More

    ಬಿಗ್​ಬಾಸ್​ಗೆ ಹೋಗಿದ್ದೇ ತಪ್ಪಾಯ್ತಾ? ಎರಡು ಪ್ರೇಮ ಪ್ರಕರಣಗಳ ನಡುವೆ ಬತ್ತಿ ಇಟ್ಟ ಬಿಗ್​ಬಾಸ್​

    ಹೈದರಾಬಾದ್​: ಮೊದಲೇ ಬಾಯ್​ಫ್ರೆಂಡ್​ ಹಾಗೂ ಗರ್ಲ್​ಫ್ರೆಂಡ್​ ಹೊಂದಿದ್ದ ಇಬ್ಬರು ಸ್ಪರ್ಧಿಗಳು ಬಿಗ್​ಬಾಸ್​ ಮನೆಗೆ ಎಂಟ್ರಿ ನೀಡಿ ರಿಯಾಲಿಟಿ ಶೋ ಮುಗಿಸಿಕೊಂಡು ಹೊರ ಬರುತ್ತಿದ್ದಂತೆ ಇಬ್ಬರ ಪ್ರೀತಿಯಲ್ಲೂ ಬಿರುಗಾಳಿ ಎಬ್ಬಿದೆ. ಮೊದಲ ಪ್ರೀತಿಯನ್ನು ಮರೆತ ಇಬ್ಬರು ಬಿಗ್​ಬಾಸ್​ ಮನೆಯಲ್ಲಿ ಸಲುಗೆ ಬೆಳೆಸಿದ್ದೇ ಬಿರುಗಾಳಿ ಏಳಲು ಕಾರಣವಾಗಿದೆ. ಆ ಕುರಿತ ಒಂದು ಸ್ಟೋರಿ ಇಲ್ಲಿದೆ.

    ಬಿಗ್​ಬಾಸ್​ಗೆ ಹೋಗಿದ್ದೇ ತಪ್ಪಾಯ್ತಾ? ಎರಡು ಪ್ರೇಮ ಪ್ರಕರಣಗಳ ನಡುವೆ ಬತ್ತಿ ಇಟ್ಟ ಬಿಗ್​ಬಾಸ್​

    ಶಾನು ಅಲಿಯಾಸ್​ ಷಣ್ಮುಖ​ ಜಸ್ವಂತ್​ ಹಾಗೂ ದೀಪ್ತಿ ಸುನೈನಾ ತೆಲುಗು ಯೂಟ್ಯೂಬ್​ ಸರ್ಕಲ್​ನಲ್ಲಿ ಫೇಮಸ್ ಆಗಿರುವ ಮುದ್ದಾದ ಜೋಡಿಗಳು. ಇಬ್ಬರು ಪರಸ್ಪರ ಪ್ರೀತಿಸುತ್ತಿರುವುದು ಇದೀಗ ಜಗಜ್ಜಾಹೀರಾಗಿತ್ತು. ಅದನ್ನು ಸ್ವತಃ ಷಣ್ಮುಖ್​ ಹಾಗೂ ದೀಪ್ತಿ ಕೂಡ ಹೇಳಿಕೊಂಡಿದ್ದರು. ಶಾನು ಬಿಗ್​​ಬಾಸ್​ ಮನೆಯಲ್ಲಿರುವಾಗ ಆತನಿಗೆ ವೋಟ್​ ಮಾಡುವಂತೆ ಅಭಿಮಾನಿಗಳ ಬಳಿ ದೀಪ್ತಿ ಕೇಳಿಕೊಳ್ಳುತ್ತಿದ್ದರು. ಒಂದೆಡೆ ಶಾನುಗೆ ಇರುವ ಖ್ಯಾತಿ ಮತ್ತು ದೀಪ್ತಿಯ ಸಾಕಷ್ಟು ಪ್ರಯತ್ನದ ನಡುವೆಯೂ ಶಾನು ಮಾತ್ರ ಬಿಗ್​ಬಾಸ್​ 5 ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ. ಕೊನೆಗೆ ಮೊದಲನೇಯ ರನ್ನರ್​ ಅಪ್​ ಆಗಿ ಉಳಿದರು.

    ಬಿಗ್​ಬಾಸ್​ಗೆ ಹೋಗಿದ್ದೇ ತಪ್ಪಾಯ್ತಾ? ಎರಡು ಪ್ರೇಮ ಪ್ರಕರಣಗಳ ನಡುವೆ ಬತ್ತಿ ಇಟ್ಟ ಬಿಗ್​ಬಾಸ್​

    ಶಾನು ಮತ್ತು ದೀಪ್ತಿ ನಡುವೆ ಬ್ರೇಕಪ್ ಆಗಿದೆ ಎಂಬ ವಿಚಾರ ಈ ಹಿಂದೆಯೇ ಬೆಳಕಿಗೆ ಬಂದಿತ್ತು. ಬಿಗ್​ಬಾಸ್​ನಲ್ಲಿ ಶಾನು ಕ್ಯಾಪ್ಟನ್​ ಆದ ನಂತರದ ಎಪಿಸೋಡ್​ನಲ್ಲಿ ಒಂದಷ್ಟು ಘಟನೆಗಳು ನಡೆದಿತ್ತು. ಪ್ರತಿಸ್ಪರ್ಧಿ ಸಿರಿ ಅವರು ಶಾನು ಹಣೆಗೆ ಮುತ್ತಿಟ್ಟಿದ್ದರು. ಅಲ್ಲದೆ, ಒಂದು ರಾತ್ರಿ ಇಬ್ಬರು ಮಾತನಾಡುತ್ತಿರುವಾಗ ಸಿರಿ, ಶಾನು ಎದೆಯ ಮೇಲೆ ಮಲಗಿದ್ದರು. ಇದು ತುಂಬಾ ಸಲುಗೆ ಇರುವಂತೆ ತೋರುತ್ತಿತ್ತು. ಇದನ್ನು ನೋಡಿದ ದೀಪ್ತಿ ತುಂಬಾ ಕೋಪಗೊಂಡಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿತ್ತು. ಶಾನು ಮತ್ತು ಸಿರಿ ತುಂಬಾ ಸಲುಗೆಯಿಂದ ಇರುವ ಫೋಟೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ದೀಪ್ತಿಗೆ ಬೇಸರ ತರಿಸಿದೆ. ಹೀಗಾಗಿ ದೀಪ್ತಿ ತನ್ನ ಇನ್​ಸ್ಟಾಗ್ರಾಂ ಫಾಲೋವರ್ಸ್​ ಲೀಸ್ಟ್​ನಿಂದ ಶಾನು ಅನ್ನು ಅನ್​​ ಫಾಲೋ ಮಾಡಿರುವ ವಿಚಾರವೂ ಬೆಳಕಿಗೆ ಬಂದಿತ್ತು. ಇದೀಗ ಶೋನಿಂದ ಹೊರಬಂದ ಬಳಿಕ ದೀಪ್ತಿಯನ್ನು ಶಾನು ನಿರ್ಲಕ್ಷಿಸುತ್ತಿರುವಂತೆ ಕಾಣುತ್ತಿದ್ದು, ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

    ಬಿಗ್​ಬಾಸ್​ಗೆ ಹೋಗಿದ್ದೇ ತಪ್ಪಾಯ್ತಾ? ಎರಡು ಪ್ರೇಮ ಪ್ರಕರಣಗಳ ನಡುವೆ ಬತ್ತಿ ಇಟ್ಟ ಬಿಗ್​ಬಾಸ್​

    ಇತ್ತ ಸಿರಿಗೂ ಮೊದಲೇ ಬಾಯ್​ಫ್ರೆಂಡ್​ ಇದ್ದಾನೆ. ಆತನ ಹೆಸರು ಶ್ರೀಹಾನ್​. ಇದೀಗ ಆತ ತನ್ನ ಮೊಬೈಲ್​ನಲ್ಲಿದ್ದ ಸಿರಿ ಫೋಟೋಗಳನ್ನೆಲ್ಲ ಡಿಲೀಟ್​ ಮಾಡಿದ್ದಾನೆಂದು ತಿಳಿದುಬಂದಿದೆ. ಶಾನು ಜತೆಗಿನ ಸಿರಿ ಸಂಬಂಧದಿಂದ ಅಸಮಾಧಾನಗೊಂಡಿರುವ ಶ್ರೀಹಾನ್​ ಆಕೆಯೊಂದಿಗೆ ಮಾತು ಬಿಟ್ಟಿದ್ದಾರೆ. ಅಲ್ಲದೆ, ಆಕೆಯಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂಬ ಸುದ್ದಿಯು ಹರಿದಾಡುತ್ತಿದೆ. ಒಟ್ಟಾರೆ, ಬಿಗ್​ಬಾಸ್​ ಶೋ ಮುಗಿಸಿಕೊಂಡು ಬಂದ ಮೇಲೆ ಇಬ್ಬರ ಪ್ರೀತಿಯಲ್ಲಿ ಬಿರುಗಾಳಿ ಎದ್ದಿದ್ದು, ಮುಂದೇನಾಗುತ್ತದೋ ಎಂದು ಕಾದು ನೋಡಬೇಕಿದೆ. (ಏಜೆನ್ಸೀಸ್​)

    ಬಿಗ್​ಬಾಸ್​ನಿಂದ ಹೊರಬಂದ ಬೆನ್ನಲ್ಲೇ ಪ್ರೇಯಸಿ ದೀಪ್ತಿ ಸುನೈನಾಗೆ ಶಾಕ್​ ಕೊಟ್ಟ ಷಣ್ಮುಖ​ ಜಸ್ವಂತ್!​

    ಬಿಗ್​ಬಾಸ್​ ಮನೆಯೊಳಗೆ ರೋಮ್ಯಾನ್ಸ್​! ಫೇಮಸ್​ ಯೂಟ್ಯೂಬರ್​ ಪ್ರೀತಿಗೆ ಗುಡ್​ ಬೈ ಹೇಳಿದ ನಟಿ ದೀಪ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts