ಸಮಂತಾ-ನಾಗ ಚೈತನ್ಯ ದಾಂಪತ್ಯದಲ್ಲಿ ಬಿರುಕು ಮೂಡಿತಾ? ಜಾಲತಾಣದಲ್ಲಿ ದಿಢೀರ್​ ಶಾಕ್​ ಕೊಟ್ಟ ನಟಿ

Samantha New
Published on

ಹೈದರಾಬಾದ್​: ತಮಿಳು ಮತ್ತು ತೆಲುಗು ಚಿತ್ರರಂಗದ ಪ್ರಮುಖ ನಟಿಯರಲ್ಲಿ ಒಬ್ಬರಾದ ಸಮಂತಾ ಅಕ್ಕಿನೇನಿ ಮತ್ತೊಮ್ಮೆ ವೈಯಕ್ತಿಕ ವಿಚಾರವಾಗಿ ಸುದ್ದಿಯಾಗಿದ್ದಾರೆ. ತಮ್ಮ ಹೆಸರಿನ ಮುಂದೆ ಇದ್ದ​ ಅಕ್ಕಿನೇನಿ ಹೆಸರನ್ನು ತೆಗೆದಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಟ್ವಿಟರ್​ ಮತ್ತು ಇನ್​ಸ್ಟಾಗ್ರಾಂ ಖಾತೆಗಳನ್ನು ಅಕ್ಕಿನೇನಿ ಹೆಸರನ್ನು ತೆಗೆದುಹಾಕಿದ್ದು, ಫೇಸ್​ಬುಕ್​ನಲ್ಲಿ ಉಳಿಸಿಕೊಂಡಿದ್ದಾರೆ. ಸಮಂತಾ ಮತ್ತು ನಟ ನಾಗಚೈತನ್ಯ 2017ರಲ್ಲಿ ಸಪ್ತಪದಿ ತುಳಿದಿದ್ದಾರೆ.

ಸಮಂತಾ ಅವರು ಪ್ರಸ್ತುತ ನಿರ್ದೇಶಕ ಗುಣಶೇಖರ ನಿರ್ದೇಶನದ ಶಾಕುಂತಲಮ್​ ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಚಿತ್ರೀಕರಣಕ್ಕಾಗಿ ಹೈದರಾಬಾದ್​ನಲ್ಲಿ ಬೀಡುಬಿಟ್ಟಿದ್ದಾರೆ. ಇತ್ತೀಚೆಗಷ್ಟೇ ಚಿತ್ರತಂಡ ಅಲ್ಲು ಅರ್ಜುನ್​ ಮಗಳು ಅಲ್ಲು ಅರ್ಹರನ್ನು ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಅಲ್ಲು ಅರ್ಹ ಅವರು ಪ್ರಿನ್ಸ್​ ಭರತಾ ಪಾತ್ರವನ್ನು ಮಾಡುತ್ತಿದ್ದಾರೆ.

ಆದಾಗ್ಯೂ, ಸಮಂತಾ ಸಿನಿಮಾ ಹೊರತಾಗಿ ಇದೀಗ ಬೇರೆ ವಿಚಾರಕ್ಕೆ ಸುದ್ದಿ ಆಗಿದ್ದಾರೆ. ಸಮಂತಾ ಇನ್​ಸ್ಟಾಗ್ರಾಂ ಮತ್ತು ಟ್ವಿಟರ್ ಸದಾ ಸಕ್ರಿಯರಾಗಿರುತ್ತಾರೆ. ಇದೀಗ ಅಕ್ಕಿನೇನಿ ಹೆಸರನ್ನು ತೆಗೆದು ಹಾಕಿರುವುದು ವಿವಾದವನ್ನು ಹುಟ್ಟು ಹಾಕಿದೆ. ಸಮಂತಾ ಮತ್ತು ನಾಗ ಚೈತನ್ಯ ವೈವಾಹಿಕ ಜೀವನದಲ್ಲಿ ಬಿರುಕು ಬಿಟ್ಟಿದೆಯೇ ಎಂಬ ಊಹಾಪೋಹಾ ಹರಿದಾಡತೊಡಗಿದೆ.

ಇನ್ನು ಸಮಂತಾ ಅವರು ಫೇಸ್​ಬುಕ್​ನಲ್ಲಿ ಅಕ್ಕಿನೇನಿ ಹೆಸರು ಹಾಗೇ ಉಳಿದುಕೊಂಡಿದ್ದಾರೆ. ಈಗ ಎದ್ದಿರುವ ಊಹಾಪೋಹಕ್ಕೆ ಸಮಂತಾ ಅವರೇ ಉತ್ತರಿಸಬೇಕಾಗಿದೆ. ಅಭಿಮಾನಿಗಳು ಸಹ ಸ್ಪಷ್ಟನೆ ನೀಡುವಂತೆ ನಟಿಯನ್ನು ಆಗ್ರಹಿಸಿದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಸಮಂತಾ ಪೌರಾಣಿಕಾ ಡ್ರಾಮಾ ಶಾಕುಂತಲಂ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಲ್ಲು ಅರ್ಹಾ ಮತ್ತು ದೇವ್​ ಮೋಹನ್​ ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇದರೊಂದಿಗೆ ವಿಘ್ನೇಶ್​ ಶಿವನ್​ ನಿರ್ದೇಶನದ ವಿಜಯ್​ ಸೇತುಪತಿ ಹಾಗೂ ನಯನತಾರ ಅಭಿನಯದ ಕಾಥುವಾಕುಲಾ ರೆಂಡು ಕಾದನ್​ ಹೆಸರಿನ ತಮಿಳು ಚಿತ್ರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಇಷ್ಟೇ ಅಲ್ಲದೆ, ಗೇಮ್​ ಓವರ್​ ಚಿತ್ರದ ನಿರ್ದೇಶಕ ಅಶ್ವಿನ್​ ಸರವಣನ್​ ಅವರ ಹೆಸರಿಡದ ಹಾರರ್​ ಚಿತ್ರದಲ್ಲೂ ನಟಿಸಲಿದ್ದಾರೆ. ಒಟ್ಟಾರೆ ಸಾಲು ಸಾಲು ಚಿತ್ರಗಳಲ್ಲಿ ಸಮಂತಾ ಬಿಜಿಯಾಗಿದ್ದಾರೆ. ಇದರ ನಡುವೆ ಈಗ ಎದ್ದಿರುವ ವಿವಾದಕ್ಕೆ ಏನು ಪ್ರತಿಕ್ರಿಯಿಸುತ್ತಾರೆ ಅಂತಾ ಕಾದು ನೋಡಬೇಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net