More

    ಐ ಲವ್​ ಯು ಎಂದವನಿಗೆ ಶಾಸಕಿ ರೋಜಾ ಮಗಳು ಕೊಟ್ಟ ಉತ್ತರ ವೈರಲ್​..!

    ಹೈದರಾಬಾದ್​: ಬಹುಭಾಷಾ ನಟಿ ಹಾಗೂ ರಾಜಕಾರಣಿ ರೋಜಾ ಅವರ ಮಗಳು ಅನ್ಶು ಇದೀಗ ಭಾರಿ ಸುದ್ದಿಯಾಗಿದ್ದಾರೆ. ಕಾರಣ ಸಾಮಾಜಿಕ ಜಾಲತಾಣದಲ್ಲಿ ಐ ಲವ್​ ಯು ಎಂದವನಿಗೆ ಅನ್ಶು ಕೊಟ್ಟ ಉತ್ತರ ಭಾರರೀ ವೈರಲ್​ ಆಗಿದೆ.

    ಅನ್ಶು ಇತ್ತೀಚೆಗಷ್ಟೇ ಇನ್​ಸ್ಟಾಗ್ರಾಂಗೆ ಪ್ರವೇಶ ನೀಡಿದ್ದಾರೆ. ಕೆಲವೇ ದಿನಗಳಲ್ಲಿ ಸಾವಿರಾರು ಮಂದಿ ಅನ್ಶು ಅವರನ್ನು ಫಾಲೋ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ಅಭಿಮಾನಿಗಳೊಂದಿಗೆ ಪ್ರಶ್ನೋತ್ತರ ಸಭೆ ನಡೆಸಿದರು. ಈ ವೇಳೆ ನೆಟ್ಟಿಗನೊಬ್ಬ ಸ್ಪ್ಯಾನಿಷ್​ ಭಾಷೆಯಲ್ಲಿ ಐ ಲವ್​ ಯೂ ಎಂದು ಪ್ರಪೋಸ್​ ಮಾಡಿದ್ದಾನೆ. ಇದಕ್ಕೆ ನಯವಾಗಿಯೇ ಉತ್ತರಿಸಿದ ಅನ್ಶು ಧನ್ಯವಾದಗಳು ಎಂದಿದ್ದಾರೆ. ಇದನ್ನು ಕೇಳಿದ ನೆಟ್ಟಿಗನೇ ಸ್ವತಃ ಅಚ್ಚರಿಯಾಗಿದೆ.

    ಐ ಲವ್​ ಯು ಎಂದವನಿಗೆ ಶಾಸಕಿ ರೋಜಾ ಮಗಳು ಕೊಟ್ಟ ಉತ್ತರ ವೈರಲ್​..!

    ಇದನ್ನು ಹೊರತುಪಡಿಸಿ ಅನೇಕ ಆಸಕ್ತಿದಾಯಕ ಪ್ರಶ್ನೆಗಳನ್ನು ನೆಟ್ಟಿಗರು ಕೇಳಿದ್ದು, ಅವುಗಳಿಗೆ ಅನ್ಶು ಕೊಟ್ಟ ಉತ್ತರ ಹೇಗಿತ್ತು ಎಂಬುದನ್ನು ಈ ಕೆಳಗೆ ನೋಡಬಹುದಾಗಿದೆ…

    ಪ್ರಶ್ನೆ: ಭವಿಷ್ಯದಲ್ಲಿ ಯೂಟ್ಯೂಬ್​ ಚಾನೆಲ್​ ತೆರೆಯುವ ಯೋಜನೆ ಇದೆಯೇ?
    ಉತ್ತರ: ನೀವೇ ಹೇಳಿ… ನಾನು ಯೂಟ್ಯೂಬ್​ ಚಾನಲ್​ ತೆರೆಯಲು ನೀವು ಬಯಸುತ್ತೀರಾ? ನಾನು ಓಪನ್​ ಮಾಡುತ್ತೇನೆ.

    ಪ್ರಶ್ನೆ: ನಿಮಗೆ ಉದ್ಯಮದಲ್ಲಿ ಆಸಕ್ತಿ ಇದೆಯೇ? ಯಾವ ರೀತಿಯ ಉದ್ಯಮ ನಡೆಸುತ್ತೀರಾ?
    ಉತ್ತರ: ಅನ್ಶೂ ಎಂದೂ ಕರೆಯಲ್ಪಡುವ ಶೂಲೈನ್​ ಬಿಸಿನೆಸ್​ ಮಾಡಬೇಕೆಂದು ನಾನು ಯಾವಾಗಲೂ ಬಯಸುತ್ತಿದ್ದೆ.

    ಪ್ರಶ್ನೆ: ನೀವು ಹುಡುಗರಲ್ಲಿ ಯಾವ ಗುಣವನ್ನು ಇಷ್ಟಪಡುತ್ತೀರಾ?
    ಉತ್ತರ: ಏನಾದರೂ ತಪ್ಪಾಗುತ್ತದೆ ಎಂಬ ಭಯವಿಲ್ಲ, ಉತ್ತಮ ವ್ಯಕ್ತಿತ್ವ ಇರಬೇಕು.

    ಪ್ರಶ್ನ: ನಿಮ್ಮ ನೆಚ್ಚಿನ ಸಿನಿಮಾ ಯಾವುದು?
    ಉತ್ತರ: ದಂಗಲ್​, ತೆಲುಗಿನಲ್ಲಿ ನಾಗಾರ್ಜುನ ಸಾರ್ ಚಲನಚಿತ್ರಗಳು ಇಷ್ಟ.

    ಇದರೊಂದಿಗೆ ಅನ್ಶು ಕುರಿತಾದ ಮತ್ತೊಂದು ಸುದ್ದಿ ಜಾಲತಾಣದಲ್ಲಿ ಹರಿದಾಡುತ್ತಿದೆ. ಅನ್ಶು ಅವರು ನಾಯಕಿಯಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅವರನ್ನು ಪ್ರಶ್ನಿಸಿದಾಗ ಸ್ಪಷ್ಟನೆ ನೀಡಿದ ಅನ್ಶು, ನನಗೆ ಗೊತ್ತಿಲ್ಲ. ಈ ಬಗ್ಗೆ ನಾನು ಯೋಚಿಸಿಯೂ ಇಲ್ಲ ಎಂದು ಹೇಳಿದ್ದಾರೆ. (ಏಜೆನ್ಸೀಸ್)

    ಮೂರನೇ ಬಾರಿ ಸಿಎಂ ಆಗಿ ಗದ್ದುಗೆಗೇರಿದ ಮಮತಾ- ಆರು ತಿಂಗಳ ಒಳಗೆ ಗೆದ್ದರೆ ಖುರ್ಚಿ ಭದ್ರ

    8 ಸಿಂಹಗಳಿಗೆ ಕರೊನಾ ಪಾಸಿಟಿವ್​, ಜೀವಿ ಸಂಕುಲ ತಲ್ಲಣ: ಪ್ರಾಣಿಗಳಲ್ಲಿ ಕಂಡು ಬಂದ ರೋಗ ಲಕ್ಷಣ ಹೀಗಿದೆ…

    ಕೋವಿಡ್​ ಸಂಬಂಧಿತ ಆರೋಗ್ಯ ಮೂಲಸೌಕರ್ಯ ಹೆಚ್ಚಿಸಲು 50,000 ಕೋಟಿ ರೂ. ಲಿಕ್ವಿಡಿಟಿ ಘೋಷಿಸಿದ ಆರ್​ಬಿಐ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts