More

    ಸತತ 8ನೇ ಬಾರಿ ರೆಪೋ ದರದಲ್ಲಿ ಯಥಾಸ್ಥಿತಿ: IMPS ವಹಿವಾಟಿನ ಮಿತಿ 2 ರಿಂದ 5 ಲಕ್ಷಕ್ಕೆ ಹೆಚ್ಚಿಸಿದ RBI

    ನವದೆಹಲಿ: ಮುಂದಿನ ಆರ್ಥಿಕ ಚೇತರಿಕೆಗೆ ನೆರವಾಗಲು ಹೊಂದಾಣಿಕೆಯ ನಿಲುವಿನೊಂದಿಗೆ ಭಾರತೀಯ ರಿಸರ್ವ್​ ಬ್ಯಾಂಕ್​ (ಆರ್​ಬಿಐ) ಪ್ರಮುಖ ಬಡ್ಡಿದರಗಳನ್ನು ಯಥಾಸ್ಥಿತಿ ಕಾಯ್ದಿರಿಸಿಕೊಂಡಿದೆ.

    ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಶೇ 4 ರಲ್ಲಿ ಮುಂದುವರಿಸಿರುವ ಆರ್​ಬಿಐ ಹಣಕಾಸು ನೀತಿ ಸಮಿತಿ, ರಿವರ್ಸ್​ ರೆಪೋ ದರವನ್ನು ಕೂಡ ಶೇ. 3.35ರೊಂದಿಗೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಈ ಮೂಲಕ ಸತತ ಎಂಟನೇ ಬಾರಿಗೆ ರೆಪೋ ದರದಲ್ಲಿ ಯಾವುದೇ ಬದಲಾವಣೆಯನ್ನು ಆರ್​ಬಿಐ ಮಾಡಿಲ್ಲ.

    ಆರು ಸದಸ್ಯರನ್ನೊಳಗೊಂಡ ಹಣಕಾಸು ನೀತಿ ಸಮಿತಿ (ಎಂಪಿಸಿ)ಯ ಜತೆ ಮೂರು ದಿನಗಳ ಸಭೆ ನಡೆಸಿದ ಬಳಿಕ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೊಸ ಹಣಕಾಸು ನೀತಿಯನ್ನು ಶುಕ್ರವಾರ ಘೋಷಿಸಿದರು. ಬೆಳವಣಿಗೆಯನ್ನು ಉಳಿಸಿಕೊಳ್ಳಲು ಮತ್ತು ಕೋವಿಡ್ ಬಿಕ್ಕಟ್ಟಿನ ಪರಿಣಾಮವನ್ನು ತಗ್ಗಿಸಲು ಮೂಲಸೌಕರ್ಯ ನೀತಿಯನ್ನು ಮುಂದುವರಿಸಲು ಎಂಪಿಸಿ ನಿರ್ಧರಿಸಿರುವುದಾಗಿ ಮಾಹಿತಿ ನೀಡಿದರು.

    ಭಾರತೀಯ ಆರ್ಥಿಕತೆಯು ಚೇತರಿಕೆ ಪಡೆಯುತ್ತಿದ್ದು, ಕಳೆದ ಎಂಪಿಸಿ ಸಭೆಗಿಂತ ಉತ್ತಮ ಸ್ಥಿತಿಯಲ್ಲಿದೆ ಎಂದು ಶಕ್ತಿಕಾಂತ ದಾಸ್ ಹೇಳಿದರು. ಕೋವಿಡ್ -19 ಸಾಂಕ್ರಾಮಿಕದ ಆರಂಭದಿಂದಲೂ ಆರ್‌ಬಿಐ 100 ಕ್ಕೂ ಹೆಚ್ಚು ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದರು. ಹಣದುಬ್ಬರದ ಪಥವು ನಿರೀಕ್ಷೆಗಿಂತ ಉತ್ತಮವಾಗಿದೆ ಎಂದರು.

    ಪ್ರಸ್ತುತ 2021-22ರ ಆರ್ಥಿಕ ವರ್ಷದಲ್ಲಿ ಭಾರತವು 9.5 ಶೇಕಡಾ ಜಿಡಿಪಿಯನ್ನು ಸಾಧಿಸುವ ಹಾದಿಯಲ್ಲಿದೆ ಎಂದು ಆರ್​ಬಿಐ ಗವರ್ನರ್​ ತಿಳಿಸಿದರು. ಗ್ರಾಹಕರ ಅನುಕೂಲಕ್ಕಾಗಿ IMPS (ತಕ್ಷಣದ ಪಾವತಿ ಸೇವೆ) ವಹಿವಾಟಿನ ಮಿತಿಯನ್ನು 2 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಿದೆ. (ಏಜೆನ್ಸೀಸ್​)

    500, 2000 ರೂ. ನೋಟಿನಲ್ಲಿರುವ ಗಾಂಧಿಯ ಫೋಟೋ ತೆಗೆಯಲು ಕಾಂಗ್ರೆಸ್​ ಶಾಸಕನ ಮನವಿ: ಕಾರಣ ಹೀಗಿದೆ..!

    ನದಿಯಲ್ಲಿ ವೃದ್ಧನ ಶವ ತರಲು ಹೋದ ಮೂವರ ಪ್ರಾಣವನ್ನೂ ಹೊತ್ತೊಯ್ದ ಜವರಾಯ! ಬೆಚ್ಚಿಬೀಳಿಸುತ್ತೆ ಈ ಘಟನೆ

    ಮನೆ ಖಾಲಿ ಇದೆ ಎಂಬ ಫಲಕವೇ ಇವರ ಬಂಡವಾಳ: ಮಾಡಬಾರದನ್ನ ಮಾಡಿ ಸಿಕ್ಕಿಬಿದ್ದ ಪ್ರೇಮಿಗಳು..!

    ಟಿ20 ವಿಶ್ವಕಪ್​: ಭಾರತವನ್ನು ಸೋಲಿಸಿದ್ರೆ PCB ಮುಖ್ಯಸ್ಥರಿಗೆ ಸಿಗುವ ಆಫರ್ ಬಗ್ಗೆ​ ಕೇಳಿದ್ರೆ ದಂಗಾಗ್ತೀರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts