More

    ಮುರುಘಾ ಮಠಕ್ಕೆ ಭೇಟಿ ನೀಡಿದ ರಾಹುಲ್​ ಗಾಂಧಿಗೆ ಲಿಂಗದೀಕ್ಷೆ ನೀಡಿದ ಡಾ. ಶಿವಮೂರ್ತಿ ಮುರುಘಾ ಶರಣರು

    ಚಿತ್ರದುರ್ಗ: ಕರ್ನಾಟಕ ಪ್ರವಾಸದಲ್ಲಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಇಂದು ಬೆಳಗ್ಗೆ ಚಿತ್ರದುರ್ಗದ ಮುರುಘಾ ಮಠಕ್ಕೆ ಭೇಟಿ ನೀಡಿ ಡಾ.ಶಿವಮೂರ್ತಿ ಮುರುಘಾ ಶರಣರ ಆಶೀರ್ವಾದ ಪಡೆದರು.

    ಬೆಳಗ್ಗೆ 11 ಗಂಟೆಯ ಬಳಿಕ ಮಠಕ್ಕೆ ಆಗಮಿಸಿದ ರಾಹುಲ್ ಗಾಂಧಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡ ಮುರುಘಾ ಶರಣರು, ಲಿಂಗದೀಕ್ಷೆ ನೀಡಿ ಆಶೀರ್ವದಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ರಾಹುಲ್​ ಗಾಂಧಿ, ಲಿಂಗ ದೀಕ್ಷೆ ಬಗ್ಗೆ ಆಸಕ್ತಿ ಇದ್ದು, ಇದರ ಬಗ್ಗೆ ಮಾಹಿತಿ ಇರುವವರ ಬಳಿ ತಿಳಿದುಕೊಳ್ಳುವೆ ಎಂದರು.

    ಪರಸ್ಪರ ಉಭಯ ಕುಶಲೋಪರಿ ನಡೆಸಿದ ಬಳಿಕ ರಾಹುಲ್​ ಗಾಂಧಿ ಅವರು ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದರು. ಈ ವೇಳೆ ಮುರುಘಾ ಕೆ.ಸಿ.ವೇಣುಗೋಪಾಲ್​ ಹಾಗೂ ಡಿ.ಕೆ.ಶಿವಕುಮಾರ್ ಮತ್ತಿತರ ಗಣ್ಯರು ಸಾಥ್ ನೀಡಿದರು.

    ಚಿತ್ರದುರ್ಗ ಮುರುಘಾ ಮಠಕ್ಕೆ ರಾಹುಲ್ ಗಾಂಧಿ ಭೇಟಿ ಹಿನ್ನೆಲೆ ಮೊದಲೇ ಮಾತನಾಡಿದ್ದ ಡಾ.ಶಿವಮೂರ್ತಿ ಮುರುಘಾ ಶರಣರು, ಲಿಂಗಾಯತ ಮತ ಸೆಳೆಯುವ ಭಾವನೆ ಸಹಜವಾಗಿರಬಹುದು. ನಮ್ಮಲ್ಲಿ ಆ ರೀತಿಯ ಭಾವನೆ ಇಲ್ಲದಿದ್ದರೆ ಆಯಿತು. ನಾವು ಸಮತೋಲನೆಯನ್ನು ಕಾಯ್ದುಕೊಳ್ಳುತ್ತೇವೆ. ನಮಗೆ ಭಾರತ ದೇಶ ಬಹಳ ಮುಖ್ಯ. ದೇಶದ ಭದ್ರತೆ ಬಹಳ ಮುಖ್ಯ. ದೇಶದ ಸುತ್ತ ಶತ್ರುಗಳಿದ್ದು, ದೇಶ ಪಾರಾಗಬೇಕಿದೆ. ಪ್ರಧಾನಿ ನರೇಂದ್ರ ಮೋದಿಯಂಥ ಬಲಿಷ್ಠ ನಾಯಕರು ಬೇಕಿದೆ. ಮೋದಿ ಪರಿಶ್ರಮದಿಂದ ಎದ್ದು ಬಂದಿದ್ದಾರೆ. ಮೋದಿ ದೇಶಕ್ಕೆ ಭದ್ರತೆಯ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

    ವಿರೋಧ ಪಕ್ಷಗಳಲ್ಲಿಯೂ ಆ ರೀತಿಯ ಬಲಿಷ್ಠ ನಾಯಕ ಎದ್ದು ಬರಲಿ. ನಾಡಿನಲ್ಲಿ ಕೋಮುದಳ್ಳುರಿ ತಾಂಡವ ಆಡಲು ಯಾರೂ ಬಯಸಲ್ಲ. ನಾವೆಲ್ಲೆ ಶಾಂತಿ ಪ್ರಿಯರು. ಕೇಂದ್ರ, ರಾಜ್ಯ ಸರ್ಕಾರದಿಂದ ಸುವ್ಯವಸ್ಥೆಯ ವಾತಾವರಣ ನಿರ್ಮಾಣದ ಭರವಸೆ ಇದೆ. ಶಾಂತಿ, ಸಾಮರಸ್ಯದ ಕಡೆಗೆ ಎಲ್ಲರ ನಡೆ ಇರಬೇಕು. ಲಿಂಗಾಯತ ಸಮುದಾಯದ ಹೋರಾಟ ನಿರಂತರವಾಗಿರುತ್ತದೆ. ಸಮಾಜ ಬಾಂಧವರು ಸಂಕುಚಿತ‌ ಮನೋಭಾವ ಬಿಟ್ಟು ಒಂದೇ ವೇದಿಕೆಯಲ್ಲಿ ಒಂದಾಗಬೇಕಿದೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)

    ಸಿದ್ದರಾಮೋತ್ಸವದಲ್ಲಿ ಕೈ ಕಾರ್ಯಕರ್ತರಿಗೆ ಭರ್ಜರಿ ಭೋಜನ ವ್ಯವಸ್ಥೆ: ಹೀಗಿದೆ ನೋಡಿ ಊಟದ ಮೆನು

    ಸಿದ್ದರಾಮೋತ್ಸವ: ದಾವಣಗೆರೆ ರಾಷ್ಟ್ರೀಯ ಹೆದ್ದಾರಿಯಲ್ಲಿ 15 ಕಿಮೀ ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ

    ಬೆಳಗಾವಿಯಲ್ಲಿ ರೆಡಿ, ಸೂರತ್​ನಲ್ಲಿ ಪ್ರಿಂಟ್​: ದಾವಣಗೆರೆಯಲ್ಲಿ ಮಿಂಚುತ್ತಿದೆ 3 ಕಿ.ಮೀ ಉದ್ದದ ಫೋಟೋ ಬಯೋಗ್ರಫಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts