More

    ರೈಲು ಬರುತ್ತಿದ್ದರೂ ಮುಚ್ಚದ ಕ್ರಾಸಿಂಗ್​ ಗೇಟ್​: ವಾಹನಗಳಿಗೆ ಡಿಕ್ಕಿ, ಐವರ ದಾರುಣ ಸಾವು

    ಶಹಜಹಾನಪುರ: ರೈಲು ಬರುವ ಸಮಯದಲ್ಲಿ ಕ್ರಾಸಿಂಗ್​ ಗೇಟ್​ ಮುಚ್ಚದ ಪರಿಣಾಮ ಕೆಲ ವಾಹನಗಳಿಗೆ ರೈಲು ಡಿಕ್ಕಿಯಾಗಿ ಐದು ಮಂದಿ ದಾರುಣವಾಗಿ ಸಾವಿಗೀಡಾಗಿರುವ ಘಟನೆ ಉತ್ತರ ಪ್ರದೇಶದ ಶಹಜಹಾನಪುರದಲ್ಲಿ ನಡೆದಿದೆ.

    ಘಟನೆಯಲ್ಲಿ ಅನೇಕರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಘಟನೆ ಬಗ್ಗೆ ಮಾತನಾಡಿರುವ ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ (ಗ್ರಾಮಾಂತರ) ಸಂಜೀವ್​ ಬಜ್ಪಾಯ್​, ಲಖನೌ-ಚಂಡೀಗಢದ ಸೂಪರ್​ಫಾಸ್ಟ್​ ವಾಹನಗಳಿಗೆ ಡಿಕ್ಕಿಯಾಗಿ ಹಳಿತಪ್ಪಿತು. ಇದರಿಂದ ಟ್ರಾಫಿಕ್​ ಜಾಮ್​ ಉಂಟಾಗಿದ್ದಲ್ಲದೆ, ಎರಡು ದಿಕ್ಕಿನ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು ಎಂದು ತಿಳಿಸಿದ್ದಾರೆ.

    ಇದನ್ನೂ ಓದಿರಿ: ಫನ್​ ಬಕೆಟ್​ ಭಾರ್ಗವನೊಂದಿಗಿನ ಸಂಬಂಧ ಬಿಚ್ಚಿಟ್ಟು ಭಾವುಕಳಾದ ಓ ಮೈ ಗಾಡ್​ ಗರ್ಲ್​ ನಿತ್ಯಾ..!

    ಮೀರನಾಪುರ್​ ಕರ್ತಾ ರೈಲು ನಿಲ್ದಾಣವನ್ನು ಇಂದು ಬೆಳಗ್ಗೆ ದಾಟಿದ ಬೆನ್ನಲ್ಲೇ ಈ ಘಟನೆ ನಡೆದಿದೆ. ಕ್ರಾಸಿಂಗ್​ನಲ್ಲಿ ಯಾವುದೇ ಗೇಟ್​ ಬಾಗಿಲು ಮುಚ್ಚದೇ ಇದ್ದಿದ್ದರಿಂದ ಅಡ್ಡಲಾಗಿ ಬಂದ ವಾಹನಗಳಿಗೆ ರೈಲು ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ.

    ಮೃತಪಟ್ಟ ಐವರು ಮೂವರು ಒಂದೇ ಕುಟುಂಬಕ್ಕೆ ಸೇರಿದವರು. ಗೇಟ್​ ಯಾಕೆ ಮುಚ್ಚಲಿಲ್ಲ ಎಂಬುದರ ಕುರಿತು ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬೆನ್ನಲ್ಲೇ ಪ್ರತಿಕ್ರಿನೆ ನೀಡಿರುವ ಸಿಎಂ ಯೋಗಿ ಆದಿತ್ಯನಾಥ್​ ಮೃತಪಟ್ಟವರಿಗೆ ಸಂತಾಪ ಸೂಚಿಸಿ, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. (ಏಜೆನ್ಸೀಸ್​)

    18 ವರ್ಷ ಮೇಲ್ಪಟ್ಟವರಿಗೆ ಕರೊನಾ ಲಸಿಕಾ ನೋಂದಣಿ ಏಪ್ರಿಲ್ 24ರಿಂದ ಆರಂಭ: ಪ್ರಕ್ರಿಯೆ ಹೀಗಿದೆ..

    ಜಿಲ್ಲಾ ಕೋರ್ಟ್‌ನಲ್ಲಿ ಎಸ್‌ಎಸ್‌ಎಲ್‌ಸಿ ಆದವರಿಂದ ಅರ್ಜಿ ಆಹ್ವಾನ- 34 ಹುದ್ದೆಗಳು ಖಾಲಿ… ‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts