More

    ಮಹೇಶ್​ ಬಾಬು ಕರೊನಾದಿಂದ ಬಳಲುತ್ತಿರುವಾಗಲೇ ಅವರ ಮನೆಯಲ್ಲಿ ದುರಂತವೊಂದು ನಡೆದೇ ಹೋಗಿದೆ

    ಹೈದರಾಬಾದ್​: ಟಾಲಿವುಡ್​ ಸೂಪರ್​ ಸ್ಟಾರ್​ ಮಹೇಶ್​ ಬಾಬು ಮನೆಯಲ್ಲಿ ದುರಂತವೊಂದು ಸಂಭವಿಸಿದೆ. ಸೂಪರ್​ ಸ್ಟಾರ್​ ಕೃಷ್ಣ ಅವರ ಹಿರಿಯ ಮಗ ಹಾಗೂ ಮಹೇಶ್​ ಬಾಬು ಅವರ ಅಣ್ಣ ರಮೇಶ್​ ಬಾಬು (56) ಶನಿವಾರ ರಾತ್ರಿ 9 ಗಂಟೆಗೆ ನಿಧರಾಗಿದ್ದಾರೆ.

    ಕಳೆದ ಕೆಲವು ದಿನಗಳಿಂದ ರಮೇಶ್​ ಬಾಬು ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ಹೈದರಾಬಾದ್​ನ ಎಐಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಕಿತ್ಸೆಗೆ ಸ್ಪಂದಿಸಿದೇ ರಮೇಶ್​ ಬಾಬು ಕೊನೆಯುಸಿರೆಳೆದಿದ್ದಾರೆ.

    ರಮೇಶ್​ ಬಾಬು ಬಾಲ್ಯ ಕಲಾವಿದನಾಗಿ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದರು. ಹೀರೋ ಆಗಿಯು ಕೆಲ ಚಿತ್ರದಲ್ಲಿ ನಟಿಸಿದ್ದರು. ಬಳಿಕ ನಿರ್ಮಾಪಕರಾಗಿ ಸಿನಿಮಾ ರಂಗದಲ್ಲಿ ಸೇವೆ ಸಲ್ಲಿಸಿದ್ದರು. ರಮೇಶ್​ ಬಾಬು ತೆಲುಗು ಅಲ್ಲದೆ, ಹಿಂದಿ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.

    ಮಹೇಶ್​ ಬಾಬು ಅವರು ಕರೊನಾದಿಂದ ಬಳಲುತ್ತಿರುವಾಗಲೇ ಅವರ ಸಹೋದರನನ್ನು ಕಳೆದುಕೊಂಡಿರುವುದು ದುರಂತದ ಸಂಗತಿಯಾಗಿದೆ. ರಮೇಶ್​ ಬಾಬು ಅವರನ್ನು ನೋಡಲು ಬರುತ್ತಾರೆಯೇ ಎಂಬುದು ಅನುಮಾನವಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts