More

    ವಿಶ್ವ ಅಥ್ಲೆಟಿಕ್ಸ್​ ಚಾಂಪಿಯನ್​ಶಿಪ್ಸ್​​: ಜಾವಲಿನ್​ ಥ್ರೋ ಫೈನಲ್​ನಲ್ಲಿ ಬೆಳ್ಳಿ ಗೆದ್ದು ಇತಿಹಾಸ ಬರೆದ ನೀರಜ್​

    ನವದೆಹಲಿ: ಟೋಕಿಯೋ ಒಲಿಂಪಿಕ್ಸ್​ ಚಿನ್ನದ ಪದಕ ವಿಜೇತ ನೀರಜ್​ ಚೋಪ್ರಾ ಅವರು ತಮ್ಮ ಯಶಸ್ಸಿನ ಓಟವನ್ನು ಮುಂದುವರಿಸಿದ್ದು, ಭಾನುವಾರ (ಜುಲೈ 24) ನಡೆದ ವಿಶ್ವ ಅಥ್ಲೆಟಿಕ್ಸ್​ ಚಾಂಪಿಯನ್​ಶಿಪ್​ನ​ ಪುರುಷರ ಜಾವಲಿನ್​ ಥ್ರೋ ಫೈನಲ್​ ಸ್ಪರ್ಧೆಯಲ್ಲಿ ಎರಡನೇ ಸ್ಥಾನದೊಂದಿಗೆ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ.

    4ನೇ ಎಸೆತದಲ್ಲಿ 88.13 ಮೀಟರ್​ ಎಸೆತದೊಂದಿಗೆ ಬೆಳ್ಳಿ ಪದಕ ಜಯಿಸಿದ ನೀರಜ್​, ವಿಶ್ವ ಅಥ್ಲೆಟಿಕ್ಸ್​ ಚಾಂಪಿಯನ್​ಶಿಪ್​ನಲ್ಲಿ ಪದಕ ಜಯಿಸಿದ ಎರಡನೇ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೆ, ವಿಶ್ವ ಅಥ್ಲೆಟಿಕ್ಸ್​ ಚಾಂಪಿಯನ್​ಶಿಪ್​ನಲ್ಲಿ ಮೊದಲ ಬೆಳ್ಳಿ ಪದಕ ಗೆದ್ದ ಕ್ರೀಡಾಪಟು ಎಂಬ ದಾಖಲೆ ಬರೆದಿದ್ದಾರೆ. 19 ವರ್ಷಗಳ ಬಳಿಕ ವಿಶ್ವ ಅಥ್ಲೆಟಿಕ್ಸ್​ ಚಾಂಪಿಯನ್​ಶಿಪ್​ನಲ್ಲಿ ಭಾರತದಕ್ಕೆ ಪದಕ ಬಂದಿದೆ.

    ಹಾಲಿ ಚಾಂಪಿಯನ್​ ಆ್ಯಂಡರ್ಸನ್​ ಪೀಟರ್​​ 90.14 ಮೀಟರ್​ ಎಸೆಯುವುದರೊಂದಿಗೆ ತಮ್ಮ ಚಾಂಪಿಯನ್​ ಪಟ್ಟವನ್ನು ಉಳಿಸಿಕೊಳ್ಳುವುದರ ಜೊತೆಗೆ ಚಿನ್ನದ ಪದಕವನ್ನು ಜಯಿಸಿದ್ದಾರೆ.

    ಕಳೆದ ಶುಕ್ರವಾರ ನಡೆದ ಅರ್ಹತಾ ಸುತ್ತಿನ ಮೊದಲ ಎಸೆತದಲ್ಲೇ 88.39 ಮೀಟರ್ ಜಾವಲಿನ್​ ಥ್ರೋ ಮಾಡುವ ಮೂಲಕ​ ವಿಶ್ವ ಅಥ್ಲೆಟಿಕ್ಸ್​ ಚಾಂಪಿಯನ್​ಶಿಪ್​ನ​ ಪುರುಷರ ಜಾವಲಿನ್​ ಥ್ರೋ ಫೈನಲ್​ಗೆ ನೀರಜ್​ ಅರ್ಹತೆ ಪಡೆದಿದ್ದರು. ಇಂದು ನಡೆದ ಫೈನಲ್​ ಪಂದ್ಯದಲ್ಲಿ ಎರಡನೇ ಸ್ಥಾನದೊಂದಿಗೆ ಬೆಳ್ಳಿ ಪದಕ ಜಯಿಸುವ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. (ಏಜೆನ್ಸೀಸ್​)

    ವಿಶ್ವ ಅಥ್ಲೆಟಿಕ್ಸ್​ ಚಾಂಪಿಯನ್​ಶಿಪ್ಸ್​​: ಜಾವಲಿನ್​ ಥ್ರೋ ಫೈನಲ್​ನಲ್ಲಿ ಬೆಳ್ಳಿ ಗೆದ್ದು ಇತಿಹಾಸ ಬರೆದ ನೀರಜ್​

    ರಣವೀರ್​ ಬೆತ್ತಲೆ ಫೋಟೋ ಬಗ್ಗೆ ಬಾಲಿವುಡ್​ ಬಿಚ್ಚಮ್ಮ ಪೂನಂ ಪಾಂಡೆ ಮಾಡಿರೋ ಕಾಮೆಂಟ್​ ವೈರಲ್!​

    ಗಾಂಜಾಗ್ಯಾಂಗ್ ಹಿಡಿಯಲು ಹೊರಟಿದ್ದ ಶಿವಾಜಿನಗರ ಪೊಲೀಸರ ವಾಹನ ಆಂಧ್ರದಲ್ಲಿ ಅಪಘಾತ: PSI ಸೇರಿ ಮೂವರ ಸಾವು

    ಸಿಂಕ್ ಸೌಂಡ್ ಅಂತ ಹೇಳಿಲ್ಲ; ವಿವಾದಿತ ಪ್ರಶಸ್ತಿ ಬಗ್ಗೆ ಸಾಗರ್ ಪುರಾಣಿಕ್ ಸ್ಪಷ್ಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts