More

    ಜಾಲತಾಣದಲ್ಲಿ ವಿದ್ಯಾರ್ಥಿ ಹಾಕಿದ್ದ ಪೋಸ್ಟ್​ ಓದುತ್ತಾ ಕಾಲೇಜು ವೇದಿಕೆಯಲ್ಲೇ ಕಣ್ಣೀರಾಕಿದ ಶಾಸಕ ಸಾರಾ ಮಹೇಶ್​

    ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಶಾಸಕರ ಕಾರ್ಯ ವೈಖರಿ ಪ್ರಶ್ನೆ ಮಾಡಿದ ಹಿನ್ನೆಲೆಯಲ್ಲಿ ಕಾಲೇಜು ವೇದಿಕೆಯಲ್ಲಿ ಮಾಜಿ ಸಚಿವ ಹಾಗೂ ಜೆಡಿಎಸ್​ ಶಾಸಕ ಸಾರಾ ಮಹೇಶ್​ ಕಣ್ಣೀರು ಹಾಕಿದರು.

    ಕಾಲೇಜು ಕಟ್ಟಡ ಉದ್ಘಾಟನೆ ವಿಚಾರವಾಗಿ ವಿದ್ಯಾರ್ಥಿಯೊರ್ವ ಸಾಮಾಜಿಕ ಜಾಲತಾಣದಲ್ಲಿ ಅವಹೇಳಕಾರಿಯಾಗಿ ಪೋಸ್ಟ್ ಹಾಕಿದ್ದ. ಇಂದು ಕೆ.ಆರ್​. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉದ್ಘಾಟಿಸಿದ ಬಳಿಕ ಕಾರ್ಯಕ್ರಮದಲ್ಲಿ ನರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡುವಾಗ ವಿದ್ಯಾರ್ಥಿ ಹಾಕಿದ್ದ ಪೋಸ್ಟ್​ ಓದುತ್ತಾ ವೇದಿಕೆಯಲ್ಲೇ ಸಾರಾ ಮಹೇಶ್​ ಕಣ್ಣೀರು ಸುರಿಸಿದರು.

    ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ರು ಯಾಕೆ ಈ ರೀತಿ ಮಾತನಾಡುತ್ತೀರಾ ಎಂದು ಪ್ರಶ್ನೆ ಮಾಡಿದರು. ಅಲ್ಲದೆ, ಪೋಸ್ಟ್​ ಹಾಕಿದ್ದ ವಿದ್ಯಾರ್ಥಿಗೆ ಎಚ್ಚರಿಕೆಯನ್ನು ನೀಡಿದರು. ಇಂತಹ ಆಯ್ಯೋಗನನ್ನು ಇಟ್ಟುಕೊಂಡಿದ್ದೀರಿಲ್ಲ ಎಂದು ಪ್ರಾಂಶುಪಾಲರನ್ನು ಗದರಿದರು. ನಾನು ಮನಸ್ಸು ಮಾಡಿದ್ರೆ ಅಮಾನತು ಮಾಡಿಸುತ್ತಿದೆ. ಆದರೆ, ನಮ್ಮ ಅಪ್ಪ-ಅಮ್ಮ ನನಗೆ ಸಂಸ್ಕಾರ ಕಲಿಸಿದ್ದಾರೆ. ನಾನು ನಿಮ್ಮ ಜಾತಿಯವನ್ನಲ್ಲ ಎಂಬ ಕಾರಣಕ್ಕೆ ಕೆಟ್ಟ ಪದ ಉಪಯೋಗಿಸಿದ್ದೀರಾ, ನನಗೂ ಸ್ವಾಭಿಮಾನ ಇದೆ ಎಂದರು.

    ಪ್ರತಿ ನಿತ್ಯ ಟಿಫನ್ ಬಾಕ್ಸ್ ತೆಗೆದುಕೊಂಡು ಹೋಗಿ ವಿದ್ಯಾರ್ಥಿಗಳ ರೀತಿ ಕೆಲಸ ಮಾಡುತ್ತಿದ್ದೇನೆ. ಇಷ್ಟೆಲ್ಲಾ ಕೆಲಸ ಮಾಡಿದ್ದರೂ ಈ ರೀತಿ ಹೇಳುತ್ತೀರಲ್ಲ, ನಿಮಗೆ ಮನಸಾಕ್ಷಿ ಇಲ್ವಾ? ಇಂತಹ ವ್ಯವಸ್ಥೆಯಲ್ಲಿ ರಾಜಕಾರಣ ಮಾಡಬೇಕಾ? ಇವರು ವಿದ್ಯಾರ್ಥಿಗಳಾ? ನಾಚಿಕೆಯಾಗಬೇಕು. ಬೇಕಾದರೆ, ಹೋರಾಟ ಮಾಡಲಿ ನನಗೇನೂ ಬೇಸರ ಇಲ್ಲ ಎಂದರು.

    ನಾನು ನಿಮಗೆ ಏನು ಅನ್ಯಾಯ ಮಾಡಿದ್ದೇನೆ? ಜಿಲ್ಲಾ ಪಂಚಾಯಿತಿಯಲ್ಲಿ‌ ಮೂರು ಬಾರಿ ಗೆದ್ದು ಏನೇನು ಮಾಡಿದ್ದಾನೆ ಅಂತಾ ಅವನನ್ನೇ ಕೇಳು ಹೋಗಿ ಎನ್ನುವ ಮೂಲಕ ಪರೋಕ್ಷವಾಗಿ‌ ಕಾಂಗ್ರೆಸ್ ಮುಖಂಡ ಡಿ.ರವಿ‌ಶಂಕರ್ ವಿರುದ್ಧ ವಾಗ್ದಾಳಿ ನಡೆಸಿದರು. ವಿದ್ಯಾರ್ಥಿಯನ್ನು ಉದ್ದೇಶಿಸಿ ನನಗೂ ಇವನಷ್ಟುದ್ದ ಮಗನಿದ್ದಾನೆ. ಮೊದಲನೆಯವನು ಅಮ್ಮನ ರೀತಿ ಒಳ್ಳೆಯವನು. ಎರಡನೆಯವನು ನನ್ ಥರಾ ಕೆಟ್ಟವನು. ನನಗೆ ಬೈಯಿರಿ. ಆದರೆ, ನನ್ನ ತಾಯಿಗೆ ಬೈದ್ರೆ ಚೆನ್ನಾಗಿರಲ್ಲ. ಚೆನ್ನಾಗಿ ಓದಿ. ಈ ರೀತಿ ಸಂಸ್ಕಾರ ಇರುವವರಿಂದನೇ ಇತರೇ ಸಮೂದಾಯದ ಪುಣ್ಯತ್ಮಾರು ಕೂಡ ನನ್ನನ್ನು ಮೂರು ಬಾರಿ ಗೆಲ್ಲಿಸಿದ್ದಾರೆ. ಎಷ್ಟು ನೋಯಿಸಿದ್ರು ಅಷ್ಟೇ ಪುಣ್ಯತ್ಮರು ನನ್ನ ಕೈ ಹಿಡಿತಾರೆ. ನಿನ್ನಂತವರು ಎಷ್ಟು ಬೊಗಳಿದ್ರು ನಾನು ಏನು ಆಗಲ್ಲ. ನಾನು ಹುಟ್ಟುತಲ್ಲೇ ಶ್ರೀಮಂತ ಅಲ್ಲ, ಸೈಕಲ್ ಹೊಡ್ಕೊಂಡೆ ಬೆಳದದ್ದು. ದೇವರು‌ ನನ್ನ ಚೆನ್ನಾಗಿ ಇಟ್ಟಿದ್ದಾನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದ ವಿದ್ಯಾರ್ಥಿಯನ್ನು ತರಾಟೆಗೆ ತೆಗೆದುಕೊಂಡರು.

    ವಿದ್ಯಾರ್ಥಿಗಳು ತಮ್ಮ ಸೈಕಲ್ ಮತ್ತು ಸ್ಕೂಟರ್​ಗಳನ್ನ ಸ್ಟ್ಯಾಂಡ್​ ನಲ್ಲೇ ನಿಲ್ಲಿಸಬೇಕು. ಕಾಲೇಜಿನ ಕಾರಿಡಾರಿನಲ್ಲಿ ಕಂಡ್ರೆ ನೀವು ಹುಬ್ಬಳ್ಳಿ ಅಥವಾ ಧಾರವಾಡದಲ್ಲಿ ಇರುತ್ತೀರಾ ಎಂದು ವೇದಿಕೆಯಲ್ಲೇ ಪ್ರಾಂಶುಪಾಲರಿಗೆ ಸಾರಾ ಮಹೇಶ್​ ಎಚ್ಚರಿಕೆ ನೀಡಿದರು. ಮೊದಲು ಮಕ್ಕಳಿಗೆ ಶಿಸ್ತು ಕಲಿಸಿ ಎಂದು ಸಲಹೆ ನೀಡಿದರು. (ದಿಗ್ವಿಜಯ ನ್ಯೂಸ್​)

    ಗುಮಾಸ್ತನ​ ಮನೆಯಲ್ಲಿ ಕಂತೆ ಕಂತೆ ಹಣ: ಅಧಿಕಾರಿಗಳು ದಾಳಿ ಮಾಡ್ತಿದ್ದಂತೆ ವಿಷ ಕುಡಿದ ಸರ್ಕಾರಿ ನೌಕರ!​

    ಗರ್ಭಿಣಿಯಾಗಿದ್ದರೂ ಕೆಲಸದಲ್ಲಿ ಬಿಜಿ; ಕೆಲಸ ಮಾಡಿದರಷ್ಟೇ ಆಲಿಯಾಗೆ ನೆಮ್ಮದಿಯಂತೆ..

    ಏಕ ಚೀನಾ ನೀತಿ, ತೈವಾನ್​ಗೆ ಫಜೀತಿ; ಬಲಾಢ್ಯ ದೇಶಗಳ ನಡುವೆ ಬಿಕ್ಕಟ್ಟು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts