More

    ಉದ್ಯಮಿ ಪಿಯೂಷ್​ ಜೈನ್​ ಬಗ್ಗೆ ಸ್ವಾರಸ್ಯಕರ ಸಂಗತಿ ಬಿಚ್ಚಿಟ್ಟ ಸ್ಥಳೀಯರು: ಇಷ್ಟೊಂದು ಹಣ ಸಂಪಾದಿಸಿದ್ದು ಹೇಗೆ?

    ಲಖನೌ: ಡೈರೆಕ್ಟರೇಟ್ ಜನರಲ್ ಆಫ್ ಜಿಎಸ್​ಟಿ ಇಂಟೆಲಿಜೆನ್ಸ್ ಮತ್ತು ಸ್ಥಳೀಯ ಕೇಂದ್ರ ಜಿಎಸ್​ಟಿ ಅಧಿಕಾರಿಗಳ ನೇತೃತ್ವದಲ್ಲಿ ಇತ್ತೀಚೆಗಷ್ಟೇ ಉದ್ಯಮಿಯೊಬ್ಬರ ಮನೆಯ ಮೇಲೆ ನಡೆದ ದಾಳಿಯ ವೇಳೆ ಸಿಕ್ಕಂತಹ ರಾಶಿ ರಾಶಿ ಹಣದ ಪ್ರಕರಣವೂ ಇದೀಗ ದೇಶದ ಗಮನ ಸೆಳೆದಿದೆ. ಬರೋಬ್ಬರಿ 250 ಕೋಟಿ ರೂ. ಹಣ ಸಂಗ್ರಹಿಸಿದ್ದ ಉದ್ಯಮಿಯ ಕೆಲವೊಂದಿಷ್ಟು ವಿಚಾರಗಳು ಇದೀಗ ಕುತೂಹಲ ಕೆರಳಿಸಿದೆ.

    ಸರಕು ಮತ್ತು ಸೇವಾ ತೆರಿಗೆ ವಂಚನೆ ಆರೋಪದ ಮೇಲೆ ಉತ್ತರ ಪ್ರದೇಶದ ಕಾನ್ಪುರ ಮೂಲದ ಉದ್ಯಮಿ ಪಿಯೂಷ್​ ಜೈನ್​ರನ್ನು ಇಂದು ಬಂಧಿಸಲಾಗಿದೆ. ಉದ್ಯಮಿಯ ಮನೆ ಹಾಗೂ ಕಾರ್ಖಾನೆಯಲ್ಲಿ ಬರೋಬ್ಬರಿ 250 ಕೋಟಿ ರೂ. ಹಣವನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ದಾಳಿಗೆ ಸಂಬಂಧಿಸಿದ ಫೋಟೋಗ್ರಾಫ್​ಗಳು ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿತ್ತು. ಅದರಲ್ಲಿ ನೋಟಿನ ರಾಶಿಯೇ ಇತ್ತು. ನೋಟಿನ ಕಂತೆಗಳನ್ನು ಬಹುದೊಡ್ಡ ವಾರ್ಡ್​ರೋಬ್​ಗಳಲ್ಲಿ ತುಂಬಿಡಲಾಗಿತ್ತು.​ ಎಲ್ಲ ನೋಟಿನ ಕಂತೆಯನ್ನು ಪ್ಲಾಸ್ಟಿಕ್​ ಕವರ್​ನಿಂದ ಸುತ್ತಿ, ಹಳದಿ ಟೇಪ್​ನಿಂದ ಭದ್ರಪಡಿಸಲಾಗಿತ್ತು.

    ಐಟಿ ಮತ್ತು ಜಿಎಸ್​ಟಿ ಅಧಿಕಾರಿಗಳು ಕೋಣೆಯೊಂದರ ನೆಲದ ಮೇಲೆ ಕುಳಿತಿರುವುದು ಮತ್ತು ಅವರ ಸುತ್ತ ನೋಟಿನ ಕಂತೆಗಳ ರಾಶಿ ಹಾಗೂ ಮೂರು ಹಣ ಎಣಿಸುವ ಯಂತ್ರಗಳಿರುವ ದೃಶ್ಯ ಮತ್ತೊಂದು ಫೋಟೋದಲ್ಲಿತ್ತು. ನಕಲಿ ಇನ್‌ವಾಯ್ಸ್‌ಗಳ ಮೂಲಕ ಮತ್ತು ಇ-ವೇ ಬಿಲ್‌ಗಳಿಲ್ಲದೆ ಸರಕುಗಳ ರವಾನೆಗೆ ಹಣವನ್ನು ಲಿಂಕ್ ಮಾಡಲಾಗಿದೆ. ಈ ನಕಲಿ ಇನ್‌ವಾಯ್ಸ್‌ಗಳನ್ನು ಕಾಲ್ಪನಿಕ ಸಂಸ್ಥೆಗಳ ಹೆಸರಿನಲ್ಲಿ ರಚಿಸಲಾಗಿದೆ ಎಂದು ಜಿಎಸ್‌ಟಿ ಅಧಿಕಾರಿಗಳು ತಿಳಿಸಿದ್ದಾರೆ.

    ತಂದೆಯಿಂದ ಕಲಿತು ಕೋಟಿ ಸಂಪಾದನೆ
    ಪಿಯುಷ್​ ಜೈನ್​ ಸುಗಂಧ ದ್ರವ್ಯ ಇಂಡಸ್ಟ್ರಿ ನಡೆಸುತ್ತಿದ್ದಾರೆ. ಸುಗಂಧ ದ್ರವ್ಯ ಮತ್ತು ಖಾದ್ಯ ತಯಾರಿಸುವುದನ್ನು ರಸಾಯನಶಾಸ್ತ್ರಜ್ಞರಾಗಿದ್ದ ತಮ್ಮ ತಂದೆಯಿಂದ ಕಲಿತ ಜೈನ್​, ಕಾನ್ಪುರದಲ್ಲಿ ಸುಗಂಧ ದ್ರವ್ಯ ಇಂಡಸ್ಟ್ರಿಯನ್ನು ಆರಂಭಿಸಿದರು. ಕಳೆದ 15 ವರ್ಷಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ಕಂಪನಿಯನ್ನು ಸ್ಥಾಪಿಸಿದರು. ಅಲ್ಲದೆ, ಮುಂಬೈ ಮತ್ತು ಗುಜರಾತ್​ನಲ್ಲಿ ಕಂಪನಿ ಉತ್ತಮವಾಗಿ ಬೆಳೆಯಿತು.

    ಉದ್ಯಮದಲ್ಲಿ ಯಶಸ್ಸು ಕಾಣುತ್ತಿದ್ದಂತೆ ಜೈನ್​ ಮತ್ತು ಅವರ ಸಹೋದರ ಅಂಬರೀಶ್, ಕನೌಜ್​ನಲ್ಲಿರುವ ತಮ್ಮ ಮನೆಯನ್ನು 700 ಚದರಕ್ಕೆ ವಿಸ್ತರಿಸಿದರು. ಆದರೆ, ತವರಿಗೆ ಬಂದಾಗಲೆಲ್ಲ ಜೈನ್​, ಎಲ್ಲಿಗೆ ಹೋಗಬೇಕೆಂದರು ತಮ್ಮ ಹಳೆಯ ಸ್ಕೂಟರ್​ ತೆಗೆದುಕೊಂಡು ಹೋಗುತ್ತಿದ್ದರಂತೆ. ಅವರನ್ನು ನೋಡಿ ಈ ಮನುಷ್ಯ ಎಷ್ಟು ಸರಳ ಜೀವಿ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದರಂತೆ. ಆದರೆ, ಜೈನ್​ ಮನೆಯಲ್ಲಿ ಈ ಪತ್ತೆಯಾದ ಹಣದ ಮೊತ್ತವನ್ನು ಕೇಳಿ ಸ್ಥಳೀಯರು ಶಾಕ್​ ಆಗಿದ್ದಾರೆ.

    ಹಣದ ಜತೆಯಲ್ಲಿ ಚಿನ್ನ, ಬೆಳ್ಳಿ, ಲೆಕ್ಕವಿಲ್ಲದಷ್ಟು ಗಂಧದ ಎಣ್ಣೆ ಮತ್ತು ಭಾರೀ ಪ್ರಮಾಣದ ಸುಗಂಧ ದ್ರವ್ಯವನ್ನು ಜೈನ್​ ಮನೆ ಹಾಗೂ ಕಾರ್ಖಾನೆಯಲ್ಲಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಜೈನ್​ರನ್ನು ಬಂಧಿಸಿರುವ ಅಧಿಕಾರಿಗಳು ಹೆಚ್ಚಿನ ವಿಚಾರಣೆಗಾಗಿ ಗುಜರಾತಿನ ಅಹಮದಾಬಾದ್​ ನಗರಕ್ಕೆ ಕರೆತಂದಿದ್ದಾರೆ. (ಏಜೆನ್ಸೀಸ್​)

    ನೋಟಿನ ರಾಶಿಯನ್ನೇ ತುಂಬಿಟ್ಟಿದ್ದ ಉದ್ಯಮಿ ಅರೆಸ್ಟ್​​: ವಶಕ್ಕೆ ಪಡೆದ ಒಟ್ಟು ಹಣದ ಮೊತ್ತ ಕೇಳಿದ್ರೆ ದಂಗಾಗ್ತೀರಾ!

    500 ರೂ. ನೋಟಿನಲ್ಲಿ ಹಸಿರು ಪಟ್ಟಿಯು ಗಾಂಧಿ ಫೋಟೋ ಬಳಿಯಿದ್ದರೆ ಅದು ನಕಲಿನಾ? ಇಲ್ಲಿದೆ ನಿಜಾಂಶ!

    ಮೊದಲ ಐಟಂ ಸಾಂಗ್​ನಲ್ಲೇ ಸಮಂತಾ ದಾಖಲೆ: ಗ್ಲೋಬಲ್​ ಮ್ಯೂಸಿಕ್​ ವಿಡಿಯೋದಲ್ಲಿ ನಂ 1 ಸ್ಥಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts