More

    ನನ್ನ ರಕ್ತದ ಗುಂಪು ಟೆಸ್ಟ್​ ಮಾಡ್ಬೇಡಿ ಅದರಲ್ಲಿ ಸಂಪೂರ್ಣ__ತುಂಬಿದೆ! ಅಪ್ಪು ಕುರಿತ 2018ರ ಸ್ವಾರಸ್ಯಕರ ಘಟನೆ

    ಬೆಂಗಳೂರು: ಬಾಲ ನಟನಾಗಿ ಮುಗ್ಧ ಅಭಿನಯದಿಂದ ಹಿಡಿದು ಇಂದಿನವರೆಗೆ ದಶಕಗಳ ಕಾಲ ಕನ್ನಡ ಚಿತ್ರ ಪ್ರಿಯರನ್ನು ಸೂಜಿಗಲ್ಲಿನಂತೆ ಸೆಳೆದ ಪುನೀತ್​, ಚಿತ್ರನಟ ಮಾತ್ರವಲ್ಲದೇ ಹಿನ್ನೆಲೆ ಗಾಯನ, ನಿರೂಪಕರಾಗಿಯೂ ಕೂಡ ಸ್ಯಾಂಡಲ್​ವುಡ್​ನಲ್ಲಿ ಛಾಪು ಮೂಡಿಸಿದವರು. ಸರಳ ವ್ಯಕ್ತಿತ್ವದಿಂದಲೇ ಎಲ್ಲರ ಮನಗೆದ್ದ ಅಪ್ಪು ಇಂದು ನಮ್ಮ ನಡುವೆ ಇಲ್ಲ ಎಂಬುದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಜತೆಗಿರದ ಜೀವ ಎಂದಿಗೂ ಜೀವಂತ ಎನ್ನುವಂತೆ ಪುನೀತ್​ ಎಲ್ಲರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದಾರೆ.

    ಸಿನಿಮಾ ಮಾತ್ರವಲ್ಲದೆ ಸಮಾಜಮುಖಿ ಕಾರ್ಯಗಳಿಂದಲೂ ಅಪ್ಪು ಎಲ್ಲರ ಹೃದಯದಲ್ಲಿ ಮನೆ ಮಾಡಿದ್ದಾರೆ. ಅಪ್ಪು ಗುಣ ಎಂಥದ್ದು ಎಂಬುದಕ್ಕೆ ಪೀಣ್ಯದ ರೋಟರಿ ಬೆಂಗಳೂರು ಉದ್ಯೋಗ ಸಂಸ್ಥೆಯ ಈ ಹಿಂದಿನ ಸಹಾಯಕ ಗವರ್ನರ್ ಮತ್ತು ಹಿಂದಿನ ಅಧ್ಯಕ್ಷರಾಗಿದ್ದ ರೇಣುಕೇಶ್ವರ್​ ವಿವರಿಸಿದ ಈ ಒಂದು ಘಟನೆ ಸಾಕ್ಷಿಯಾಗಿದೆ.

    2018ರಲ್ಲಿ ಮೊದಲ ಬಾರಿಗೆ ಪುನೀತ್​ ತಮ್ಮ ರಕ್ತದ ಮಾದರಿ ಯಾವುದೆಂದು ತಿಳಿದುಕೊಂಡರಂತೆ. ಕಂಠೀರವ ಸ್ಟುಡಿಯೋದಲ್ಲಿ ನಡೆದ ಡಾ. ರಾಜ್​ಕುಮಾರ್​ ಅವರ ವಾರ್ಷಿಕ ಪುಣ್ಯ ಸ್ಮರಣೆಯ ದಿನದಂದು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಶಿಬಿರಕ್ಕೆ ಭೇಟಿ ನೀಡಿದ ಪುನೀತ್​ ಬಳಿ ರಕ್ತದಾನ ಮಾಡುವಂತೆ ರೇಣುಕೇಶ್ವರ್​ ಅವರು ಮನವಿ ಮಾಡಿಕೊಳ್ಳುತ್ತಾರೆ.

    ತಕ್ಷಣ ಮನವಿಗೆ ಸ್ಪಂದಿಸುವ ಪುನೀತ್​, ಅದಕ್ಕೂ ಮುನ್ನ ರೇಣುಕೇಶ್ವರ್​ ಬಳಿಕ ಒಂದು ಹಾಸ್ಯ ಚಟಾಕಿಯನ್ನು ಹಾರಿಸುತ್ತಾರೆ. ರೇಣು ನನ್ನ ರಕ್ತದ ಗುಂಪು ಯಾವುದೆಂದು ಪರೀಕ್ಷಿಸಬೇಡಿ ಅದರಲ್ಲಿ ಸಂಪೂರ್ಣ ಬಿಯರ್​ ತುಂಬಿರುತ್ತದೆ. ಅದಕ್ಕೆ ಪ್ರತಿಕ್ರಿಯಿಸುವ ರೇಣು ಅವರು ಹಾಗೇನಿಲ್ಲ ಸರ್​, ಕೆಲವೇ ಸೆಕೆಂಡುಗಳ ಕಾಲ ದಯವಿಟ್ಟು ಸಹಕಾರ ನೀಡಿ ಎಂದರಂತೆ. ಬಳಿಕ ರಕ್ತದಾನ ಮಾಡಿದ ಅಪ್ಪು, ಅಗತ್ಯಬಿದ್ದಾಗಲೆಲ್ಲ ಅಂದಿನಿಂದ ನಿರಂತರವಾಗಿ ರಕ್ತದಾನ ಮಾಡಿಕೊಂಡು ಬರುತ್ತಿದ್ದರು ಎಂದು ರೇಣುಕೇಶ್ವರ್​ ಅವರು ಹಳೆಯ ಘಟನೆಯನ್ನು ಮೆಲುಕು ಹಾಕುತ್ತಾ, ಪುನೀತ್​ ಬಹುಬೇಗ ಬಾರದ ಲೋಕಕ್ಕೆ ತೆರಳಿದ್ದನ್ನು ನೆನೆದು ಭಾವುಕರಾದರು.

    ಅಂದಿನ ರಾಜ್​ ಪುಣ್ಯ ಸ್ಮರಣೆ ದಿನ ಸುಮಾರು 250 ಯೂನಿಟ್​ ರಕ್ತವನ್ನು ಸಂಗ್ರಹಿಸಿ ಎಲ್ಲ ಸರ್ಕಾರ ಆಸ್ಪತ್ರೆಗಳಿಗೆ ರವಾನಿಸಲಾಗಿತ್ತಂತೆ.

    ಅದ್ಧೂರಿ ಜೀವನಶೈಲಿಯ ನಡುವೆಯು ಸರಳವಾಗಿ ಬದುಕಿದ ಪುನೀತ್​ ಕುರಿತು ನಿಮಗೆ ಗೊತ್ತಿರದ ಸಂಗತಿ ಇಲ್ಲಿದೆ…

    ಏನೇ ನಡೆದಿದ್ರೂ ಅವನೊಬ್ಬನಿಗೆ ಮಾತ್ರ ಗೊತ್ತಿರುತ್ತದೆ! ಪುನೀತ್ ಸಾವಿನ ಅನುಮಾನದ ಬಗ್ಗೆ ಶಿವಣ್ಣ ಪ್ರತಿಕ್ರಿಯೆ

    ಹೊಗಳಿಕೆಯೂ ಬೇಕು, ತೆಗಳಿಕೆಯೂ ಇರಬೇಕು..; ಮಗನ ಸಿನಿ ಬದುಕಿನ ಬಗ್ಗೆ ರವಿಚಂದ್ರನ್ ಮಾತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts