More

    ಮಲ್ಟಿಫ್ಲೆಕ್ಸ್​ಗಳಲ್ಲಿ ಪಾಪ್​ಕಾರ್ನ್​ ದುಬಾರಿ ಏಕೆ? PVR ಮುಖ್ಯಸ್ಥ ಅಜಯ್​ ಬಿಜ್ಲಿ ಕೊಟ್ಟ ಕಾರಣವಿದು…

    ನವದೆಹಲಿ: ಕುಟುಂಬದ ಜೊತೆ ಚಿತ್ರಮಂದಿರದಲ್ಲಿ ಕುಳಿತು ಸಿನಿಮಾ ನೋಡಲು ಜನರು ಇಷ್ಟಪಡುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಮಲ್ಟಿಫ್ಲೆಕ್ಸ್​ಗಳಲ್ಲಿ ಸಿನಿಮಾ ಟಿಕೆಟ್​ ದರಕ್ಕಿಂತ ಅಲ್ಲಿ ಸಿಗುವ ತಿನಿಸುಗಳ ಬೆಲೆಯೇ ಹೆಚ್ಚಾಗಿರುತ್ತದೆ. ಅದರಲ್ಲೂ ವೀಕೆಂಡ್​ ಸಮಯದಲ್ಲಂತೂ ಗಗನಮುಖಿಯಾಗಿರುತ್ತವೆ.

    ಸಿನಿಮಾ ಹಾಲ್​ಗಳಲ್ಲಿ ಹೆಚ್ಚು ಮಾರಾಟವಾಗುವ ಸ್ನ್ಯಾಕ್ಸ್​ ಅಂದರೆ, ಅದು ಪಾಪ್​ಕಾರ್ನ್​. ಸಿನಿಮಾ ನೋಡುತ್ತಾ ಪಾಪ್​ಕಾರ್ನ್​ ತಿನ್ನುವ ಮಜವೇ ಬೇರೆ. ಆದರೆ, ಕೆಲವು ದಿನಗಳಿಂದ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಪಾಪ್​ಕಾರ್ನ್​ ತೆಗೆದುಕೊಳ್ಳಲು ಹಿಂದು-ಮುಂದು ನೋಡುವಂತಾಗಿದೆ. ಅಲ್ಲದೆ, ಜನರು ಆಕ್ರೋಶಕ್ಕೂ ಕಾರಣವಾಗಿದೆ.

    ಈ ವಿಚಾರದ ಬಗ್ಗೆ ಇದೀಗ ಪಿವಿಆರ್​ ಮುಖ್ಯಸ್ಥ ಮತ್ತು ಮ್ಯಾನೇಜಿಂಗ್​ ಡೈರೆಕ್ಟರ್​ ಅಜಯ್​ ಬಿಜ್ಲಿ ಅವರು ಮಾತನಾಡಿದ್ದು, ಚಿತ್ರಮಂದಿರಗಳಲ್ಲಿ ತಿಂಡಿ-ತಿನಿಸುಗಳ ಬೆಲೆ ಏರಿಕೆ ವಿರುದ್ಧ ಮಾತನಾಡುವ ಗ್ರಾಹಕರನ್ನು ದೂಷಿಸಲಾಗದು ಎಂದು ಒಪ್ಪಿಕೊಂಡರು. ಆದಾಗ್ಯೂ, ಭಾರತವು ಇನ್ನೂ ಸಿಂಗಲ್ ಸ್ಕ್ರೀನ್‌ಗಳಿಂದ ಮಲ್ಟಿಪ್ಲೆಕ್ಸ್‌ಗಳಿಗೆ ಪರಿವರ್ತನೆಯ ಹಂತದಲ್ಲಿರುವುದರಿಂದ ಆಹಾರ ಮತ್ತು ಪಾನೀಯಗಳ (ಎಫ್ & ಬಿ) ಬೆಲೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಬಿಜ್ಲಿ ಹೇಳಿದರು.

    ಕಾರ್ಯಾಚರಣೆಯ ವೆಚ್ಚವನ್ನು ಭರಿಸುವ ಸಲುವಾಗಿ, ಮಲ್ಟಿಪ್ಲೆಕ್ಸ್‌ನಲ್ಲಿ ತಿಂಡಿಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುವುದು. ಅಲ್ಲದೆ, ಆಹಾರ ಮತ್ತು ತಂಪು ಪಾನೀಯ ವ್ಯವಹಾರವು ಈಗ ದೇಶದಲ್ಲಿ 1,500 ಕೋಟಿ ರೂ. ಮೌಲ್ಯದ್ದಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

    ಮಲ್ಟಿಪ್ಲೆಕ್ಸ್‌ಗಳು ಹೆಚ್ಚಿನ ಪರದೆಗಳನ್ನು ಹೊಂದಿರುವುದರಿಂದ, ಬಹು ಪ್ರೊಜೆಕ್ಷನ್ ಕೊಠಡಿಗಳು ಮತ್ತು ಧ್ವನಿ ವ್ಯವಸ್ಥೆಗಳ ಅಗತ್ಯತೆಯಿಂದಾಗಿ ವೆಚ್ಚವು “4 ರಿಂದ 6 ಪಟ್ಟು” ಹೆಚ್ಚಾಗುತ್ತದೆ ಎಂದು ಬಿಜ್ಲಿ ಹೇಳಿದರು. ಸಿನಿಮಾ ಹಾಲ್​ ಸಂಪೂರ್ಣ ಎಸಿ ಆಗಿರುವುದರಿಂದ ಹವಾನಿಯಂತ್ರಣದ ಅವಶ್ಯಕತೆಯೂ ಹೆಚ್ಚಾಗಿದೆ ಎಂದು ಹೇಳಿದರು. (ಏಜೆನ್ಸೀಸ್​)

    ಶಿವಮೊಗ್ಗದಲ್ಲಿ ಸಾವರ್ಕರ್ ಫೋಟೋ ವಿರೋಧಿಸಿದ್ದಕ್ಕೆ ಬೆಂಗ್ಳೂರಲ್ಲಿ ಟಿಪ್ಪು ಫೋಟೋ ಹರಿದ ಪುನೀತ್​ ಕೆರೆಹಳ್ಳಿ ಟೀಂ

    ನಿಮ್ಮ ಪ್ರಕಾರ ಸ್ವಾತಂತ್ರ್ಯ ಎಂದರೇನು? ರ‍್ಯಾಪಿಡ್ ಫೈರ್ ಪ್ರಶ್ನೆಗಳಿಗೆ ಉತ್ತರಿಸಿ ದೇಶದ ಬಗ್ಗೆ ಡಿಕೆಶಿ ಹೇಳಿದ್ದು ಹೀಗೆ…

    ಇನ್ನೊಂದು ಬೆಳ್ಳಿ ಕಾಲುಂಗುರ; ಸಾ.ರಾ. ಗೋವಿಂದು ನಿರ್ಮಾಣದ ಚಿತ್ರದಲ್ಲಿ ಧನ್ಯಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts