಸಲಾರ್' ನಲ್ಲಿ ದಕ್ಷಿಣದ ಸೂಪರ್‌ಸ್ಟಾರ್ ಪ್ರಭಾಸ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಕೆಜಿಎಫ್​ ಖ್ಯಾತಿಯ ಪ್ರಶಾಂತ್​ ನೀಲ್​ ನಿರ್ದೇಶಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net