More

    ಪುಡಾರಿಗಳ ಅಡ್ಡೆಯಾದ ಚಾಮುಂಡಿ ಬೆಟ್ಟದ ತಪ್ಪಲು: ಗ್ಯಾಂಗ್​ರೇಪ್​ ಜಾಗದಲ್ಲಿ ಮದ್ಯದ ಬಾಟಲಿ, ಕಾಂಡೋಮ್ ಪತ್ತೆ

    ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆದ ವಿದ್ಯಾರ್ಥಿನಿ ಮೇಲಿನ ಗ್ಯಾಂಗ್​ರೇಪ್​ ಪ್ರಕರಣವೂ ಇಡೀ ಮೈಸೂರಿಗರನ್ನು ಬೆಚ್ಚಿಬೀಳಿಸಿದೆ. ಈಗಾಗಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ವಿಶೇಷ ತಂಡ ರಚಿಸಿ ಆರೋಪಿಗಳ ಹಡೆಮುರಿ ಕಟ್ಟಲು ತನಿಖೆ ಆರಂಭಿಸಿದ್ದಾರೆ.

    ಮೈಸೂರಿಗರ ಪವಿತ್ರ ತಾಣವಾಗಿರುವ ಚಾಮುಂಡಿ ಬೆಟ್ಟದ ಹೆಸರನ್ನು ಕಿಡಿಗೇಡಿಗಳು ಅಪವಿತ್ರಗೊಳಿಸುತ್ತಿದ್ದಾರೆ. ಗ್ಯಾಂಗ್​ರೇಪ್​ ನಡೆದ ಸ್ಥಳವೂ ನಿತ್ಯದ ಅನೈತಿಕ ತಾಣವಾಗಿದೆ. ಕುಡುಕರು, ಪುಡಾರಿಗಳ ಅಡ್ಡೆಯಾಗಿರುವ ಚಾಮುಂಡಿಬೆಟ್ಟದ ತಪ್ಪಲಲ್ಲಿ ಮದ್ಯದ ಬಾಟಲಿ, ಕಾಂಡೋಮ್ ಪತ್ತೆಯಾಗಿದೆ.

    ರಾತ್ರಿ ಹೊತ್ತು ಖಾಲಿ ರಸ್ತೆಯಲ್ಲಿ ಓಡಾಡಲೂ ಸಹ ಜನರು ಭಯ ಪಡುವಂತಾಗಿದೆ. ಇನ್ನು ಆ ರಸ್ತೆಯಲ್ಲಿ ವಿದ್ಯುತ್​ ಸೌಲಭ್ಯ ಇಲ್ಲದಿರುವುದು ಕಾಮುಕರಿಗೆ ವರವಾಗಿದೆ. ದುಷ್ಟರು ತಮ್ಮ ಲಾಲಸೆಗಾಗಿ ಬೆಟ್ಟದ ತಪ್ಪಲಿನಲ್ಲಿ ಮಾಡಬಾರದನ್ನು ಮಾಡುತ್ತಿರುವುದು ನಿಜಕ್ಕೂ ಅಕ್ಷಮ್ಯ ಅಪರಾಧವಾಗಿದೆ. ಮೈಸೂರು ಪೊಲೀಸರು ಇಂತಹ ಕೃತ್ಯಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಟ್ಟುನಿಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

    ಉತ್ತರ ಭಾರತ ಮೂಲದ ಯುವತಿ ನಗರದ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದು, ಸ್ನೇಹಿತನ ಜತೆ ಇದ್ದ ಸಂದರ್ಭದಲ್ಲಿ ಐವರು ಕಾಮುಕರು ಸ್ನೇಹಿತನ ಮೇಲೆ ಹಲ್ಲೆ ಮಾಡಿ ನಂತರ ಅತ್ಯಾಚಾರವೆಸಗಿದ್ದಾರೆ. ಆರೋಪಿಗಳು ಕೂಲಿ ಕೆಲಸದವರಂತೆ ಇದ್ದರು ಎಂದು ಸಂತ್ರಸ್ತೆ ಜತೆ ಇದ್ದ ಸ್ನೇಹಿತ ಇದಾಗಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಸ್ನೇಹಿತನ ಜತೆ ಮೈಸೂರಿನ ಹೆಲಿಪ್ಯಾಡ್ ಬಳಿಯ ವಾಟರ್ ಟ್ಯಾಂಕ್​​​​ನ ಗುಡ್ಡದ ಬಳಿ ಹೋಗಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ.

    ಸದ್ಯ ಯುವತಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಯುವತಿ ಜತೆ ಇದ್ದ ಯುವಕನ ಮಾಹಿತಿ ಆಧರಿಸಿ ಪೊಲೀಸರು ಎಫ್.ಐ.ಆರ್. ದಾಖಲು ಮಾಡಿಕೊಂಡಿದ್ದಾರೆ. ಎಡಿಜಿಪಿ ಪ್ರತಾಪ್ ರೆಡ್ಡಿ‌ ನೇತೃತ್ವದಲ್ಲಿ ತನಿಖಾ ತಂಡ ರಚನೆಯಾಗಿದ್ದು, ಅತಿ ಶೀಘ್ರದಲ್ಲಿ ಆರೋಪಿಗಳ ಬಂಧನಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ. (ದಿಗ್ವಿಜಯ ನ್ಯೂಸ್​)

    ಗ್ಯಾಂಗ್‌ರೇಪ್ ಘಟನೆಗೆ ಸಾಂಸ್ಕೃತಿಕ ನಗರಿ ಮೈಸೂರು ತಲ್ಲಣ: ಎಡಿಜಿಪಿ ನೇತೃತ್ವದಲ್ಲಿ ತನಿಖಾ ತಂಡ ರಚನೆ

    ಆಫ್ಘಾನ್​ನಲ್ಲಿ ಅರಾಜಕತೆ: 1 ಬಾಟಲ್ ನೀರಿಗೆ​ 3000 ರೂ. ಆದ್ರೆ, ಒಂದು ಪ್ಲೇಟ್​ ಊಟದ ಬೆಲೆ ತಲೆ ತಿರುಗುವಂತಿದೆ!

    ತಾಲಿಬಾನಿ ಹಾರಿಸಿದ ಗುಂಡಿನ ನೋವು ಇಂದಿಗೂ ಮಾಯಲಿಲ್ಲ- ಅಂದು ಅನುಭವಿಸಿದ ಯಾತನೆ ಬಿಚ್ಚಿಟ್ಟ ಮಲಾಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts