More

    VIDEO| ಎಲ್ಲರೆದುರು ಅಂಕಲ್​ ಎಂದು ಕರೆದಿದ್ದಕ್ಕೆ ಸಾರಾ ಅಲಿ ಖಾನ್​ಗೆ ಸಲ್ಮಾನ್​ ಕೊಟ್ಟ ಪ್ರತಿಕ್ರಿಯೆ ಹೀಗಿತ್ತು…

    ಮುಂಬೈ: ಬಾಲಿವುಡ್​ನ ಮೋಸ್ಟ್​ ಎಲಿಜಿಬಲ್​ ಬ್ಯಾಚುಲರ್ ಸಲ್ಮಾನ್​ ಖಾನ್​ರನ್ನು ಅಂಕಲ್​ ಎಂದು ಕರೆಯುವ ಮೂಲಕ ನಟಿ ಸಾರಾ ಅಲಿ ಖಾನ್​ ಕಾಲೆಳೆದಿರುವ ಐಐಎಫ್​ಎ ಅವಾರ್ಡ್ಸ್​ ಕಾರ್ಯಕ್ರಮದ ಪ್ರೋಮೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

    ಈ ಕಾರ್ಯಕ್ರಮ ಕಳೆದ ಶನಿವಾರ (ಜೂನ್​ 25) ರಾತ್ರಿ ಪ್ರಸಾರವಾಗಿದ್ದು, ಅದರ ಪ್ರೊಮೋ ಮಾತ್ರ ವೈರಲ್​ ಆಗುತ್ತಲೇ ಇರುತ್ತದೆ. ಕಲರ್ಸ್​ ಚಾನೆಲ್​ನ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಪ್ರೊಮೋ ಪೋಸ್ಟ್​ ಮಾಡಲಾಗಿದ್ದು, ಈವರೆಗೂ 1 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ.

    ವಿಡಿಯೋದಲ್ಲಿ ಏನಿದೆ?
    ವಿಡಿಯೋ ಆರಂಭದಲ್ಲಿ ಬ್ರ್ಯಾಂಡ್​ ಒಂದನ್ನು ಲಾಂಚ್​ ಮಾಡಬೇಕೆಂದು ಬಯಸಿದ್ದೇನೆ. ಅದು ಕೂಡ ಸಲ್ಮಾನ್​ ಅಂಕಲ್​ ಜೊತೆ ಎಂದು ಸಾರಾ ಅಲಿ ಖಾನ್​ ಹೇಳುತ್ತಾರೆ. ಇದಕ್ಕೆ ಪ್ರತಿಕ್ರಿಯಿಸುವ ಸಲ್ಮಾನ್​, ಇನ್ಮುಂದೆ ನಿನ್ನ ಸಿನಿಮಾ ಸೋಲುತ್ತದೆ ಎಂದು ನಗುನಗುತ್ತಲೇ ಸಾರಾ ಕಾಲೆಳೆಯುತ್ತಾರೆ. ಇದಕ್ಕೆ ಪ್ರತಿಯಾಗಿ ನನ್ನ ಸಿನಿಮಾ ಯಾಕೆ ಸೋಲುತ್ತದೆ ಎಂದು ಸಾರಾ ಪ್ರಶ್ನೆ ಮಾಡುತ್ತಾರೆ.

    ಸಾರಾ ಪ್ರಶ್ನೆಗೆ ಉತ್ತರಿಸುವ ಸಲ್ಮಾನ್​, ಎಲ್ಲರ ಮುಂದೆ ನನ್ನನ್ನು ಅಂಕಲ್​ ಅಂತಾ ಕರೆದೆಲ್ಲ ಅದಕ್ಕೆ ಎಂದು ಹೇಳುತ್ತಾರೆ. ಅದಕ್ಕೆ ಪ್ರತಿಕ್ರಿಯಿಸುವ ಸಾರಾ, ಅಂಕಲ್​ ಅಂತಾ ಕರೆಯಲು ನೀವೇ ಹೇಳಿದ್ದಲ್ಲವೇ ಎನ್ನುತ್ತಾರೆ. ಇದಾದ ಬಳಿಕ ಸಾರಾ ಮತ್ತು ಸಲ್ಮಾನ್​ ಒಟ್ಟಿಗೆ ತನ್​ ತನಾ ತನ್​ ತನ್​ ಹಾಡಿಗೆ ಹೆಜ್ಜೆ ಹಾಕುತ್ತಾರೆ.

    ಅಂದಹಾಗೆ ಐಐಎಫ್​ಎ ಕಾರ್ಯಕ್ರಮ ಅಬುಧಾಬಿಯಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ನಟರಾದ ವಿಕ್ಕಿ ಕೌಶಲ್, ಶಾಹಿದ್ ಕಪೂರ್ ಮತ್ತು ಅನನ್ಯಾ ಪಾಂಡೆ ಸೇರಿದಂತೆ ಹಲವಾರು ಬಾಲಿವುಡ್ ವ್ಯಕ್ತಿಗಳು ಹಾಜರಿದ್ದರು. (ಏಜೆನ್ಸೀಸ್​)

    ತನ್ನನ್ನು ತಾನೇ ಲೇಡಿ ಸಿಂಗಂ ಎಂದು ಕರೆದುಕೊಂಡು ಮಾಡಬಾರದ್ದನ್ನು ಮಾಡಿ ಸಿಕ್ಕಿಬಿದ್ದ ಸಬ್​​ ಇನ್ಸ್​ಪೆಕ್ಟರ್​! ​

    VIDEO: ಮಹಿಳೆ ಜೀವಕ್ಕೆ ಆಪತ್ತು ತರಲೆಂದೇ ಕಾಯುತ್ತಿತ್ತು ತೆಂಗಿನಕಾಯಿ! ಅಬ್ಬಬ್ಬಾ ಎನ್ನುವ ವಿಡಿಯೋ ವೈರಲ್​

    ಟಿ.ನರಸೀಪುರದಲ್ಲಿ ತಾಯಿ-ಮಕ್ಕಳ ದುರಂತ ಅಂತ್ಯ: ಬಾಳಿ ಬದುಕಬೇಕಿದ್ದವರನ್ನ ಸಾವಿನಕೂಪಕ್ಕೆ ದೂಡಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts