More

    ಅನೇಕ ಕುಟುಂಬಗಳ ಉಳಿತಾಯ ಹಣಕ್ಕೆ ಕನ್ನ: IPL ಬೆಟ್ಟಿಂಗ್​ ಆಡಿ 1 ಕೋಟಿ ರೂ. ಕಳ್ಕೊಂಡ ಪೋಸ್ಟ್​ ಮಾಸ್ಟರ್​!

    ಭೋಪಾಲ್​: ಪೋಸ್ಟ್​ ಮಾಸ್ಟರ್​ ಓರ್ವ ಐಪಿಎಲ್​ ಕ್ರಿಕೆಟ್​ ಪಂದ್ಯಗಳ ಮೇಲೆ ಬೆಟ್ಟಿಂಗ್​ ಆಡಿ ಬರೋಬ್ಬರಿ 1 ಕೋಟಿ ರೂಪಾಯಿ ಹಣವನ್ನು ಕಳೆದುಕೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಎರಡು ಡಜನ್​ ಕುಟುಂಬಗಳ ಉಳಿತಾಯ ಹಣವನ್ನು ಐಪಿಎಲ್​ ಎಂಬ ನೀರಿನಲ್ಲಿ ಪೋಸ್ಟ್​ಮಾಸ್ಟರ್​ ಹೋಮ ಮಾಡಿದ್ದಾನೆ.

    ಕುಟುಂಬಗಳು ತಮ್ಮ ಉಳಿತಾಯ ಹಣವನ್ನು ಸಾಗರ್​ ಜಿಲ್ಲೆಯ ಉಪ ಅಂಚೇ ಕಚೇರಿಯಲ್ಲಿ ಡೆಪಾಸಿಟ್​ ಮಾಡಿದ್ದರು. ಅದೇ ಹಣವನ್ನು ಬಿನಾ ಪ್ರದೇಶದ ಅಂಚೆ ಕಚೇರಿಯ ಪೋಸ್ಟ್​ ಮಾಸ್ಟರ್ ವಿಶಾಲ್ ಅಹಿರ್ವಾರ್ ಐಪಿಎಲ್​ ಬೆಟ್ಟಿಂಗ್​ ಆಡಿದ್ದಾರೆ. ಈ ಕಾರಣಕ್ಕಾಗಿ ಮೇ 20 ರಂದು ಬಿನಾ ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ವಿಶಾಲ್​ನನ್ನು ಬಂಧಿಸಿದ್ದಾರೆ. ಆರೋಪಿ ಪೊಲೀಸರ ಮುಂದೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.

    ಆರೋಪಿ ಪೋಸ್ಟ್‌ ಮಾಸ್ಟರ್ ನಕಲಿ ಎಫ್‌ಡಿ ಖಾತೆಗಳಿಗಾಗಿ ಅಸಲಿ ಪಾಸ್‌ಬುಕ್‌ಗಳನ್ನು ನೀಡಿದ್ದು, ಕಳೆದ ಎರಡು ವರ್ಷಗಳಿಂದ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್‌ಗೆ ಸಂಪೂರ್ಣ ಹಣವನ್ನು ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬಂಧಿತ ಪೋಸ್ಟ್‌ಮಾಸ್ಟರ್ ವಿಶಾಲ್ ಅಹಿರ್ವಾರ್ ವಿರುದ್ಧ ಇದೀಗ ಐಪಿಸಿ ಸೆಕ್ಷನ್​ 420 (ಮೋಸ) ಮತ್ತು 408 (ಕ್ರಿಮಿನಲ್ ಉಲ್ಲಂಘನೆಯ ನಂಬಿಕೆ) ಪ್ರಕರಣವನ್ನು ದಾಖಲಿಸಲಾಗಿದೆ. ಹೆಚ್ಚಿನ ತನಿಖೆಉ ಬಳಿಕ ಹೆಚ್ಚಿನ ಸೆಕ್ಷನ್‌ಗಳನ್ನು ಸೇರಿಸುವ ಸಾಧ್ಯತೆ ಇದೆ ಎಂದು ಬೀನಾ ಜಿಆರ್​ಪಿ ಪೊಲೀಸ್ ಠಾಣೆ ಪ್ರಭಾರಿ ಅಜಯ್ ಧುರ್ವೆ ತಿಳಿಸಿದ್ದಾರೆ. (ಏಜೆನ್ಸೀಸ್​)

    ಇನ್ಮುಂದೆ ಸಂಸಾರ ಉಳಿಸಿಕೊಳ್ಳಲು ಆಗುವುದಿಲ್ಲ: ಗಂಡನ ಕರಾಳ ಮುಖ ಬಿಚ್ಚಿಟ್ಟ ನಟಿ ಚೈತ್ರಾ ಹಳ್ಳಿಕೇರಿ

    ಕೋನಸೀಮಾ ಜಿಲ್ಲೆ ಮರುನಾಮಕರಣ: ಆಂಧ್ರದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ, ಸಚಿವರು, ಶಾಸಕರ ಮನೆಗೆ ಬೆಂಕಿ

    ರಾತ್ರಿ ಹೊತ್ತು ಡ್ರಾಪ್‌ ಕೊಡೋಕೆ ಅಂತಾ ಗಾಡಿ ನಿಲ್ಲಿಸುವವರು ಈ ಸುದ್ದಿ ಓದಿದ್ರೆ ಬೆಚ್ಚಿ ಬೀಳೋದು ಖಚಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts