ಬೆಕ್ಕನ್ನು ಹುಲಿ ಮಾಡಿದ ಭೂಪ: ವಾಟ್ಸ್​ಆ್ಯಪ್​ನಲ್ಲಿ ಮಾರಾಟಕ್ಕಿಟ್ಟು ಪೊಲೀಸರ ಕೈಗೆ ಸಿಕ್ಕಿಬಿದ್ದ

ಚೆನ್ನೈ: ಬೆಕ್ಕಿನ ಮರಿಗಳನ್ನು ಮಾರಾಟಕ್ಕಿಟ್ಟು ವ್ಯಕ್ತಿಯೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ! ಏಕೆಂದರೆ ಈತ ಬೆಕ್ಕನ್ನು ಹುಲಿಮರಿಯನ್ನಾಗಿ ಪರಿವರ್ತಿಸಿ ಅದನ್ನು ಮಾರಾಟಕ್ಕಿಟ್ಟಿದ್ದ! ಬೆಕ್ಕಿಗೆ ಹುಲಿಮರಿಯ ಬಣ್ಣ ಬಳಿದು ಅದನ್ನು ಮಾರಾಟ ಮಾಡಲು ಹೋದ ಖತರ್ನಾಕ್​ ಐಡಿಯಾ ಮಾಡಿದವನು ತಮಿಳುನಾಡಿನ ತಿರುವಣ್ಣಾಮಲೈ ಗ್ರಾಮದ ಅರ್ನಿ ನಿವಾಸಿ ಪಾರ್ಥಿಬನ್ (24). ತನ್ನ ಬಳಿ ಇದ್ದ ಬೆಕ್ಕಿನ ಮರಿಗಳಿಗೆ ಬಣ್ಣ ಬಳಿದ ಈತ ಅದನ್ನು ಹುಲಿಮರಿಗಳಂತೆಯೇ ಕಾಣಿಸುವಂತೆ ಮಾಡಿದ್ದ. ಮೂರು ತಿಂಗಳ ಮೂರು ಹುಲಿಮರಿಗಳು ಮಾರಾಟಕ್ಕಿವೆ ಎಂದು ಪಾರ್ಥಿಬನ್ ವಾಟ್ಸ್​ಆ್ಯಪ್​ನಲ್ಲಿ ಸ್ಟೇಟಸ್ ಹಾಕಿದ್ದ. … Continue reading ಬೆಕ್ಕನ್ನು ಹುಲಿ ಮಾಡಿದ ಭೂಪ: ವಾಟ್ಸ್​ಆ್ಯಪ್​ನಲ್ಲಿ ಮಾರಾಟಕ್ಕಿಟ್ಟು ಪೊಲೀಸರ ಕೈಗೆ ಸಿಕ್ಕಿಬಿದ್ದ