More

    ಗ್ರಾಮಕ್ಕೆ ನೀರು, ರಸ್ತೆ ಕೊಡಿ ಎಂದ ಯುವಕನಿಗೆ ಶಾಸಕರಿಂದ ಕಪಾಳಮೋಕ್ಷ: ಆತ ಕೆಟ್ಟ ಪದ ಬಳಸಿದ, ಅದ್ಕೆ ಬುದ್ಧಿ ಹೇಳ್ದೆ…

    ಪಾವಗಡ(ತುಮಕೂರು): ಗ್ರಾಮಕ್ಕೆ ನೀರಿಲ್ಲ, ರಸ್ತೆ ಇಲ್ಲವೆಂದು ಸಮಸ್ಯೆಗಳನ್ನು ಹೇಳಿಕೊಂಡ ಯುವಕನಿಗೆ ಕಪಾಳಮೋಕ್ಷ ಮಾಡಿದ ಪಾವಗಡ ಶಾಸಕ ವೆಂಕಟರವಣಪ್ಪ ಇದೀಗ ಸ್ಪಷ್ಟನೆ ಕೊಟ್ಟಿದ್ದಾರೆ.

    ನಾನು ಸಭೆ ಮುಗಿಸಿ ಹೊರಗಡೆ ಬಂದಾಗ ನಾಗೇಹಳ್ಳಿಯ ಯುವಕ ರಸ್ತೆ ಹಾಳಾಗಿದೆ ಎಂದು ಕೇಳಿದ. ರಸ್ತೆಗೆ 3.5 ಕೋಟಿ ರೂಪಾಯಿ ಅನುದಾನ ಬಿಡುಗಡೆ ಆಗಿದೆ, ಶೀಘ್ರದಲ್ಲೇ ಭೂಮಿ ಪೂಜೆ ಮಾಡ್ತೀನಿ ಅಂದೆ. ಅವನು ಬಹಳ ಕೆಟ್ಟ ಪದಗಳನ್ನು ಬಳಸಿದ. ಹೇ.. ಹಾಗೆಲ್ಲ ಮಾತನಾಡಬಾರದು ಎಂದು ಬುದ್ಧಿ ಹೇಳಿಕಳಿಸಿದೆ ಎಂದು ವೆಂಕಟರವಣಪ್ಪ ತಿಳಿಸಿದ್ದಾರೆ.

    ತಹಸೀಲ್ದಾರ್​ ಕಚೇರಿಯಲ್ಲಿ ಮಂಗಳವಾರ ಬಗರ್​ಹುಕುಂ ಸಮಿತಿ ಸಭೆ ಮುಗಿಸಿ ಹೊರಗೆ ಬಂದ ವೆಂಕಟರವಣಪ್ಪ ಬಳಿ ನಾಗಲಮಡಿಕೆ ಹೋಬಳಿಯ ಹುಸೇನ್​ಪುರದ ನಾಗೇನಹಳ್ಳಿ ಮೂಲದ ನರಸಿಂಹಮೂರ್ತಿ, ನಮ್ಮ ಗ್ರಾಮಕ್ಕೆ ನೀರಿಲ್ಲ, ರಸ್ತೆಯಿಲ್ಲವೆಂದು ಸಮಸ್ಯೆ ಹೇಳಿಕೊಳ್ಳಲು ಮುಂದಾದ. ಈ ವೇಳೆ ಕೆರಳಿದ ವೆಂಕಟರವಣಪ್ಪ, ಏಕಾಏಕಿ ಕಪಾಳಕ್ಕೆ ಬಾರಿಸಿ ಇಲ್ಲಿಂದ ಹೋಗ್ತೀಯೋ ಇಲ್ಲವೋ, ನಿನ್ನನ್ನು ಪೊಲೀಸ್​ ಠಾಣೆಗೆ ಕಳುಹಿಸುತ್ತೇನೆ ಎನ್ನುತ್ತಿದ್ದಂತೆ ಯುವಕ ಕೂಡ ಗಾಬರಿಗೊಂಡಿದ್ದಾನೆ. ಸಮಸ್ಯೆ ಹೇಳಿಕೊಂಡು ಬಂದ ನರಸಿಂಹಮೂರ್ತಿಗೆ ಪರಿಹಾರ ಹೇಳುವ ಬದಲು ವೆಂಕಟರವಣಪ್ಪ ಕಪಾಳ ಮೋಕ್ಷ ಮಾಡಿರುವ ವಿಡಿಯೋ ಈಗ ಎಲ್ಲೆಡೆ ವೈರಲ್​ ಆಗಿದ್ದು, ಶಾಸಕರ ನಡೆ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಅಪಘಾತದಲ್ಲಿ ಟಿ.ಬಿ.ಜಯಚಂದ್ರಗೆ ಗಾಯ: ಮಾಜಿ ಸಚಿವರ ಆರೋಗ್ಯ ಸ್ಥಿತಿ ಹೇಗಿದೆ? ಆಸ್ಪತ್ರೆಯಿಂದಲೇ ವಿಡಿಯೋ ಬಿಡುಗಡೆ

    ಜೈನ ಭಗವತಿ ದೀಕ್ಷೆ ಸ್ವೀಕರಿಸಲಿದ್ದಾರೆ ಶಿವಮೊಗ್ಗದ ಬಾಲಕಿ! ಅತ್ತೆಯ ಪ್ರಭಾವ… ಸುಖ-ವೈಭೋಗಕ್ಕೆ ವಿದಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts