More

    ರಶ್ಮಿಕಾ ಮಂದಣ್ಣ ಹೊಸ ಫೋಟೋಶೂಟ್​: ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ ಕಿರಿಕ್​ ಬ್ಯೂಟಿಯ ಹಾಟ್ ಅವತಾರಗಳು

    ಹೈದರಾಬಾದ್​: ನ್ಯಾಷನಲ್​ ಕ್ರಷ್​ ರಶ್ಮಿಕಾ ಮಂದಣ್ಣ ಅವರ ಇತ್ತೀಚಿನ ಫೋಟೋಶೂಟ್​ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಪಡ್ಡೆ ಹುಡುಗರ ಹೃದಯದ ಬಡಿತವನ್ನು ಹೆಚ್ಚಿಸಿದೆ. ಪ್ರಖ್ಯಾತ ಮ್ಯಾಗಜಿನ್​ ಒಂದರ ಕವರ್​ ಪೇಜ್​ಗಾಗಿ ರಶ್ಮಿಕಾ ಹಾಟ್​ ಆ್ಯಂಡ್​ ಬೋಲ್ಡ್​ ಫೋಟೋಶೂಟ್​ ಮಾಡಿಸಿದ್ದಾರೆ.

    ಟ್ರಾವೆಲ್​ ಆ್ಯಂಡ್​ ಲೀಸರ್​ ಇಂಡಿಯಾ, ಇನ್​ಸ್ಟಾಗ್ರಾಂನಲ್ಲಿ ರಶ್ಮಿಕಾ ಫೋಟೋಗಳನ್ನು ಶೇರ್​ ಮಾಡಿಕೊಂಡಿದೆ. ಚಿನ್ನದ ಹುಡುಗಿ ರಶ್ಮಿಕಾ ಮಂದಣ್ಣ ಅಕ್ಟೋಬರ್‌ನಲ್ಲಿ ಗುಡ್‌ಬೈ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ತಯಾರಿ ನಡೆಸುತ್ತಿರುವಾಗ, ನಮ್ಮ 16ನೇ ವಾರ್ಷಿಕೋತ್ಸವದ ಕವರ್ ಶೂಟ್‌ಗಾಗಿ ಟ್ರಾವೆಲ್​ ಆ್ಯಂಡ್​ ಲೀಸರ್​ ಇಂಡಿಯಾ ಮತ್ತು ಎಸ್​ಎ ರಶ್ಮಿಕಾ ಅವರನ್ನು ಬಿಸಿಲ ನಾಡು ಅಬುಧಾಬಿಗೆ ಕರೆದೊಯ್ಯಿತು ಎಂದು ಫೋಟೋಗೆ ಶೀರ್ಷಿಕೆ ನೀಡಲಾಗಿದೆ. ಟ್ರಾವೆಲ್​ ಆ್ಯಂಡ್​ ಲೀಸರ್​ ಇಂಡಿಯಾವು ರಶ್ಮಿಕಾರ ಸಾಕಷ್ಟು ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದು, ಜಾಲತಾಣದಲ್ಲಿ ವೈರಲ್​ ಆಗಿವೆ.

    ರಶ್ಮಿಕಾ ಅವರು ಸಾಕಷ್ಟು ಸಿನಿಮಾಗಳಲ್ಲಿ ಬಿಜಿಯಾಗಿದ್ದು, ಇದರ ಜೊತೆಗೆ ಅನೇಕ ಬ್ರ್ಯಾಂಡ್​ಗಳನ್ನು ಪ್ರಚಾರ ಮಾಡುತ್ತಿದ್ದಾರೆ. ಅದರಲ್ಲಿ ಟ್ರಾವೆಲ್​ ಆ್ಯಂಡ್​ ಲೀಸರ್​ ಇಂಡಿಯಾ ಕೂಡ ಒಂದು. ಅಬುಧಾಬಿ ಪ್ರವಾಸೋದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ರಶ್ಮಿಕಾರ ಈ ಫೋಟೋಶೂಟ್​ ನಡೆಸಲಾಗಿದೆ. ವಿವಿಧ ಭಂಗಿಗಳಲ್ಲಿ, ವಿವಿಧ ಉಡುಗೆ ತೊಟ್ಟು ರಶ್ಮಿಕಾ ಕ್ಯಾಮೆರಾಗೆ ಪೋಸ್​ ನೀಡಿದ್ದಾರೆ.

    ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ರಶ್ಮಿಕಾ ಅವರು ಕೊನೆಯದಾಗಿ ಅಮಿತಾಭ್​ ಬಚ್ಚನ್​ ಅಭಿನಯದ ಗುಡ್​ಬೈ ಸಿನಿಮಾದಲ್ಲಿ ನಟಿಸಿದರು. ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಮಕಾಡೆ ಮಲಗಿತು. ಆದರೂ ರಶ್ಮಿಕಾ ಅವರು ಇನ್ನು ಅನೇಕ ಚಿತ್ರಕ್ಕೆ ಸಹಿ ಹಾಕಿದ್ದು, ಅಲ್ಲು ಅರ್ಜುನ್​ ಅಭಿನಯದ ಪುಷ್ಪ ಸಿನಿಮಾದ ಚಿತ್ರೀಕರಣ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. (ಏಜೆನ್ಸೀಸ್​)

    ನಯನತಾರ ಬಾಡಿಗೆ ತಾಯ್ತನ ಕೇಸ್​ಗೆ ರೋಚಕ ಟ್ವಿಸ್ಟ್​: ಅಧಿಕೃತ ದಾಖಲೆಗಳಿಂದ ಅಸಲಿ ಮದುವೆ ಸಂಗತಿ ಬಯಲು

    ಬಳ್ಳಾರಿಯಲ್ಲಿ ಭಾರತ್​ ಜೋಡೋ ಯಾತ್ರೆ ವೇಳೆ ವಿದ್ಯುತ್​ ಅವಘಡ: ಐವರಿಗೆ ಗಾಯ, ಪರಿಹಾರ ಘೋಷಿಸಿದ ರಾಹುಲ್

    ಸಲಾರ್ ಟೀಮ್​ನಿಂದ ಹೊರಬಿತ್ತು ಮತ್ತೊಂದು ಪೋಸ್ಟರ್; ಕುತೂಹಲ ಕೆರಳಿಸುತ್ತಿದೆ ಪೃಥ್ವಿರಾಜ್ ಲುಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts