More

    ಮುಂದಿನ ಚುನಾವಣೆಯೇ ನಮ್ಮ ಪಾಲಿಗೆ ಕೊನೆಯ ಚುನಾವಣೆ: ಹೀಗ್ಯಾಕಂದ್ರು ನಿಖಿಲ್​ ಕುಮಾರಸ್ವಾಮಿ?

    ತುಮಕೂರು: ಮುಂಬರುವ ಚುನಾವಣೆ ನಮ್ಮ ಪಾಲಿಗೆ ಒಂದು ರೀತಿಯ ಕೊನೆಯ ಚುನಾವಣೆ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

    ಇಂದು ಕುಣಿಗಲ್​ ತಾಲೂಕಿನ ಅಂಚೆಪಾಳ್ಯದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಿಖಿಲ್​, ಎಚ್​.ಡಿ. ದೇವೆಗೌಡರಿಗೆ 89 ವರ್ಷ ವಯಸ್ಸಾಗಿದೆ. ಕಳೆದ ಎರಡುವರೆ ತಿಂಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿಲ್ಲ. ಹೀಗಾಗಿ ಹಲವು ಕಾರ್ಯಕರ್ತರಲ್ಲಿ ಒಂದು ರೀತಿಯ ಗೊಂದಲ ಸೃಷ್ಟಿಯಾಗಿತ್ತು. ಎರಡು ತಿಂಗಳ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ಕೊಟ್ಟರು. ಅವರಿಗೆ ಏನು ಆಗಿಲ್ಲ. ದೇವೆಗೌಡರು ನಮ್ಮ‌ ಜೊತೆ ನೂರಾರು ವರ್ಷಗಳ‌ ಕಾಲ ಬದುಕುತ್ತಾರೆ. ಆದರೆ 2023ನೇ ಚುನಾವಣೆ ನಮ್ಮ ಪಾಲಿಗೆ ಒಂದು ರೀತಿ ಕೊನೆಯ ಚುನಾವಣೆ ಎಂದು ಹೇಳಿದರು.

    ಜೆಡಿಎಸ್​​ನಿಂದ ಒಂದು ಹೊಸ ಅಧ್ಯಾಯ ಪ್ರಾರಂಭವಾಗಬೇಕು. ಕುಮಾರಸ್ವಾಮಿ ಅವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡಬೇಕು. ನಮ್ಮ ತಂದೆ ಉಳಿದಿದ್ದೆ ಹೆಚ್ಚು. ನಮ್ಮ ತಂದೆಯನ್ನ ಉಳಿಸಿರುವುದು ಆ ಭಗವಂತ. ರೈತರ ಜೀವನವನ್ನು ಹಸನುಗೊಳಿಸುವ ಉದ್ದೇಶದಿಂದ ಭಗವಂತ ಕಾಪಾಡಿದ್ದಾನೆ ಎಂದರು.

    ನಿಮ್ಮೆಲ್ಲರ ಆಶಿರ್ವಾದ ಹಾಗೂ ಕುಮಾರಣ್ಣನಿಗೆ ಏನು ಆಗಬಾರದೆಂದು ಎಷ್ಟೋ ಹೆಣ್ಮಕ್ಕಳು ಮನೆಗಳಲ್ಲಿ ದೀಪ ಹಚ್ಚುತ್ತಿದ್ದಾರೆ. ಹೀಗಾಗಿ ನಮ್ಮ ತಂದೆಗೆ ಏನು ಆಗುವುದಿಲ್ಲ. ಅವರು ನೂರಾರು ವರ್ಷಗಳ‌ ಕಾಲ ಬದುಕಬೇಕು. ಜನ ಯಾವುದೇ ಅಪೇಕ್ಷೆ ಇಲ್ಲದೆ, ಕುಮಾರಣ್ಣ ಅವರು ಮುಖ್ಯಮಂತ್ರಿ ಆಗಬೇಕು ಎಂದು ಆಸೆ ಪಟ್ಟಿದ್ದಾರೆ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್​)

    ನೀವು ಹಣಕ್ಕಾಗಿ ರವೀಂದರ್​ರನ್ನು ಮದುವೆಯಾದ್ರಾ? ನಟಿ ಮಹಾಲಕ್ಷ್ಮೀ ಕೊಟ್ಟ ಉತ್ತರ ಹೀಗಿತ್ತು…

    ಮದ್ವೆ ಮಂಟಪಕ್ಕೆ ನುಗ್ಗಿ ವರನ ಕೈಯಿಂದ ತಾಳಿ ಕಿತ್ತುಕೊಂಡು ಪ್ರೇಯಸಿಗೆ ಕಟ್ಟಲು ಯತ್ನ: ಮುಂದೆ ನಡೆದದ್ದಿಷ್ಟು…

    ಬೆಕ್ಕನ್ನು ಹುಲಿ ಮಾಡಿದ ಭೂಪ: ವಾಟ್ಸ್​ಆ್ಯಪ್​ನಲ್ಲಿ ಮಾರಾಟಕ್ಕಿಟ್ಟು ಪೊಲೀಸರ ಕೈಗೆ ಸಿಕ್ಕಿಬಿದ್ದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts