More

    ನಿಮ್ಮ ಜೀವನ ಶೈಲಿಯನ್ನೇ ಬದಾಲಾಯಿಸುವಂತಹ ಕ್ರೀಡಾಪಟುವಿನ ಸ್ಫೂರ್ತಿದಾಯಕ ಕತೆಯಿದು..!

    ನವದೆಹಲಿ: ಯಾವುದೇ ಸ್ಕ್ರಿಪ್ಟ್ ಇರದ, ಉತ್ಸಾಹವೇ ತುಂಬಿರುವ ಮತ್ತು ಥ್ರಿಲ್ಲಿಂಗ್ ಆಗಿರುವ ಕ್ರೀಡೆಗಿಂತ ಸುಂದರವಾದದ್ದು ಯಾವುದು ಇಲ್ಲ. ಹೀಗಾಗಿಯೇ ಚಲನಚಿತ್ರ ನಿರ್ದೇಶಕರು ಸಿನಿಮಾ ಕ್ಲೈಮ್ಯಾಕ್ಸ್ ಕ್ರೀಡೆಯಂತೆ ಇರಬೇಕೆಂದು ಬಯಸುತ್ತಾರೆ. ಯಾಕೆಂದರೆ ಅಷ್ಟೊಂದು ಕುತೂಹಲ ಕ್ರೀಡೆಯಲ್ಲಿರುತ್ತದೆ.

    ಇನ್ನು ಕೆಲವೊಂದು ಕ್ರೀಡಾ ಕತೆಗಳಂತೂ ಅತ್ಯದ್ಭುತ. ಅದರಲ್ಲೂ ಭಾರತದಲ್ಲಿ ಪ್ರತಿಕೂಲ ವಾತಾವರಣದಲ್ಲೂ ಕ್ರೀಡಾತಾರೆಯಾಗಿ ಹೊರಹೊಮ್ಮುವ ಪ್ರತಿಭಾನ್ವಿತ ವ್ಯಕ್ತಿಗಳ ಕತೆಯಂತೂ ನಿಜಕ್ಕೂ ಸ್ಫೂರ್ತಿ ನೀಡುತ್ತದೆ. ಅಂತಹ ಮಹಾನ್ ವ್ಯಕ್ತಿಗಳ ಸ್ಫೂರ್ತಿದಾಯಕ ಕತೆಗಳನ್ನು ಕೇಳಿದರೆ ನಾವು ನಮ್ಮ ಜೀವನದ ಶೈಲಿಯನ್ನೇ ಬದಲಾಯಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ. ಅಂಥದ್ದೇ ಮಹಾನ್ ವ್ಯಕ್ತಿಯ ಕತೆಯನ್ನು ನಾವಿಂದು ನಿಮಗೆ ತಿಳಿಸುತ್ತಿದ್ದೇವೆ. ಮುಂದೆ ಓದಿ..

    ನಾವಿಂದು ಹೇಳ ಹೊರಟಿರುವ ಸಾಹಸಗಾಥೆಯ ಮುಖ್ಯ ಪಾತ್ರದ ಹೆಸರೇ ಮುರಳಿಕಾಂತ್ ಪೆಟ್ಕಾರ್. ಇವರು ಸಾಮಾನ್ಯ ವ್ಯಕ್ತಿಯಲ್ಲ. ಅಸಾಧಾರಣ ಸಾಧಕರಿವರು. 1972ರಲ್ಲಿ ಮೊದಲ ಬಾರಿಗೆ ಜರ್ಮನಿಯ ಹೈಡಲ್ಬರ್ಗ್‍ನಲ್ಲಿ ನಡೆದ ಪ್ಯಾರಾ ಒಲಿಂಪಿಕ್‍ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಪೆಟ್ಕಾರ್ ಅವರು 50 ಮೀಟರ್ ಫ್ರೀಸ್ಟೈಲ್ ಸ್ವಿಮ್ಮಿಂಗ್ ವಿಭಾಗದಲ್ಲಿ ಪದಕ ಗೆಲ್ಲುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ.

    ಕ್ರೀಡಾ ತಾರೆಯಾಗಿ ಹೊರಹೊಮ್ಮುವ ಮುಂಚಿನ ಪೆಟ್ಕಾರ್ ಅವರ ಜೀವನವನ್ನು ಮೆಲುಕು ಹಾಕುವುದಾದರೆ, ಪೆಟ್ಕಾರ್ ಅವರು ಇಂಡಿಯನ್ ಆರ್ಮಿಯಲ್ಲಿ ಸುಬೇದಾರ್ ಆಗಿ ಕಾರ್ಯನಿರ್ವಹಿಸಿದ್ದಾರೆ. 1965ರಲ್ಲಿ ನಡೆದ ಇಂಡೋ-ಪಾಕ್ ಯುದ್ಧದಲ್ಲಿ ಪೆಟ್ಕಾರ್ ಅವರಿಗೆ 9 ಗುಂಡು ತಗುಲಿತ್ತು. ಈಗಲೂ ಒಂದು ಗುಂಡು ಅವರ ಬೆನ್ನ ಹಿಂದಿದೆ. ಪೆಟ್ಕಾರ್ ಅವರ ಸೊಂಟದ ಕೆಳಗಿನ ಭಾಗಕ್ಕೆ ಪಾರ್ಶ್ವವಾಯು ಹಿಡಿದು ಮೂರು ವರ್ಷ ಹಾಸಿಗೆ ಹಿಡಿದಿದ್ದರು. ಅಲ್ಲದೆ ಕೆಲವೊಮ್ಮೆ ತಮ್ಮ ಮೆಮೊರಿಯನ್ನು ಕಳೆದುಕೊಂಡಿದ್ದರು.

    ಇಷ್ಟೆಲ್ಲಾ ಆದರೂ ಯಾವುದಕ್ಕೂ ಜಗ್ಗದ ಪೆಟ್ಕಾರ್ ಅನಾರೋಗ್ಯದಿಂದ ಚೇತರಿಸಿಕೊಂಡ ಬಳಿಕ ಕ್ರೀಡಾಪಟುವಾಗಿ ಹೊಸ ಜೀವನವನ್ನೇ ಆರಂಭಿಸುತ್ತಾರೆ. ಅದರ ಯಶಸ್ಸಿನ ಭಾಗವಾಗಿ 1972ರಲ್ಲಿ ಐತಿಹಾಸಿಕ ಚಿನ್ನದ ಪದಕವನ್ನು ಜಯಿಸುತ್ತಾರೆ. ಕೇವಲ ಸ್ವಿಮ್ಮಿಂಗ್ ಮಾತ್ರವಲ್ಲದೆ ಜಾವೆಲಿನ್, ಪ್ರೆಸಿಸನ್ ಜಾವೆಲಿನ್ ಥ್ರೋ ಮತ್ತು ಸ್ಲಾಲೊಮ್ ವಿಭಾಗದಲ್ಲೂ ಫೈನಲಿಸ್ಟ್ ಆಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts