ಬೆಂಗಳೂರು: ನಟ ನಿಖಿಲ್ ಕುಮಾರಸ್ವಾಮಿ- ರೇವತಿ ದಂಪತಿಗೆ ಗಂಡು ಮಗು ಜನಿಸಿದ್ದು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.
ಮಗು ಜನಿಸಿರುವ ವಿಚಾರವನ್ನು ಜೆಡಿಎಸ್ ಮುಖಂಡ ಶರವಣನ್ ಅವರು ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಶ್ರೀಯುತ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿರವರಿಗೆ ಗಂಡು ಮಗು ಜನನವಾಗಿದೆ. ಮಾಜಿ ಪ್ರಧಾನಿ ಶ್ರೀ ಹೆಚ್ ಡಿ ದೇವೇಗೌಡರ ಮರಿ-ಮೊಮ್ಮಗ ಆಗಮನ ಅತ್ಯಂತ ಸಂತೋಷ ತಂದಿರುವಂತಹ ವಿಷಯ. ಶಿರಡಿ ಸಾಯಿಬಾಬನ ಅನುಗ್ರಹ ಮಗುವ ಮೇಲಿರಲೆಂದು ಆಶಿಸುತ್ತೇನೆಂದು ಟ್ವೀಟ್ ಮಾಡಿದ್ದಾರೆ.
ಶ್ರೀಯುತ ನಿಖಿಲ್ ಕುಮಾರಸ್ವಾಮಿ @Nikhil_Kumar_k ಹಾಗೂ ರೇವತಿ ರವರಿಗೆ ಗಂಡು ಮಗು ಜನನವಾಗಿದೆ.. ಮಾಜಿ ಪ್ರಧಾನಿ ಶ್ರೀ ಹೆಚ್ ಡಿ ದೇವೇಗೌಡರ ಮರಿ-ಮೊಮ್ಮಗ ಆಗಮನ ಅತ್ಯಂತ ಸಂತೋಷ ತಂದಿರುವಂತಹ ವಿಷಯ.
ಶಿರಡಿ ಸಾಯಿಬಾಬನ ಅನುಗ್ರಹ ಮಗುವ ಮೇಲಿರಲೆಂದು ಆಶಿಸುತ್ತೇನೆ.— Sharavana TA (@SharavanaTa) September 24, 2021
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಗು ಜನನವಾಗಿದೆ. ಸೆಪ್ಟೆಂಬರ್ 13ರಂದು ರೇವತಿ ಅವರಿಗೆ ಅದ್ದೂರಿಯಾಗಿ ಸೀಮಂತ ಕಾರ್ಯಕ್ರಮ ನಡೆದಿತ್ತು. ಶುಭ ಶುಕ್ರವಾರದಂದೇ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕುಟುಂಬಕ್ಕೆ ವಾರಸ್ದಾರನ ಆಗಮನವಾಗಿರುವುದು ಸಂತಸ ಇಮ್ಮಡಿಗೊಂಡಿದೆ.
PHOTOS| ಮಾಜಿ ಸಿಎಂ HDK ಕುಟುಂಬದಲ್ಲಿ ಸಂಭ್ರಮ: ನಿಖಿಲ್ ಪತ್ನಿ ರೇವತಿ ಸೀಮಂತದ ಫೋಟೋಗ್ಯಾಲರಿ