More

    ರಶ್ಮಿಕಾ ನೀವು ಮಾಡಿದ್ದು ಸರಿನಾ? ಗಣೇಶ ದರ್ಶನಕ್ಕೆ ಹೋದ ಚರಿಷ್ಮಾ ಸುಂದರಿಗೆ ನೆಟ್ಟಿಗರ ತರಾಟೆ!

    ಮುಂಬೈ: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಾಲ್ಕು ಚಿತ್ರರಂಗಗಳಲ್ಲಿ ಸಖತ್ ಬ್ಯೂಸಿಯಾಗಿದ್ದಾರೆ. ಸದ್ಯ, ಬಾಲಿವುಡ್​ನಲ್ಲಿ ಬೀಡುಬಿಟ್ಟಿರುವ ರಶ್ಮಿಕಾ ಸಿಕ್ಕಾಪಟ್ಟೆ ಹವಾ ಸೃಷ್ಟಿಸಿದ್ದಾರೆ. ಕಡಿಮೆ ಅವಧಿಯಲ್ಲಿಯೇ ಸ್ಟಾರ್​ ನಾಯಕಿ ಪಟ್ಟ ಗಿಟ್ಟಿಸಿಕೊಂಡ ಖ್ಯಾತಿ ರಶ್ಮಿಕಾಗೆ ಸಲ್ಲುತ್ತದೆ. ಅದು ಅವರ ಅದೃಷ್ಟವೂ ಹೌದು.

    ತಮಿಳು, ತೆಲುಗು ಮಾತ್ರವಲ್ಲದೆ, ಹಿಂದಿ ಚಿತ್ರರಂಗದಲ್ಲು ಸಾಲು ಸಾಲು ಸಿನಿಮಾಗಳಲ್ಲಿ ರಶ್ಮಿಕಾ ಅಭಿನಯಿಸುತ್ತಿದ್ದಾರೆ. ಈಗಾಗಲೇ ಮಿಷನ್​ ಮುಂಜು ಹಾಗೂ ಅಮಿತಾಭ್​ ಬಚ್ಚನ್​ ಜೊತೆಗಿನ ಗುಡ್​ ಬೈ ಚಿತ್ರವನ್ನು ಪೂರ್ಣಗೊಳಿಸಿದ್ದು, ಅದರ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಸಿನಿಮಾದಿಂದಾಚೆಗೆ ರಶ್ಮಿಕಾ, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುತ್ತಾರೆ. ಅಲ್ಲದೆ, ಆಗಾಗ ವಿವಿಧ ಕಾರಣಗಳಿಂದ ಟ್ರೋಲ್​ಗಳಿಗೆ ಗುರಿಯಾಗುತ್ತಿರುತ್ತಾರೆ. ಈ ಬಾರಿಯು ತಮ್ಮ ಬಟ್ಟೆ ವಿಚಾರಕ್ಕೆ ರಶ್ಮಿಕಾ ನೆಟ್ಟಿಗರ ಟ್ರೋಲ್​ ದಾಳಕ್ಕೆ ಸಿಲುಕಿದ್ದಾರೆ.

    ಬುಸಿನೆಸ್​ ದೃಷ್ಟಿಯಿಂದ ಸಿನಿಮಾದಲ್ಲಿ ಹಾಗೂ ಸಿನಿಮಾ ಪ್ರಚಾರದಲ್ಲಿ ನಟಿಯರು ಗ್ಲಾಮರಸ್​ ಉಡುಗೆ ತೊಡುವುದು ಸಾಮಾನ್ಯ. ಅದರಲ್ಲೂ ರಶ್ಮಿಕಾ ಮಂದಣ್ಣ ಯಾವುದೇ ಸಿನಿಮಾ ಈವೆಂಟ್​ನಲ್ಲಿ ಭಾಗವಹಿಸಿದರೂ ತುಂಬಾ ಫಿಟ್​ ಆದ, ಹೆಚ್ಚು ಗ್ಲಾಮರಸ್​ ಆಗಿ ಕಾಣುವ ಉಡುಗೆ ಧರಿಸುತ್ತಾರೆ. ಇದೇ ವಿಚಾರಕ್ಕೆ ಅನೇಕ ಬಾರಿ ಟ್ರೋಲ್​ ಸಹ ಆಗಿದ್ದಾರೆ.

    ರಶ್ಮಿಕಾ ಅವರ ಬಾಲಿವುಡ್​ನ ಮೊದಲ ಸಿನಿಮಾ ಗುಡ್​ಬೈ ಟೀಸರ್​ ಲಾಂಚ್​ ಕಾರ್ಯಕ್ರಮ ಇತ್ತೀಚೆಗಷ್ಟೇ ನಡೆಯಿತು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಶ್ಮಿಕಾ, ಬಿಕಿನಿ ಟಾಪ್​ ರೀತಿಯ ಬ್ಲೌಸ್​ ಹಾಗೂ ಉದ್ದವಾದ ಸ್ಕರ್ಟ್​ ಜೊತೆಗೆ ಉದ್ದವಾದ ಕೋಟ್​ ರೀತಿಯ ಬಟ್ಟೆಯನ್ನು ಧರಿಸಿ, ಗ್ಲಾಮರಸ್​ ಆಗಿ ಬಂದಿದ್ದರು. ಇಷ್ಟೇ ಆಗಿದ್ದರೆ ಏನು ಆಗುತ್ತಿರಲಿಲ್ಲ. ಆದರೆ. ಇದೇ ಉಡುಪು ಧರಿಸಿ, ರಶ್ಮಿಕಾ, ಮುಂಬೈನ ಗಣೇಶ ಪೆಂಡಾಲ್​ಗೆ ತೆರಳಿದ್ದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ರಶ್ಮಿಕಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ರಶ್ಮಿಕಾ ಅವರು ಮುಂಬೈನ ಲಾಲ್​ಬಾಗ್​ನಲ್ಲಿರುವ ಲಾಲ್​ಬಾಗ್ಚ್​ ರಾಜಾ ಗಣೇಶ ಪೆಂಡಾಲ್​ ತೆರಳಿದ್ದರು. ಗಣೇಶ ಹಬ್ಬ ಹಿನ್ನೆಲೆಯಲ್ಲಿ ಪ್ರತಿ ವರ್ಷ ಈ ಪ್ರದೇಶದಲ್ಲಿ ಗಣೇಶನನ್ನು ಕೂರಿಸಲಾಗುತ್ತದೆ. ಎಲ್ಲ ಸೆಲೆಬ್ರಿಟಿಗಳು ಅಲ್ಲಿಗೆ ಭೇಟಿ ನೀಡಿ ದರ್ಶನ ಪಡೆದುಕೊಳ್ಳುವುದು ವಾಡಿಕೆ. ಅದೇ ರೀತಿ ರಶ್ಮಿಕಾ ಭೇಟಿ ನೀಡಿದರು. ಆದರೆ, ಗ್ಲಾಮರಸ್​ ಬಟ್ಟೆ ಧರಿಸಿ ಬಂದಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ರಶ್ಮಿಕಾ ನೀವು ಮಾಡಿದ್ದು ಸರಿನಾ? ದೇವಸ್ಥಾನಗಳಿಗೆ ಬರುವಾಗ ಕೊಂಚ ಶಿಸ್ತು ಕಾಪಾಡಿಕೊಳ್ಳಬೇಕು. ಮೈಮಾಟ ಪ್ರದರ್ಶಿಸದೇ, ಮೈಮುಚ್ಚಿಕೊಳ್ಳುವ ಉಡುಗೆ ಧರಿಸುವ ಮೂಲಕ ಗೌರವದಿಂದ ನಡೆದುಕೊಳ್ಳಬೇಕು ಎಂದು ರಶ್ಮಿಕಾರಿಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ. (ಏಜೆನ್ಸಿಸ್​)

    ಹುಲಿಯೊಂದಿಗೆ ಕಾದಾಡಿದ ಮಹಾತಾಯಿ! ವ್ಯಾಘ್ರನ ದವಡೆಯಿಂದ ಮಗುವನ್ನು ರಕ್ಷಿಸಿದ್ದೇ ರೋಚಕ

    ATMನಲ್ಲಿ ಹಣ ಡ್ರಾ ಮಾಡುವಾಗ ಕೇಳಿಬಂತು ವಿಚಿತ್ರ ಶಬ್ದ: ಏನೆಂದು ತಿರುಗಿ ನೋಡಿದ ಮಹಿಳೆಗೆ ಕಾದಿತ್ತು ಶಾಕ್​

    ಗಂಟೆಗೆ 183 ಕಿ.ಮೀ ವೇಗದಲ್ಲಿ ವಂದೇ ಭಾರತ್ ರೈಲು ಚಾಲನೆ: ಲೋಟದಲ್ಲಿ ತುಂಬಿಟ್ಟಿದ್ದ ನೀರು ಏನಾಯ್ತು ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts