More

    ಬಿಜೆಪಿ ನಾಯಕನ ಹೇಳಿಕೆ ಬೆನ್ನಲ್ಲೇ ಪ್ರಧಾನಿ ಮೋದಿ ವಿರುದ್ಧ ಶಾಕಿಂಗ್​ ಕಾಮೆಂಟ್​ ಮಾಡಿದ ಪ್ರಕಾಶ್​ ರಾಜ್​!

    ಹೈದರಾಬಾದ್​: ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ನಟ ಹಾಗೂ ರಾಜಕಾರಣಿ ಪ್ರಕಾಶ್​ ರಾಜ್​ ಅವರು ಶಾಕಿಂಗ್​ ಕಾಮೆಂಟ್​ ಮಾಡಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ. ಪ್ರಧಾನಿ ಮೋದಿ ಅವರು ನಿದ್ರಾ ರೋಗದಿಂದ ಬಳಲುತ್ತಿದ್ದಾರೆ. ಮೊದಲು ಅವರಿಗೆ ಚಿಕಿತ್ಸೆ ಕೊಡಿಸಿ ಎಂದು ಬಿಜೆಪಿ ನಾಯಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ.

    ಪ್ರಧಾನಿ ಮೋದಿ ಕುರಿತು ಮಹಾರಾಷ್ಟ್ರದ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್​ ಪಾಟೀಲ್​ ಅವರು ನೀಡಿದ ಹೇಳಿಕೆಗೆ ಪ್ರತಿಯಾಗಿ ಪ್ರಕಾಶ್​ ರಾಜ್​ ಈ ಹೇಳಿಕೆಯನ್ನು ನೀಡಿದ್ದಾರೆ. ಹಾಗಾದರೆ, ಚಂದ್ರಕಾಂತ್​ ಪಾಟೀಲ್​ ಹೇಳಿದ್ದೇನು ಎಂದು ನೋಡುವುದಾರೆ, ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ್ದ ಪಾಟೀಲ್​, ಮೋದಿ ಅವರು ದಿನದ 22 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಅವರು ಕೇವಲ 2 ಗಂಟೆ ಮಾತ್ರ ನಿದ್ರೆ ಮಾಡುತ್ತಾರೆ ಎಂದು ಪ್ರಧಾನಿಯನ್ನ ಹೊಗಳಿದ್ದರು.

    ಪಾಟೀಲ್​ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಪ್ರಕಾಶ್​ ರಾಜ್​, ದಯವಿಟ್ಟು ಸ್ವಲ್ಪ ಸಾಮಾನ್ಯ ಜ್ಞಾನವನ್ನು ಬಳಸಿ, ಇದೊಂದು ನಿದ್ರಾ ಸಮಸ್ಯೆ ಇರಬಹುದು. ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು ನಿದ್ರಾಹೀನತೆ ಎಂದು ಕರೆಯಲಾಗುತ್ತದೆ. ಇದರ ಬಗ್ಗೆ ಬಡಾಯಿ ಕೊಚ್ಚಿಕೊಳ್ಳಬೇಡಿ. ರೋಗದಿಂದ ಬಳಲುತ್ತಿರುವ ನಿಮ್ಮ ನಾಯಕರಿಗೆ ಮೊದಲು ಚಿಕಿತ್ಸೆ ಕೊಡಿಸಿ ಎಂದು ವ್ಯಂಗ್ಯವಾಗಿ ಟ್ವೀಟ್​ ಮಾಡಿದ್ದಾರೆ.

    ಇದೀಗ ಪ್ರಕಾಶ್​ ರಾಜ್​ ಅವರ ಟ್ವೀಟ್​ ವೈರಲ್​ ಆಗಿದೆ. ಈ ಹಿಂದೆ ದಿ ಕಾಶ್ಮೀರ್​ ಫೈಲ್ಸ್​ ಚಿತ್ರದ ಬಗ್ಗೆ ಪ್ರಕಾಶ್​ ರಾಜ್​ ಟ್ವೀಟ್​ ಮಾಡಿದ್ದರು. ಅದೂ ಕೂಡ ವೈರಲ್​ ಆಗಿತ್ತು. ಕಾಶ್ಮೀರ್​ ಫೈಲ್ಸ್​ ಚಿತ್ರದಂತೆ ಗೋಧ್ರಾ ಫೈಲ್ಸ್​, ದೆಹಲಿ ಫೈಲ್ಸ್​, ಜಿಎಸ್​ಟಿ ಫೈಲ್ಸ್​, ಡಿಮಾನೀಟೈಸ್​ ಫೈಲ್ಸ್​, ಕೋವಿಡ್​ ಫೈಲ್ಸ್​ ಮತ್ತು ಗಂಗಾ ಫೈಲ್ಸ್​ ಚಿತ್ರಗಳನ್ನು ತೆಗೆಯಿರಿ ಎಂದು ಟ್ವೀಟ್​ ಮೂಲಕ ಕಿಡಿಕಾರಿದ್ದರು. (ಏಜೆನ್ಸೀಸ್​)

    41ರ ಉದ್ಯಮಿ ಪತಿಯ ಕೊಲೆಗೆ 26ರ ಪತ್ನಿಯಿಂದಲೇ ಸುಪಾರಿ: ಪೊಲೀಸ್​ ತನಿಖೆಯಲ್ಲಿ ಸ್ಫೋಟಕ ರಹಸ್ಯ ಬಯಲು

    ಯಾರೂ ಹೇಳದ ರಹಸ್ಯವೊಂದನ್ನು ಬಹಿರಂಗಪಡಿಸಿದ ನಟಿ ಹೆಬ್ಬಾ ಪಟೇಲ್​ಗೆ ಅಭಿಮಾನಿಗಳ ಬಹುಪರಾಕ್​!​

    ಮಗು ಮಾಡಿಕೊಳ್ಳಲು ನಯನತಾರಾ ಆಯ್ಕೆ ಮಾಡಿಕೊಂಡ ವಿಧಾನ ಕೇಳಿ ಬೆರಗಾದ ಅಭಿಮಾನಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts