More

    ರಷ್ಯಾಗೆ ಭೇಟಿ ನೀಡಿದ ಪಾಕ್​ ಪ್ರಧಾನಿ: ರಷ್ಯಾ-ಯೂಕ್ರೇನ್​ ಯುದ್ಧವನ್ನು ರೋಮಾಂಚನಾಕಾರಿ ಎಂದ ಇಮ್ರಾನ್​ ಖಾನ್​

    ಮಾಸ್ಕೋ: ಯೂಕ್ರೇನ್​ ವಿರುದ್ಧ ಸಮರ ಸಾರಿ ರಷ್ಯಾ ರಣಾಂಗಣಕ್ಕೆ ಇಳಿದಿರುವ ಸಮಯದಲ್ಲೇ ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್​ ರಷ್ಯಾಗೆ ಮೊದಲ ಬಾರಿಗೆ ಭೇಟಿ ನೀಡಿದ್ದು, ಇಂತಹ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡಿರುವುದು ತುಂಬಾ ರೋಮಾಂಚನಕಾರಿಯಾಗಿದೆ ಎಂದು ವರ್ಣಿಸಿದ್ದಾರೆ.

    ಎಂಥಾ ಸಮಯವಿದು ನಾನು ಉತ್ಸಾಹದಿಂದಲೇ ಇಲ್ಲಿಗೆ ಬಂದಿದ್ದೇನೆ ಎಂದು ರಷ್ಯಾಗೆ ಲ್ಯಾಂಡ್​ ಆದ ಬೆನ್ನಲ್ಲೇ ಅಲ್ಲಿನ ಅಧಿಕಾರಿಗಳಿಗೆ ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

    ಬುಧವಾರ ಪಾಕಿಸ್ತಾನದಿಂದ ಹೊರಟ ಇಮ್ರಾನ್​ ಖಾನ್ ರಷ್ಯಾ ತಲುಪಿದ್ದು, ಎರಡು ದಿನಗಳ ರಷ್ಯಾ ಪ್ರವಾಸ ಕೈಗೊಂಡಿದ್ದಾರೆ. ಇದೇ ಮೊದಲ ಬಾರಿಗೆ ರಷ್ಯಾ ಪ್ರವಾಸ ಕೈಗೊಂಡಿದ್ದಾರೆ. ಅಧ್ಯಕ್ಷ ವ್ಲಾದಿಮಿರ್​ ಪುತಿನ್​ ಭೇಟಿಯಾಗಲಿರುವ ಇಮ್ರಾನ್​ ಖಾನ್​, ದ್ವಿಪಕ್ಷೀಯ ಸಂಬಂಧ ಬಲವರ್ಧನೆ ಮತ್ತು ಶಕ್ತಿ ವಲಯದಲ್ಲಿ ಸಹಕಾರ ಕುರಿತು ಮಾತುಕತೆ ನಡೆಸಲಿದ್ದಾರೆ.

    ಯುಎಸ್​ ಅಧ್ಯಕ್ಷ ಜೋ ಬೈಡೆನ್​ ಮತ್ತು ಇತೆರೆ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾ ಮೇಲೆ ಆರ್ಥಿಕ ನಿರ್ಬಂಧಗಳನ್ನು ಹೇರಿರುವ ಬೆನ್ನಲ್ಲೇ ಪಾಕ್​ ಪ್ರಧಾನಿ ರಷ್ಯಾಗೆ ಭೇಟಿ ನೀಡಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೆ, ರಷ್ಯಾದ ಚಲನಾವಲನಗಳ ಮೇಲೆ ಇಡೀ ಜಗತ್ತು ಕಣ್ಣಿಟ್ಟಿದೆ.

    ಇಂದು ಯೂಕ್ರೇನ್​ ವಿರುದ್ಧ ಯುದ್ಧ ಘೋಷಿಸಿ ಮಾತನಾಡಿದ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್, ಯೂಕ್ರೇನ್ ಅನ್ನು ವಶಪಡಿಸಿಕೊಳ್ಳುವುದು ನಮ್ಮ ಉದ್ದೇಶವಲ್ಲ. ಈ ಸೇನಾ ಕಾರ್ಯಾಚರಣೆಯು ಯೂಕ್ರೇನ್​ ಅನ್ನು ಸೈನ್ಯೀಕರಣಗೊಳಿಸಲು ಪ್ರಯತ್ನಿಸುತ್ತದೆ ಮತ್ತು ಯೂಕ್ರೇನ್ ಬೆದರಿಕೆಗಳಿಗೆ ಪ್ರತಿಕ್ರಿಯೆಯಾಗಿ ಬಂದಿದೆ ಎಂದು ಹೇಳಿದ್ದಾರೆ.

    ರಷ್ಯಾ ಮತ್ತು ಯೂಕ್ರೇನಿಯನ್ ಪಡೆಗಳ ನಡುವಿನ ಘರ್ಷಣೆಗಳು ಸದ್ಯ ಅನಿವಾರ್ಯ ಎಂದಿರುವ ಪುತಿನ್, ಯೂಕ್ರೇನಿಯನ್ ಸೇವಾ ಸದಸ್ಯರಿಗೆ ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮನೆಗೆ ಹೋಗುವಂತೆ ಕರೆ ನೀಡಿದ್ದಾರೆ. ಈ ವಿಚಾರದಲ್ಲಿ ಹೊರಗಿನಿಂದ ಹಸ್ತಕ್ಷೇಪ ಮಾಡುವವರಿಗೂ ಎಚ್ಚರಿಕೆಯ ಸಂದೇಶವನ್ನು ಪುತಿನ್​ ರವಾನಿಸಿದ್ದಾರೆ. ಯಾರಾದರೂ ಹಸ್ತಕ್ಷೇಪ ಮಾಡಿದರೆ, ಇತಿಹಾಸದಲ್ಲೇ ಎಂದಿಗೂ ಎದುರಿಸದ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಈ ಸಂಬಂಧಿತ ಎಲ್ಲ ನಿರ್ಧಾರಗಳನ್ನು ಈಗಾಗಲೇ ತೆಗೆದುಕೊಳ್ಳಲಾಗಿದೆ. ನಾನು ಹೇಳುವುದನ್ನು ನೀವು ಕೇಳುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

    ಯೂಕ್ರೇನ್ ನ್ಯಾಟೋಗೆ ಸೇರುವುದನ್ನು ತಡೆಯಲು ಮತ್ತು ಮಾಸ್ಕೋ ಭದ್ರತಾ ಖಾತರಿಗಳನ್ನು ನೀಡುವ ರಷ್ಯಾದ ಬೇಡಿಕೆಯನ್ನು ಯುಎಸ್ ಮತ್ತು ಅದರ ಮಿತ್ರರಾಷ್ಟ್ರಗಳು ನಿರ್ಲಕ್ಷಿಸುತ್ತಿವೆ ಎಂದು ಪುತಿನ್​ ಆರೋಪ ಮಾಡಿದ್ದಾರೆ. (ಏಜೆನ್ಸೀಸ್​)

    ಯೂಕ್ರೇನ್​ ವಿರುದ್ಧ ರಷ್ಯಾ ಯುದ್ಧ: ಭಾರತದಲ್ಲಿ ತುಟ್ಟಿಯಾದ ಚಿನ್ನ, ಇಂಧನ ದರ ಏರಿಕೆ ಸಾಧ್ಯತೆ

    ‘ಅಮ್ಮ’ನಾಗುವ ಮೊದಲೇ ಇಹಲೋಕ ತ್ಯಜಿಸಿದ ಆರ್​ಜೆ ರಚನಾ: ಮಗುವನ್ನು ದತ್ತು ಪಡೆಯಲು ಯೋಚಿಸಿದ್ದ ನಟಿ

    ಅಳಿಯನ ಕೊಲೆ ಮಾಡಿ ಗರ್ಭಿಣಿ ಮಗಳ ಬಾಳಿಗೆ ಕೊಳ್ಳಿ ಇಟ್ಟ ಮಾಜಿ ಕಾರ್ಪೋರೇಟರ್​ ಪೊಲೀಸರ ಬಲೆಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts