More

    ಬೆಳಗಾವಿಯಲ್ಲಿ ರೆಡಿ, ಸೂರತ್​ನಲ್ಲಿ ಪ್ರಿಂಟ್​: ದಾವಣಗೆರೆಯಲ್ಲಿ ಮಿಂಚುತ್ತಿದೆ 3 ಕಿ.ಮೀ ಉದ್ದದ ಫೋಟೋ ಬಯೋಗ್ರಫಿ

    ಬೆಳಗಾವಿ: ಅತ್ತ ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಭರ್ಜರಿಯಾಗಿ ನಡೆಯುತ್ತಿದ್ದರೆ, ಇನ್ನೊಂದೆಡೆ ಬೆಳಗಾವಿಯಲ್ಲಿ 3,000 ಮೀಟರ್ (3 ಕಿಮೀ) ಉದ್ದದ ಸಿದ್ದರಾಮಯ್ಯ ಫೋಟೋ ಬಯೋಗ್ರಫಿ ಸಿದ್ಧವಾಗಿದ್ದು ದಾವಣಗೆರೆಗೆ ಬಂದಿದೆ. ದಾವಣಗೆರೆಯಲ್ಲಿ ನಡೆಯುತ್ತಿರುವ ಸಿದ್ದರಾಮಯ್ಯನವರ ಹುಟ್ಟುಹಬ್ಬಕ್ಕೆ ಇದನ್ನು ಪ್ರದರ್ಶನಕ್ಕೆ ಇಡಲಾಗಿದೆ. ಇದರಲ್ಲಿ ಸಿದ್ದರಾಮಯ್ಯರ ಜೀವನದ ವಿವಿಧ 500 ಫೋಟೋಗಳನ್ನು ಬಳಸಲಾಗಿದೆ.

    ಸವದತ್ತಿಯ ಕಾಂಗ್ರೆಸ್ ಮುಖಂಡ ಸೌರಭ್ ಛೋಪ್ರಾ (ಸವದತ್ತಿಯ ಕಾಂಗ್ರೆಸ್ ಪಕ್ಷದ ಮುಖಂಡ‌ರಾಗಿದ್ದ ದಿ.ಆನಂದ್ ಛೋಪ್ರಾ ಅವರ ಪುತ್ರ) ಅವರ ಮಾರ್ಗದರ್ಶನದಲ್ಲಿ, ಆನಂದ್ ಛೋಪ್ರಾ ಅಭಿಮಾನಿ ಬಳಗ ಇದನ್ನು ಸಿದ್ಧಪಡಿಸಿದೆ. ಇದಕ್ಕಾಗಿ 3 ಸಾವಿರ ಮೀಟರ್ ಉದ್ದದ ಬಟ್ಟೆ ಬಳಸಲಾಗಿದೆ. ಸಿದ್ದರಾಮಯ್ಯ ನಡೆದು ಬಂದ ಹಾದಿ ಮತ್ತು ಅವರ ಜೀವನ ಚರಿತ್ರೆ ಬಿಂಬಿಸಲು ಈ ವಿಶಿಷ್ಟ ಪ್ರಯತ್ನವನ್ನು ಮಾಡಲಾಗಿದೆ ಎಂದು ಸೌರಭ್​ ಹೇಳಿದ್ದಾರೆ.

    ಬಯೋಗ್ರಾಫಿ ಬಗ್ಗೆ ಮಾತನಾಡಿದ ಕಾಂಗ್ರೆಸ್ ಮುಖಂಡ ಸೌರಭ ಛೋಪ್ರಾ, ಸಿದ್ದರಾಮಯ್ಯ ನೇತೃತ್ವದ ಈ‌ ಹಿಂದಿನ ಕಾಂಗ್ರೆಸ್ ಸರ್ಕಾರ ರಾಜ್ಯಕ್ಕೆ ಅನೇಕ ಕೊಡುಗೆ ನೀಡಿದೆ. ಅನ್ನಭಾಗ್ಯ, ಕೃಷಿ ಭಾಗ್ಯ, ವಿದ್ಯಾಸಿರಿ, ಇಂದಿರಾ ಕ್ಯಾಂಟಿನ್, ಆರೋಗ್ಯ ಭಾಗ್ಯ, ಪಶು ಭಾಗ್ಯದಂತಹ ಅನೇಕ ಯೋಜನೆಯನ್ನು ರಾಜ್ಯದ ಜನರಿಗೆ ನೀಡಿದೆ. ಇದನ್ನು ಸ್ಮರಿಸುವುದು ನಮ್ಮ ಕರ್ತವ್ಯ. ಹುಟ್ಟುಹಬ್ಬದ ಶುಭ ಸಂದರ್ಭದಲ್ಲಿ ಸಣ್ಣ ಉಡುಗೊರೆ ನೀಡಿದ್ದೇ‌ನೆ ಎಂದು ಹೇಳಿದ್ದಾರೆ.

    3 ಸಾವಿರ ಮೀಟರ್ ಉದ್ದ, 6.5 ಮೀಟರ್ ಅಗಲ ಇರುವ ಈ ಫೋಟೋ ಬಯೋಗ್ರಫಿಯನ್ನು ಗುರು ಬಿಗ್ ಬಿ ಆರ್ಟ್ಸ್ ಡಿಸೈನ್ ನ ಮೌನೇಶ ಬಡಿಗೇರ್ ಡಿಸೈನ್ ಮಾಡಿದ್ದು, ಸೂರತ್​ನಲ್ಲಿ ಮುದ್ರಿಸಲಾಗಿದೆ. ಇದಕ್ಕಾಗಿ ಸುಮಾರು 8 ಲಕ್ಷ ರೂ. ವೆಚ್ಚ ಮಾಡಲಾಗಿದೆ.

    ಆನಂದ್ ಛೋಪ್ರಾ ಅಭಿಮಾನಿ ಬಳಗ ಮತ್ತು ಎನ್ ಕರೇಜ್ ಗ್ರೂಪ್ ಇದಕ್ಕಾಗಿ 15 ದಿನ ಶ್ರಮಿಸಿದೆ. ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರು ವೇದಿಕೆಯಿಂದ 3 ಕಿಮೀ ದೂರದಲ್ಲಿ ಈ ಆಟೋ ಬಯೋಗ್ರಫಿ ರೋಲ್ ಉದ್ಘಾಟಿಸಲಿದ್ದಾರೆ.

    ಸಿದ್ದರಾಮೋತ್ಸವದಲ್ಲಿ ಕೈ ಕಾರ್ಯಕರ್ತರಿಗೆ ಭರ್ಜರಿ ಭೋಜನ ವ್ಯವಸ್ಥೆ: ಹೀಗಿದೆ ನೋಡಿ ಊಟದ ಮೆನು

    ಸಿದ್ದರಾಮೋತ್ಸವ: ದಾವಣಗೆರೆ ರಾಷ್ಟ್ರೀಯ ಹೆದ್ದಾರಿಯಲ್ಲಿ 15 ಕಿಮೀ ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts