More

    ನಾವು ‘ವಸುದೈವ ಕುಟುಂಬಕಂ’ ಅನ್ನು ನಂಬುತ್ತೇವೆ: ಪ್ರಧಾನಿ ಮೋದಿ

    ಕೋಪನ್ ಹ್ಯಾಗನ್: ಒಳಗೊಳ್ಳುವಿಕೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯು ಭಾರತೀಯ ಸಮುದಾಯದ ಶಕ್ತಿಯಾಗಿದೆ. ಭಾಷೆ ಯಾವುದೇ ಇರಲಿ ನಮ್ಮ ಸಂಸ್ಕೃತಿ ಭಾರತೀಯ. ನಾವು ‘ವಸುದೈವ ಕುಟುಂಬಕಂ’ ಅನ್ನು ನಂಬುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದರು.

    ಮೂರು ದಿನಗಳ ಯೂರೋಪ್​ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಇಂದು ಡೆನ್ಮಾರ್ಕ್​ ರಾಜಧಾನಿ ಕೋಪನ್ ಹ್ಯಾಗನ್​ನಲ್ಲಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು.

    ನಾವು ಭಾರತದ ಪ್ರತಿಯೊಂದು ಕುಟುಂಬಕ್ಕೂ ಕರೊನಾ ಲಸಿಕೆಯನ್ನು ನೀಡಲು ಸಾಧ್ಯವಾಗದಿದ್ದರೆ, ಪ್ರಪಂಚದ ಮೇಲೆ ಅದರ ಪರಿಣಾಮ ಏನಾಗುತ್ತಿತ್ತು ಎಂಬುದನ್ನು ಒಮ್ಮೆ ಊಹಿಸಿ. ಮೇಡ್​ ಇನ್​ ಇಂಡಿಯಾ ಮತ್ತು ಪರಿಣಾಮಕಾರಿ ಲಸಿಕೆಗಳ ಮೇಲೆ ಭಾರತ ಕೆಲಸ ಮಾಡದೇ ಹೋಗಿದ್ದರೆ ಅಥವಾ ದೊಡ್ಡ ಪ್ರಮಾಣದ ಲಸಿಕಾ ಉತ್ಪಾದನೆಯನ್ನು ಹೊಂದಿಲ್ಲದಿದ್ದರೆ, ಹಲವಾರು ದೇಶಗಳಲ್ಲಿ ಪರಿಸ್ಥಿತಿ ಏನಾಗುತ್ತಿತ್ತು ಎಂಬುದನ್ನು ಊಹಿಸಿ ಎನ್ನುವ ಮೂಲಕ ಕರೊನಾ ವಿರುದ್ಧ ಹೋರಾಡುವಲ್ಲಿ ಭಾರತದ ಜಾಗತಿಕ ಕೊಡುಗೆಯನ್ನು ಪ್ರಧಾನಿ ಮೋದಿ ಸ್ಮರಿಸಿದರು.

    ನಾನು ಜೀವನ ಅಥವಾ ಪರಿಸರಕ್ಕಾಗಿ ಜೀವನ ಶೈಲಿಯ ಬಗ್ಗೆ ಮಾತನಾಡುತ್ತೇನೆ. ನಾವು ಬಳಕೆ-ಆಧಾರಿತ ವಿಧಾನವನ್ನು ತ್ಯಜಿಸಬೇಕಾಗಿದೆ. ಬಳಕೆ ಮತ್ತು ತ್ಯಜಿಸುವಿಕೆಯು ನಮ್ಮ ಗ್ರಹದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ನಮ್ಮ ಬಳಕೆಯನ್ನು ನಮ್ಮ ಅಗತ್ಯಗಳಿಂದ ನಿರ್ಧರಿಸಬೇಕೆ ಹೊರತು ನಮ್ಮ ಜೇಬಿನ ಗಾತ್ರದಿಂದಲ್ಲ ಎಂದು ಪ್ರಧಾನಿ ಸಲಹೆ ನೀಡಿದರು.

    ಭಾರತವು ತನ್ನ ನಾಗರಿಕರನ್ನು ಬಡತನದಿಂದ ಹೊರತಂದಾಗ ಪ್ರಪಂಚದಾದ್ಯಂತ ಬಡತನವು ಕಡಿಮೆಯಾಗುತ್ತದೆ. ಭಾರತದಲ್ಲಿ ಬಡವರಿಗೆ ವಸತಿ, ನೈರ್ಮಲ್ಯ, ಶುದ್ಧ ಕುಡಿಯುವ ನೀರು, ಉಚಿತ ಆರೋಗ್ಯ ರಕ್ಷಣೆ ಮತ್ತು ಆರ್ಥಿಕ ಒಳಗೊಳ್ಳುವಿಕೆಯಂತಹ ಹಲವಾರು ಸೌಲಭ್ಯಗಳನ್ನು ನೀಡಿದಾಗ, ಇದರಿಂದ ವಿಶ್ವದ ಹಲವಾರು ದೇಶಗಳಿಗೆ ಹೊಸ ನಂಬಿಕೆಯನ್ನು ಬರುತ್ತದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

    ಹಲವಾರು ದೊಡ್ಡ ರಾಷ್ಟ್ರಗಳು ಬಳಸುವ ಸಂಯೋಜಿತ ಡೇಟಾಕ್ಕಿಂತ ಹೆಚ್ಚು ಮೊಬೈಲ್ ಡೇಟಾವನ್ನು ಭಾರತವು ಬಳಸುತ್ತದೆ. ಹೊಸ ಬಳಕೆದಾರರು ಕೇವಲ ನಗರ ವಾಸಿಗಳಲ್ಲ, ದೂರದ ಹಳ್ಳಿಯವರಾಗಿದ್ದಾರೆ. ಡೇಟಾವೂ ಭಾರತದ ಹಳ್ಳಿಗಳು ಮತ್ತು ಬಡವರನ್ನು ಸಶಕ್ತಗೊಳಿಸಿರುವುದು ಮಾತ್ರವಲ್ಲದೆ ಪ್ರಮುಖ ಡಿಜಿಟಲ್ ಮಾರುಕಟ್ಟೆಗೆ ಬಾಗಿಲು ತೆರೆದಿದ್ದು, ಇದು ನವ ಭಾರತದ ನೈಜ ಕಥೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. (ಏಜೆನ್ಸೀಸ್​)

    ನೋ ವೇ.. ಚಾನ್ಸೇ.. ಇಲ್ಲ! ಕೆಜಿಎಫ್​-2 ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪುಷ್ಪ-2 ಚಿತ್ರದ ನಿರ್ಮಾಪಕ

    ಹಾರ್ದಿಕ್​ ಪಾಂಡ್ಯ ಬಳಿಯಿರುವ ದುಬಾರಿ ವಾಚ್​ಗಳ ಬೆಲೆ ಕೇಳಿದ್ರೆ ನೀವು ಬೆರಗಾಗೋದು ಖಂಡಿತ!

    ಮದ್ಯದ ಅಮಲಿನಲ್ಲಿ ಮಹಿಳಾ ಅಧಿಕಾರಿ ಕೊಟ್ಟ ಕಾಟಕ್ಕೆ ಹೈರಾಣಾದ ಪೊಲೀಸರು: ವಿಡಿಯೋ ವೈರಲ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts