More

    ರಾಜ್ಯಸಭಾ ಚುನಾವಣೆ: ಸಿದ್ದು ರಣತಂತ್ರದಿಂದ ಮತ್ತೆ ಇತಿಹಾಸ ಮರುಕಳಿಸುವ ಸಾಧ್ಯತೆ!

    ಮೈಸೂರು: ರಾಜ್ಯಸಭಾ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿ, ಕಾಂಗ್ರೆಸ್​ ಮತ್ತು ಜೆಡಿಎಸ್​ ಪಕ್ಷಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಇದರ ನಡುವೆ ಜೆಡಿಎಸ್​ ಪಕ್ಷಕ್ಕೆ ಅಡ್ಡ ಮತದಾನದ ಭೀತಿ ಕಾಡುತ್ತಿದೆ ಎನ್ನಲಾಗಿದೆ.

    ಜೆಡಿಎಸ್ ಮತಗಳನ್ನು ಸೆಳೆಯಲು ಸಿದ್ದರಾಮಯ್ಯ ಬಣ ತಂತ್ರಗಾರಿಕೆ ಹೂಡಿದೆ. ಹಳೇ ಮೈಸೂರು ಭಾಗದ ಜೆಡಿಎಸ್ ಶಾಸಕರ ಮೇಲೆ ಕಾಂಗ್ರೆಸ್ ಕಣ್ಣು ಹಾಕಿದೆ. ಜೆಡಿಎಸ್​ನ ಅಸಮಧಾನಿತ ಶಾಸಕರನ್ನು ಸೆಳೆಯಲು ಕಾಂಗ್ರೆಸ್​ ಪ್ರಯತ್ನಿಸುತ್ತಿದೆ ಎಂಬ ಮಾತುಗಳ ಕೇಳಿಬರುತ್ತಿವೆ.

    ಜೆಡಿಎಸ್ ಸೋಲಿಸಬೇಕೆಂದು ಸಿದ್ದು ಹಠಕ್ಕೆ ಬಿದ್ದಿರುವಂತೆ ಕಾಣುತ್ತಿದೆ. ಈ ಹಿಂದೆಯೂ ಜೆಡಿಎಸ್​ನಲ್ಲಿದ್ದ ಶಾಸಕರ ಅಡ್ಡ ಮತದಾನವಾಗಿತ್ತು. ಜೆಡಿಎಸ್​ನಲ್ಲಿದ್ದ ಚೆಲುವರಾಯಸ್ವಾಮಿ, ಜಮೀರ್ ಅಹಮದ್ ಖಾನ್ ಹಾಗೂ ಮಾಗಡಿ ಬಾಲಕೃಷ್ಣರಿಂದ ಅಡ್ಡ ಮತದಾನವಾಗಿತ್ತು. ಬಳಿಕ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಅದೇ ರೀತಿ ಈ ಬಾರಿಯ ರಾಜ್ಯಸಭಾ ಚುನಾವಣೆ ಮೇಲೂ ಕಾರ್ಯತಂತ್ರ ಮಾಡುವ ಸಾಧ್ಯತೆ ಇದೆ.

    ಹಳೇ ಮೈಸೂರು ಭಾಗದ ಕೆಲ ಜೆಡಿಎಸ್ ಶಾಸಕರ ಸಂಪರ್ಕದಲ್ಲಿ ಕಾಂಗ್ರೆಸ್ ಇದೆ. ಸಿದ್ದು ಹಣತಿಯಂತೆ ಕಾರ್ಯತಂತ್ರ ರೂಪಿಸಲಾಗುತ್ತಿದೆ. ಈ ಮೂಲಕ ಮತ್ತೆ ಇತಿಹಾಸ ಮರುಕಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಸಿದ್ದು ಒತ್ತಾಯದ ಮೇರೆಗೆ ಕಾಂಗ್ರೆಸ್​ ಎರಡನೇ ಅಭ್ಯರ್ಥಿಯನ್ನು ಹಾಕಿದೆ. ರಾಜ್ಯಸಭಾ ಚುನಾವಣೆ ಮೂಲಕ ಜೆಡಿಎಸ್​ಗೆ ಒಳ ಏಟು ಕೊಡಲು ಸಿದ್ದರಾಮಯ್ಯ ತಂತ್ರ ರೂಪಿಸಿದ್ದಾರೆ ಎಂದು ಹೇಳಲಾಗಿದೆ.

    ಸದ್ಯ ಶಾಸಕರಾದ ಜಿ.ಟಿ ದೇವೇಗೌಡ, ಕೆ.ಮಹದೇವ್, ಶಿವಲಿಂಗೇಗೌಡ ಹಾಗೂ ಎ.ಟಿ ರಾಮಸ್ವಾಮಿ ನಡೆಯ ಮೇಲೆ ಸಾಕಷ್ಟು ಕುತೂಹಲ ಮೂಡಿದೆ. ಇನ್ನೊಂದೆಡೆ ಸಿದ್ದು ತಂತ್ರ ಅವರಿಗೆ ಉಲ್ಟಾ ಹೊಡೆಯಬಹುದು ಎಂಬ ಲೆಕ್ಕಾಚಾರವೂ ಇದೆ. (ದಿಗ್ವಿಜಯ ನ್ಯೂಸ್​)

    8 ಬಾಟಲ್​ ಮದ್ಯ ಸೇವಿಸಿ ಆತ್ಮಹತ್ಯೆಗೆ ಯತ್ನ: ಕಣ್ಣೀರಾಕುತ್ತಾ ನಟಿ ಮೈಥಿಲಿ ಬಿಚ್ಚಿಟ್ಟ ನೋವಿದು…

    ನಾನು ವಾಟ್ಸ್​ಆ್ಯಪ್​ನಲ್ಲೇ ಹೇಳಿದ್ದೆ…ಅನಂತರಾಜು ಸಾವಿನ ಪ್ರಕರಣದಲ್ಲಿ ಮತ್ತೊಂದು ಸ್ಫೋಟಕ ಆಡಿಯೋ ಲೀಕ್​!

    ಬಿಹಾರದಲ್ಲಿ ಜಾತಿ ಗಣತಿ: ಸರ್ವಪಕ್ಷ ಸಭೆಯಲ್ಲಿ ಒಮ್ಮತದ ಸಮ್ಮತಿ, ಬಗೆಹರಿದ ಕಗ್ಗಂಟು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts