More

    ಹಿರಿಯ ನಟ ಸತ್ಯಜಿತ್ ಸಾವಿನ ಬಗ್ಗೆ ಪುತ್ರನ ನೋವಿನ ಮಾತು: ಸಾಮಾಜಿಕ ಜಾಲತಾಣದ ಮೇಲೆ ಬೇಸರ..!

    ಬೆಂಗಳೂರು: ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್​ (72) ಅವರು ತಡರಾತ್ರಿ 2 ಗಂಟೆ ಸಮಯದಲ್ಲಿ ಬೆಂಗಳೂರಿನ ಬೌರಿಂಗ್​ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ತಂದೆಯ ಸಾವಿನ ಬಗ್ಗೆ ಮಾತನಾಡಿರುವ ಪುತ್ರ ಪ್ರಕಾಶ್​, ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ನನ್ನ ತಂದೆ ಮೃತಪಟ್ಟಿದ್ದಾರೆಂದು ನಿನ್ನೆಯೇ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿತ್ತು. ಅದೆಲ್ಲ ಸುಳ್ಳು. ತಡರಾತ್ರಿಯವರೆಗೂ ನಮ್ಮ ತಂದೆ ಐಸಿಯುನಲ್ಲಿ ಇದ್ದರು. ಸುಮಾರು 2 ಗಂಟೆ ಸಮಯದಲ್ಲಿ ತಂದೆ ಕೊನೆಯುಸಿರೆಳೆದಿದ್ದಾಗಿ ಹಿರಿಯ ವೈದ್ಯರು ಮಾಹಿತಿ ನೀಡಿದರು. ಆದರೆ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದಂತೆ ನಿನ್ನೆಯೇ ನಮ್ಮ ತಂದೆ ಮೃತಪಟ್ಟಿಲ್ಲ. ಈ ರೀತಿ ತಪ್ಪು ಮಾಹಿತಿಯನ್ನು ದಯವಿಟ್ಟು ಕೊಡಬೇಡಿ. ತಪ್ಪು ಮಾಹಿತಿಯಿಂದಾಗಿ ನಿನ್ನೆ ನಮ್ಮ ತಾಯಿ ಭಯಪಟ್ಟುಕೊಂಡರು. ಇಡೀ ನಮ್ಮ ಕುಟುಂಬಸ್ಥರು, ಸಂಬಂಧಿಕರು ಮತ್ತು ಅಭಿಮಾನಿಗಳಿಗೂ ತುಂಬಾ ನೋವಾಗಿದೆ. ಈ ರೀತಿ ನಕಲಿ ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ಮನವಿ ಮಾಡಿಕೊಂಡರು.

    ಚಿತ್ರರಂಗದ ಸಾಕಷ್ಟು ಗಣ್ಯರು ಬಂದು ಹೋಗಿದ್ದಾರೆ ಮತ್ತು ಆಸ್ಪತ್ರೆಯಲ್ಲಿ ದಾಖಲಾಗಿದ್ದ ವೇಳೆ ಅನೇಕರು ಆರೋಗ್ಯ ವಿಚಾರಿಸಿದ್ದಾರೆಂದು ಮಗ ತಿಳಿಸಿದರು. ನಮ್ಮ ತಂದೆ ಒಳ್ಳೆಯ ಮನಸ್ಸಿನವರು. ನಮಗೆ ಯಾವುದರಲ್ಲೂ ಕೊರತೆ ಮಾಡಿಲ್ಲ. ಒಳ್ಳೆಯ ಶಿಕ್ಷಣ ಕೊಡಿಸಿದ್ದಾರೆ. ನಾನು ಕೂಡ ಕಲಾವಿದ ಆಗಬೇಕೆಂಬುದು ನನ್ನ ತಂದೆಯ ಕನಸಾಗಿತ್ತು ಎಂದು ತಿಳಿಸಿದರು.

    ಇಂದು ಮಧ್ಯಾಹ್ನ ಸತ್ಯಜಿತ್​ ಅವರ ಅಂತ್ಯಕ್ರಿಯೆ ನೆರವೇರಲಿದ್ದು, ಹೆಗ್ಡೆ ನಗರದ ಸತ್ಯಜಿತ್​ ಅವರ ಮನೆ ಸಮೀಪವೇ ಅವರ ಅಂತ್ಯಕ್ರಿಯೆ ನಡೆಯಲಿದೆ. ಸತ್ಯಜಿತ್ ಅವರ​ ಆರೋಗ್ಯ ಪರಿಸ್ಥಿತಿ ಗಂಭೀರವಾಗಿ ಕಳೆದ ಸೋಮವಾರ ಬೌರಿಂಗ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರನ್ನು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೇ ವಿಧಿವಶರಾಗಿದ್ದಾರೆ.

    ಗ್ಯಾಂಗ್ರಿನ್​ನಿಂದಾಗಿ ಅವರ ಒಂದು ಕಾಲು ಕತ್ತರಿಸಲಾಗಿತ್ತು. ಬಳಿಕ ಸಕ್ಕರೆ ಕಾಯಿಲೆ ಮತ್ತು ಇನ್ನಿತರೆ ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದರು. ಕಾಲಿನಲ್ಲಿ ಗ್ಯಾಂಗ್ರಿನ್​ ಕಾಣಿಸಿಕೊಂಡ ಬಳಿಕ ಸಿನಿಮಾ ರಂಗದಿಂದ ಅವರಿಗೆ ಬೇಡಿಕೆ ಕಡಿಮೆ ಆಯಿತು. ಬಳಿಕ ಕುಟುಂಬದ ಹಣಕಾಸಿನ ಸ್ಥಿತಿಯು ಉತ್ತಮವಾಗಿರಲಿಲ್ಲ. ಅಲ್ಲದೆ, ಮಗಳ ಮೇಲೆಯೂ ಸತ್ಯಜಿತ್​ ಅಸಮಾಧಾನವಾಗಿತ್ತು. ಕುಟುಂಬ ಮತ್ತು ಆರೋಗ್ಯ ಸಮಸ್ಯೆಗಳಿಂದ ಸತ್ಯಜಿತ್​ ತುಂಬಾ ಕೊರಗಿ ಹೋಗಿದ್ದರು.

    ಕನ್ನಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್​ ವಿಧಿವಶ

    Lakhimpur Kheri Case: ಕೇಂದ್ರ ಸಚಿವರ ಪುತ್ರ ಆಶಿಶ್​ ಮಿಶ್ರಾ ಬಂಧನಕ್ಕೆ ಕಾರಣವಾದ ಪ್ರಮುಖ 3 ಅಂಶಗಳಿವು..!

    ಥೂ, ಇವನೆಂಥಾ ಕಾಮುಕ? ಯುವಕನ ಮೇಲೇ ರೇಪ್​!

    ಬಂಟ್ವಾಳ ಗ್ಯಾಂಗ್​ರೇಪ್​ ಕೇಸ್​ಗೆ ಟ್ವಿಸ್ಟ್​: ಆರೋಪಿ ಜತೆ ಬಾಲಕಿಯ ಅಶ್ಲೀಲ ವಿಡಿಯೋ ಚಾಟ್​..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts