More

    ಮದ್ವೆಯಾದ 6 ವರ್ಷದಿಂದ ಲೈಂಗಿಕ ಸಂಭೋಗವಿಲ್ಲ: ಸಂಸದನ ಅಳಲು, ತಾರಾದಂಪತಿಗೆ ಚಾಟಿ ಬೀಸಿದ ಕೊರ್ಟ್​

    ಭುವನೇಶ್ವರ: ಒಡಿಶಾದ ಪ್ರಖ್ಯಾತ ತಾರಾ ದಂಪತಿಯ ಡಿವೋರ್ಸ್​ ಕಿತ್ತಾಟವು ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಒಡಿಶಾ ಹೈಕೋರ್ಟ್​ ಇಬ್ಬರನ್ನು ತರಾಟೆಗೆ ತೆಗೆದುಕೊಂಡಿದೆ. ನಟ ಕಂ ರಾಜಕಾರಣಿಯಾಗಿರುವ ಅನುಭವ್​ ಮೊಹಂತಿ ಹಾಗೂ ನಟಿ ವರ್ಷಾ ಪ್ರಿಯದರ್ಶಿನಿ ಡಿವೋರ್ಸ್ ಪ್ರಕರಣ ಸದ್ಯ ಹೈಕೋರ್ಟ್​ನಲ್ಲಿ ವಿಚಾರಣೆ ಹಂತದಲ್ಲಿದೆ. ಹೀಗಿರುವಾಗ ತಾರಾದಂಪತಿ ಇಬ್ಬರು ಸುಮ್ಮನಿರುವುದು ಬಿಟ್ಟು, ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಕಿತ್ತಾಡಿಕೊಳ್ಳುತ್ತಿದ್ದು, ಇದನ್ನು ಗಮನಿಸಿರುವ ಕೋರ್ಟ್ ಇಬ್ಬರಿಗೂ ಚಾಟಿ ಬೀಸಿದೆ.

    ಡಿವೋರ್ಸ್​ ಪ್ರಕರಣ ಒಂದು ತೀರ್ಮಾನಕ್ಕೆ ಬರುವವರೆಗೂ ಸಾಮಾಜಿಕ ಜಾಲತಾಣದಲ್ಲಿ ಪತ್ನಿ ಪ್ರಿಯದರ್ಶಿನಿ ವಿರುದ್ಧ ಯಾವುದೇ ವಿಡಿಯೋ ಅಥವಾ ಕಾಮೆಂಟ್​ ಮಾಡುವಂತಿಲ್ಲ ಎಂದು ಬಿಜೆಡಿ ಸಂಸದರಾಗಿರುವ ಅನುಭವ್​ ಮೊಹಂತಿಗೆ ಕೋರ್ಟ್​ ತಿಳಿಹೇಳಿದೆ. ಪ್ರಿಯದರ್ಶಿನಿಗೂ ಕೂಡ ನ್ಯಾಯಾಲಯ ಇದೇ ಎಚ್ಚರಿಕೆಯನ್ನು ನೀಡಿದೆ. ನಿನ್ನೆ ವಿಚಾರಣೆ ವೇಳೆ ಕೋರ್ಟ್​ ಇಬ್ಬರಿಗೂ ಆದೇಶಿಸಿದೆ.

    ಮೇ 26ರಂದು ಒಡಿಶಾ ಹೈಕೋರ್ಟ್​ನಲ್ಲಿ ಪ್ರಿಯದರ್ಶಿನಿ ಅವರು ಅರ್ಜಿಯನ್ನು ಸಲ್ಲಿಸಿ, ಸಾಮಾಜಿಕ ಜಾಲತಾಣದಲ್ಲಿ ನನ್ನ ಪತಿ ಅನುಭವ್​ ನನ್ನ ವಿರುದ್ಧ ತಪ್ಪು ಮತ್ತು ದ್ವೇಷಪೂರಿತ ಕಾಮೆಂಟ್​ಗಳನ್ನು ಮಾಡುತ್ತಿದ್ದು, ಅದನ್ನು ತಡೆಯಿರಿ ಎಂದು ಮನವಿ ಮಾಡಿಕೊಂಡಿದ್ದರು. ಅನುಭವ್ ಮೊಹಂತಿ ತಮ್ಮ 4ನೇ ವೀಡಿಯೊವನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಂಡ ಬೆನ್ನಲ್ಲೇ ಪತ್ನಿ ಕೋರ್ಟ್​ ಮೆಟ್ಟಿಲೇರಿದರು. ವಿಡಿಯೋದಲ್ಲಿ ದೂರವಾದ ಸಂಬಂಧದ ಹಿಂದಿನ ಸತ್ಯವನ್ನು ಬಹಿರಂಗಪಡಿಸುವುದಾಗಿ ಅನುಭವ್​ ಹೇಳಿದ್ದರು. ಪ್ರಿಯದರ್ಶಿನಿ ಅವರ ಅರ್ಜಿಯ ಆಧಾರದ ಮೇಲೆ ಐಪಿಸಿ ಸೆಕ್ಷನ್ 509 ಮತ್ತು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

    ಮೇ 26ರ ಗುರುವಾರ ಪ್ರಿಯದರ್ಶಿನಿ ಹೈಕೋರ್ಟ್‌ ಮೊರೆ ಹೋದ ಬೆನ್ನಲ್ಲೇ ಪತ್ನಿಯ ವಿರುದ್ಧ ಗಂಭೀರ ಆರೋಪ ಮಾಡಿದ ಮೊಹಂತಿ, ಪ್ರಿಯದರ್ಶಿನಿ ಅವರು ನಕಲಿ ಖಾತೆಗಳು ಮತ್ತು ಫ್ಯಾನ್ ಪೇಜ್​ಗಳನ್ನು ನಡೆಸುತ್ತಿದ್ದಾರೆ. ಕೆಲವು ನಕಲಿ ಖಾತೆಗಳಿಗೆ ಮೋಸ ಹೋಗಬೇಡಿ. ನನ್ನನ್ನು ಬೆಂಬಲಿಸುವ ಅಥವಾ ಸತ್ಯವನ್ನು ಮಾತನಾಡುವ ಜನರ ವಿರುದ್ಧ ನಿಂದನೆ, ವಾದ, ಕೆಟ್ಟಭಾಷೆಗಳನ್ನು ಬಳಸಲು ಪ್ರಿಯದರ್ಶಿನಿ ನಕಲಿ ಖಾತೆ ರಚಿಸಿದ್ದಾರೆ ಎಂದು ಮೊಹಂತಿ ತಮ್ಮ ಫೇಸ್‌ಬುಕ್ ಪೇಜ್​ನಲ್ಲಿ ಬರೆದುಕೊಂಡಿದ್ದಾರೆ.

    ಮೂಲಗಳ ಪ್ರಕಾರ ಪ್ರಿಯದರ್ಶಿನಿ ಈಗಾಗಲೇ ಮೊಹಂತಿ ವಿರುದ್ಧ ಎರಡು ಪೊಲೀಸ್​ ದೂರುಗಳನ್ನು ದಾಖಲಿಸಿದ್ದಾರೆ. ಮೇ 25 ರಂದು ಪ್ರಿಯದರ್ಶಿನಿ ಕಟರ್​ನ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ನನ್ನ ವಿರುದ್ಧ ವೀಡಿಯೊಗಳನ್ನು ಪೋಸ್ಟ್ ಮಾಡುವ ಮೂಲಕ ಸಾರ್ವಜನಿಕರಲ್ಲಿ ನನ್ನ ಇಮೇಜ್ ಹಾಳು ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಇದಕ್ಕೂ ಮುನ್ನ ಮೇ 22 ರಂದು ಪುರಿಘಾಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ನನ್ನ ಪತಿ ಮಾನಹಾನಿ ಮಾಡಲು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳನ್ನು ಅಪ್‌ಲೋಡ್ ಮಾಡಿದ್ದಾನೆ ಎಂದು ಆರೋಪಿಸಿದ್ದರು.

    ಅನುಭವ್ ಮೊಹಾಂತಿ ಇತ್ತೀಚೆಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಸಾಕಷ್ಟು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದು, ತಮ್ಮಿಂದ ದೂರವಾದ ಪತ್ನಿ ಪ್ರಿಯದರ್ಶಿನಿಯಿಂದ ಏಕೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇನೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಇಲ್ಲಿಯವರೆಗೆ 4 ವೀಡಿಯೊಗಳನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ತಮ್ಮ ಮತ್ತು ಪತ್ನಿಯ ನಡುವಿನ ಸಾಂಸಾರಿಕ ಜೀವನದ ಪತನದ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದಾರೆ.

    ಕಳೆದ ಮೇ 21 ರಂದು ಬಿಡುಗಡೆಯಾದ ‘ಅನ್‌ಟೋಲ್ಡ್ ಸ್ಟೋರಿ’ ಎಂಬ ಶೀರ್ಷಿಕೆಯ ವಿಡಿಯೋದ ಎರಡನೇ ಭಾಗದಲ್ಲಿ, ಅನುಭವ್ ಮೊಹಾಂತಿ ಅವರು ತಮ್ಮ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ಪ್ರಮುಖ ಕಾರಣವನ್ನು ತಿಳಿಸಿದರು. ಮದುವೆ ಆಗಿ 6 ವರ್ಷ ಕಳೆದರೂ ನಾನು ಆಕೆಯೊಂದಿಗೆ ಲೈಂಗಿಕ ಸಂಪರ್ಕ ಹೊಂದಿಲ್ಲ. ಲೈಂಗಿಕ ಸಂಬಂಧಕ್ಕೆ ಪ್ರಿಯದರ್ಶಿನಿಯ ವಿರೋಧವಿದೆ. ಡಿವೋರ್ಸ್​ ಪಡೆಯಲು ಸಲ್ಲಿಸಿರುವ ಅರ್ಜಿಯಲ್ಲಿ ಇದನ್ನು ಉಲ್ಲೇಖಿಸಿದ್ದೇನೆ. ಮದುವೆ ಆದಾಗಿನಿಂದ ಆಕೆ ನನಗೆ ಯಾವುದೇ ವೈವಾಹಿಕ ಹಕ್ಕುಗಳನ್ನು ನೀಡಿಲ್ಲ. ಇಡೀ ಆರು ವರ್ಷಗಳಿಂದಲೂ ಆಕೆ ನನ್ನ ಕಲ್ಪನೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾಳೆ. ಗಂಡನಾದವನು ಎಷ್ಟು ದಿನ ತಾನೇ ಸಹಿಸಿಕೊಳ್ಳುತ್ತಾನೆ. ಹೀಗಾಗಿ ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ್ದೇನೆ. ನನ್ನ ನಿರ್ಧಾರ ತಪ್ಪೋ? ಅಥವಾ ಸರಿಯೋ? ಎಂಬುದನ್ನು ನಿರ್ಧರಿಸುವುದು ನಿಮಗೆ ಬಿಟ್ಟದ್ದು ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

    ನಾನು ಹೇಳಿದ್ದರ ಬಗ್ಗೆ ನಗಬೇಡಿ ಎಂದು ಅನುಭವ್ ಮೊಹಾಂತಿ ಅವರು ಜನರನ್ನು ಕೇಳಿಕೊಂಡಿದ್ದಾರೆ. ದೈಹಿಕ ಸಂಬಂಧವು ವೈವಾಹಿಕ ಜೀವನದ ಅವಿಭಾಜ್ಯ ಅಂಗವಾಗಿದೆ. ಮದುವೆಯಾದ ಆರು ವರ್ಷಗಳ ನಂತರ ವಿಚ್ಛೇದನ ಅರ್ಜಿಯನ್ನು ಏಕೆ ಸಲ್ಲಿಸಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿದ ಅವರು ಸಂಬಂಧವನ್ನು ಉಳಿಸುವ ಎಲ್ಲ ಪ್ರಯತ್ನಗಳನ್ನು ಮಾಡಿದ್ದೇನೆ. ಆದರೂ ಇಬ್ಬರ ನಡುವೆ ಪರಿಸ್ಥಿತಿ ಸುಧಾರಿಸಲಿಲ್ಲ. ನಾನು ವಿಚ್ಛೇದನವನ್ನು ಸಲ್ಲಿಸಲು ನಿರ್ಧರಿಸುವ ಮೊದಲು, ನನ್ನ ಕುಟುಂಬದ ಎಲ್ಲ ಸದಸ್ಯರು, ವಿಶೇಷವಾಗಿ ಹಿರಿಯರು, ಅವಳನ್ನು ಮನವೊಲಿಸಲು ಬಯಸಿದ್ದರು. ನಮ್ಮ ಎರಡೂ ಕುಟುಂಬಗಳು ಈ ವಿಷಯವನ್ನು ಒಟ್ಟಿಗೆ ಹಲವಾರು ಬಾರಿ ಚರ್ಚಿಸಿದ್ದೇವೆ ಎಂದು ಮೊಹಂತಿ ಹೇಳಿದ್ದಾರೆ.

    ಇದೇ ಸಂದರ್ಭದಲ್ಲಿ ಪ್ರಿಯದರ್ಶಿನಿಯನ್ನು ನಿರ್ಲಕ್ಷಿಸಿ ಆಕೆಯ ಸಂತೋಷ ಮತ್ತು ದಾಂಪತ್ಯ ಜೀವನವನ್ನು ಹಾಳು ಮಾಡಿದ್ದಾನೆ ಎಂಬ ಆರೋಪವನ್ನು ಅವರು ನಿರಾಕರಿಸಿದರು. (ಏಜೆನ್ಸೀಸ್​)

    ರಾಖಿಗೆ ದುಬೈನಲ್ಲಿ ಮನೆ ಕೊಡಿಸಿದ ಮೈಸೂರಿನ ಬಾಯ್ ಫ್ರೆಂಡ್! ರಾಖಿ ಬಗ್ಗೆ ಆದಿಲ್​ ಹೇಳಿಕೆ ಕೇಳಿದ್ರೆ ದಂಗಾಗ್ತೀರಾ

    ಸಾರ್ವಜನಿಕವಾಗಿ ರೋಹಿತ್ ಚಕ್ರತೀರ್ಥ ಕ್ಷಮೆ ಕೇಳಲಿ: ರಾಜ್ಯ ಒಕ್ಕಲಿಗರ ಸಂಘ ಆಗ್ರಹ

    ಕೆಜಿಎಫ್​ ಬಾಬು ಮನೆ ಮೇಲೆ IT ದಾಳಿ: ನಾಮಪತ್ರದಲ್ಲಿನ ಮಾಹಿತಿ ನೋಡಿ ಐಟಿ ಕಣ್ಣು ಬಿತ್ತಾ? ಬಾಬು ಮುಂದೆ ಡಿಕೆಶಿ, ಎಂಟಿಬಿ ಆಸ್ತಿಯೂ ಕಮ್ಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts