More

    ಜೂಜಾಟಕ್ಕೆ ಪೊಲೀಸ್​ ಪೇದೆ ಬಲಿ: ರಮ್ಮಿ ಆಡಲು ಮಾಡಿದ್ದ ಸಾಲದ ಮೊತ್ತ ಕೇಳಿದ್ರೆ ಶಾಕ್​ ಆಗುತ್ತೆ!

    ಕೊಯಮತ್ತೂರು: ಇತ್ತೀಚಿನ ದಿನಗಳಲ್ಲಿ ಸಾಲದ ಆ್ಯಪ್​ಗಳು​ ಮತ್ತು ರಮ್ಮಿಯಂತಹ ಆನ್​ಲೈನ್​ ಜೂಜಾಟಗಳು ಬಡ ಮತ್ತು ಮಧ್ಯಮ ಕುಟುಂಬಗಳ ಕತ್ತು ಹಿಸುಕುತ್ತಿವೆ. ಆನ್​ಲೈನ್​ನಲ್ಲಿ ನಡೆಯುವ ಈ ವಂಚನೆಯ ಚಕ್ರವ್ಯೂಹಕ್ಕೆ ಸಿಲುಕಿ ಸಾಕಷ್ಟು ಮಂದಿ ಬಲಿಯಾಗುತ್ತಿದ್ದಾರೆ. ಸರ್ಕಾರ ಗಂಭೀರವಾಗಿ ಪರಿಗಣಿಸಿ ಇದಕ್ಕೆಲ್ಲ ಕೂಡಲೇ ಕಡಿವಾಣ ಹಾಕದಿದ್ದರೆ, ಇನ್ನುಷ್ಟು ಅಮಾಯಕ ಜೀವಗಳು ಬಲಿಯಾಗುತ್ತವೆ.

    ತಾಜಾ ಬೆಳವಣಿಗೆ ಒಂದರಲ್ಲಿ ಪೊಲೀಸ್​ ಪೇದೆಯೊಬ್ಬರು ಆನ್​ಲೈನ್​ ಜೂಜಾಟ ರಮ್ಮಿ ಆಡಿ ಸಿಕ್ಕಾಪಟ್ಟೆ ಸಾಲ ಮಾಡಿಕೊಂಡು, ಅದನ್ನು ತೀರಿಸಲಾಗದೇ ಗುಂಡು ಹಾರಿಸಿಕೊಂಡು ಮೃತಪಟ್ಟಿರುವ ದಾರುಣ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.

    ಮೃತ ಪೇದೆಯ ಹೆಸರು ಕಾಳಿಮುತ್ತು (29). ಇವರು ಕೊಯಮತ್ತೂರು ಸಶಸ್ತ್ರ ನಗರ ಪಡೆಯಲ್ಲಿ ಕೆಲಸ ಮಾಡುತ್ತಿದ್ದರು. ಇವರು ಮೂಲತಃ ಕೊಯಮತ್ತೂರಿನವರೇ. ಆನ್​ಲೈನ್​ ರಮ್ಮಿ ಗೇಮ್​ಗೆ ಕಾಳಿಮುತ್ತು ದಾಸರಾಗಿದ್ದರು​. ಆತ್ಮಹತ್ಯೆಗೆ ಅದೇ ಕಾರಣ ಎಂದು ಸಂಬಂಧಿಕರು ಮತ್ತು ಆಪ್ತರು ಹೇಳಿದ್ದಾರೆ.

    ಸಂಬಂಧಿಕರು ಮತ್ತು ಸ್ನೇಹಿತರಿಂದ ಕಲಿಮುತ್ತು ಬರೋಬ್ಬರಿ 20 ಲಕ್ಷ ರೂಪಾಯಿ ಸಾಲ ಮಾಡಿದ್ದರು. ಆ ಸಾಲದ ಮೊತ್ತವನ್ನು ಮರುಪಾವತಿಸಲು ಸಾಧ್ಯವಾಗದೇ ಸಾವಿನ ಹಾದಿ ಹಿಡಿದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

    ಕೊಯಮತ್ತೂರಿನ ಗಾಂಧಿಪುರಂನಲ್ಲಿ ಸರ್ಕಾರಿ ಅಧಿಕಾರಿಗಳು ಹಮ್ಮಿಕೊಂಡಿದ್ದ ವಸ್ತು ಪ್ರದರ್ಶನದ ವೇಳೆ ಈ ಘಟನೆ ನಡೆದಿದೆ. ವಸ್ತುಪ್ರದರ್ಶನದಲ್ಲಿ ಪೊಲೀಸ್ ಮಳಿಗೆಯಲ್ಲಿ ಇಲಾಖೆ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಲಾಗುತ್ತಿತ್ತು. ಕಾಳಿಮುತ್ತು ಅದರ ಕರ್ತವ್ಯದಲ್ಲಿದ್ದರು. ಶುಕ್ರವಾರ ಏಕಾಂಗಿಯಾಗಿರುವಾಗ ಪ್ರದರ್ಶನಕ್ಕೆ ಇಟ್ಟಿದ್ದ ಎಸ್​ಎಲ್​ಆರ್​ ಗನ್​ ತೆಗೆದುಕೊಂಡು ಹೊಟ್ಟೆಗೆ ಶೂಟ್​ ಮಾಡಿಕೊಂಡು ಪ್ರಾಣ ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

    ಇದು ಲೋನ್​​ ಆ್ಯಪ್​ ಹಿಂದಿನ ಕರಾಳತೆ: 20 ಸಾವಿರ ರೂ. ಸಾಲಕ್ಕೆ 2 ಲಕ್ಷ ಪಾವತಿಸಿದ್ರೂ ಮಹಿಳೆಗೆ ಬದ್ಕೋಕೆ ಬಿಡ್ಲಿಲ್ಲ

    ರೈಲ್ವೆ ಹಳಿ ಮೇಲೆ ಬಿದ್ದ ವ್ಯಕ್ತಿಯ ಜೀವ ಉಳಿಸಿದ ಆರ್‌ಪಿಎಫ್ ಸಿಬ್ಬಂದಿ: ವೈರಲ್​ ವಿಡಿಯೋಗೆ ಮೆಚ್ಚುಗೆ ಮಹಾಪೂರ

    ಸೋನಿಯಾ ಸೂತ್ರಧಾರಿ ಪಟೇಲ್, ತೀಸ್ತಾ ಪಾತ್ರಧಾರಿ?: ಮೋದಿ ವಿರುದ್ಧ ಅಹ್ಮದ್ ಪಟೇಲ್ ಸಂಚು ಎಂದ ಎಸ್​ಐಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts