More

    ದಶಕಗಳ ಹಿಂದೆ ಕಳಚಿಕೊಂಡಿದ್ದ ಜೀವವೈವಿಧ್ಯದ ಕೊಂಡಿ ಮರುಸ್ಥಾಪನೆ: ಚೀತಾಗಳ ಆಗಮನ, ಪ್ರಧಾನಿ ಸಂತಸ

    ಭೋಪಾಲ್​: ದೇಶದಲ್ಲಿ ದಶಕಗಳ ಹಿಂದೆ, ಜೀವವೈವಿಧ್ಯದ ಹಳೆಯ ಕೊಂಡಿ ಕಳಚಿಕೊಂಡಿತ್ತು ಮತ್ತು ಅಳಿದುಹೋಗಿತ್ತು. ಆದರೆ, ಇಂದು ಅದನ್ನು ಮರುಸ್ಥಾಪಿಸಲು ಅವಕಾಶವೊಂದು ನಮಗೆ ಒದಗಿ ಬಂದಿದೆ. ಈ ಚೀತಾಗಳೊಂದಿಗೆ ಭಾರತದ ಪ್ರಕೃತಿ ಪ್ರೀತಿಯ ಪ್ರಜ್ಞೆಯು ಪೂರ್ಣ ಬಲದಿಂದ ಜಾಗೃತಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

    ನಮೀಬಿಯಾದಿಂದ ವಿಶೇಷ ವಿಮಾನ ಮೂಲಕ ಕರೆತರಲಾದ 8 ಚೀತಾಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನ್ಮ ದಿನದಂದೇ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡಿದ ಬಳಿಕ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದರು.

    ದಶಕಗಳ ಬಳಿಕ ಇಂದು ಚೀತಾಗಳು ನಮ್ಮ ನೆಲಕ್ಕೆ ಮರಳಿವೆ. ಈ ಐತಿಹಾಸಿಕ ದಿನದಂದು ಎಲ್ಲ ಭಾರತೀಯರಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಮತ್ತು ನಮೀಬಿಯಾ ಸರ್ಕಾರಕ್ಕೂ ಧನ್ಯವಾದ ತಿಳಿಸುತ್ತೇನೆ. ನಮೀಬಿಯಾ ನೆರವು ಇಲ್ಲದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.

    ದೇಶದಿಂದ ಚೀತಾಗಳು ಅಳಿದು ಹೋಗಿವೆ ಎಂದು 1952ರಲ್ಲಿ ನಾವು ಘೋಷಣೆ ಮಾಡಿದ್ದು ದುರದೃಷ್ಟಕರ ಸಂಗತಿ. ಇದಾದ ಬಳಿಕವೂ ಹಲವು ದಶಕಗಳಿಂದ ಚೀತಾಗಳಿಗೆ ಪುನರ್ವಸತಿ ಕಲ್ಪಿಸಲು ಯಾವುದೇ ಅರ್ಥಪೂರ್ಣ ಪ್ರಯತ್ನಗಳು ನಡೆದಿರಲಿಲ್ಲ. ಆದರೆ, ನಾವಿಂದು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸುತ್ತಿರುವಾಗ, ದೇಶವು ಹೊಸ ಶಕ್ತಿಯೊಂದಿಗೆ ಚೀತಾಗಳನ್ನು ಪುನರ್ವಸತಿ ಮಾಡಲು ಪ್ರಾರಂಭಿಸಿದ್ದೇವೆ ಎಂದರು.

    ಅಂತಾರಾಷ್ಟ್ರೀಯ ಮಾರ್ಗಸೂಚಿಗಳನ್ನು ಅನುಸರಿಸಿ, ಭಾರತವು ಈ ಚೀತಾಗಳನ್ನು ನೆಲೆಗೊಳಿಸಲು ತನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಿದೆ. ನಮ್ಮ ಪ್ರಯತ್ನ ವಿಫಲವಾಗಲು ಬಿಡಬಾರದು ಎಂದು ಕರೆ ಕೊಟ್ಟರು.

    ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಚೀತಾಗಳನ್ನು ನೋಡಲು ಜನರು ತಾಳ್ಮೆಯನ್ನು ತೋರಿಸಬೇಕು ಮತ್ತು ಕೆಲವು ತಿಂಗಳು ನೀವು ಕಾಯಬೇಕು. ಈ ಚೀತಾಗಳು ಈ ಪ್ರದೇಶದ ಬಗ್ಗೆ ಅರಿವಿಲ್ಲದೆ ಅತಿಥಿಗಳಾಗಿ ಬಂದಿವೆ. ಅವು ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಒಗ್ಗಿಕೊಂಡು ತಮ್ಮ ಮನೆಯಾನ್ನಾಗಿ ಸ್ವೀಕರಿಸುವವರೆಗೂ ಚೀತಾಗಳಿಗೆ ಸಮಯವನ್ನು ನೀಡಬೇಕಾಗಿದೆ ಎಂದು ಹೇಳಿದರು.

    ಪ್ರಕೃತಿ ಮತ್ತು ಪರಿಸರ, ಪ್ರಾಣಿ-ಪಕ್ಷಿಗಳು, ಭಾರತಕ್ಕೆ ಕೇವಲ ಸುಸ್ಥಿರತೆ ಮತ್ತು ಭದ್ರತೆ ಮಾತ್ರವಲ್ಲ. ನಮಗೆ, ಅವು ನಮ್ಮ ಸಂವೇದನೆ ಮತ್ತು ಆಧ್ಯಾತ್ಮಿಕತೆಯ ಆಧಾರವಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು. (ಏಜೆನ್ಸೀಸ್​)

    ನಮೀಬಿಯಾ ಚೀತಾಗಳಿಗೆ ಕುನೋ ರಾಷ್ಟ್ರೀಯ ಉದ್ಯಾನವನ ಸೂಕ್ತ ಯಾಕೆ?

    ಮದ್ವೆಯಾದ 8 ವರ್ಷದ ಬಳಿಕ ಕಳಚಿತು ಗಂಡನ ಮುಖವಾಡ: ಹನಿಮೂನ್​ ವೇಳೆ ಗೊತ್ತಾಗದ ರಹಸ್ಯ ಈಗ ಬಯಲು! ​

    ಭಾರತದ ಮಣ್ಣನ್ನು ಸ್ಪರ್ಶಿಸಿದ ಚೀತಾಗಳು! ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಸ್ವಾಗತಿಸಿದ ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts