More

    ದಿಲೀಪ್ ಮೊಬೈಲ್​ ಸರ್ವೀಸ್​ ಮಾಡಿದ್ದ ಯುವಕನ ನಿಗೂಢ ಸಾವು: ನಟನ ಭೇಟಿಯ ಬಳಿಕ ನಡೆದಿದ್ದೇನು?

    ಕೊಚ್ಚಿ: ಖ್ಯಾತ ನಟಿಯನ್ನು ಅಪಹರಿಸಿ, ಲೈಂಗಿಕ ದೌರ್ಜ್ಯನ್ಯ ಎಸಗಿದ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮಲಯಾಳಂ ನಟ ದಿಲೀಪ್​ ಕುಮಾರ್​ ವಿರುದ್ಧ ಸಾಕಷ್ಟು ಗಂಭೀರ ಆರೋಪಗಳು ಕೇಳಿಬರುತ್ತಿವೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಕೊಲೆಗೆ ಸಂಚು ರೂಪಿಸಿದ ಆರೋಪವು ದಿಲೀಪ್​ ಮೇಲಿದೆ.

    ಇದೀಗ ಮತ್ತೊಂದು ಬಹಳ ಗಂಭೀರವಾದ ವಿಷಯ ಚರ್ಚೆಯಾಗುತ್ತಿದೆ. ಆರೋಪಿ ದಿಲೀಪ್ ಅವರ ಮೊಬೈಲ್​ ಫೋನ್​ ಸರ್ವೀಸ್​ ಮಾಡಿದ ಯುವಕ ನಿಗೂಢವಾಗಿ ಸಾವಿಗೀಡಾಗಿರುವುದು ಭಾರೀ ಅನುಮಾನ ಹುಟ್ಟುಹಾಕಿದೆ. ಈ ಸಂಬಂಧ ಮೃತ ಯುವಕನ ಸಂಬಂಧಿಕರು ಅಂಗಮಲೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ಆರಂಭವಾಗಿದೆ.

    ತ್ರಿಸ್ಸೂರ್​ ಮೂಲದ ಸಲೇಶ್​ 2020ರಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ರಸ್ತೆ ಬದಿಯಲ್ಲಿದ್ದ ಕಂಬಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸಲೀಶ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಮೃತ ಸಲೇಶ್​ ಕೊಚ್ಚಿಯಲ್ಲಿ ಮೊಬೈಲ್​ ಸರ್ವೀಸ್​​ ಶಾಪ್​ ನಡೆಸುತ್ತಿದ್ದ. ನಟ ದಿಲೀಪ್​ ಫೋನ್​ ಅನ್ನು ಕೂಡ ಸಲೇಶ್​ ಸರ್ವೀಸ್​ ಮಾಡಿದ್ದ. ಸಾಯುವ ಮುನ್ನ ಸಲೇಶ್​, ದಿಲೀಪ್​ ಅವರನ್ನು ಭೇಟಿ ಮಾಡಿದ್ದ ಎಂದು ತಿಳಿದುಬಂದಿದೆ.

    ಸಲೇಶ್​ ಅವರ ಸಹೋದರ ದೂರು ದಾಖಲಿಸಿದ್ದು, ಆತನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಸೂಕ್ತ ತನಿಖೆ ನಡೆಯಬೇಕೆಂದು ಆಗ್ರಹಿಸಿದ್ದಾರೆ. ಸಲೇಶ್​ಗೆ ದಿಲೀಪ್​ ಜತೆ ಆಪ್ತತೆ ಇತ್ತಂತೆ. “ವೆಲ್​ಕಮ್​ ಟು ಸೆಂಟ್ರಲ್​ ಜೈಲ್​” ಸೇರಿದಂತೆ ಅನೇಕ ಚಿತ್ರಗಳಲ್ಲಿಯೂ ಸಲೇಶ್​ ನಟಿಸಿದ್ದಾರೆ.

    ಸದ್ಯ ಸಲೇಶ್​ ಸಾವಿನ ಬಗ್ಗೆ ಆತನ ಕುಟುಂಬಸ್ಥರು ತೀವ್ರ ಅನುಮಾನ ವ್ಯಕ್ತಪಡಿಸಿದ್ದಾರೆ. ಬಹುಶಃ ಈ ಪ್ರಕರಣದ ತನಿಖೆಯನ್ನು ಅಪರಾಧ ವಿಭಾಗಕ್ಕೆ ಹಸ್ತಾಂತರಿಸುವ ಸಾಧ್ಯತೆ ಇದೆ. ಈಗಾಗಲೇ ನಟಿಯ ಮೇಲಿನ ದೌರ್ಜನ್ಯ ಮತ್ತು ತನಿಖಾಧಿಕಾರಿಗಳ ಕೊಲೆಗೆ ಸಂಚು ರೂಪಿಸಿದ ಆರೋಪದ ಜತೆಗೆ ಇದೀಗ ಸಲೇಶ್​ ಸಾವಿನ ಅನುಮಾನವೂ ಕೂಡ ದಿಲೀಪ್​ಗೆ ಸುತ್ತುಕೊಂಡಿದೆ.

    ತನಿಖಾಧಿಕಾರಿಗಳಿಗೆ ಹಳೆಯ ಫೋನ್​ ನೀಡಲು ದಿಲೀಪ್​ ನಿರಾಕರಿಸಿದ್ದರು. ಯಾವಾಗ ಹೈಕೋರ್ಟ್​ ಚಾಟಿ ಬೀಸಿತು. ತಮ್ಮ ಫೋನ್​ಗಳನ್ನು ದಿಲೀಪ್​ ಸೇರಿದಂತೆ ಇತರೆ ಆರೋಪಿಗಳು ಕೋರ್ಟ್​ಗೆ ಹಸ್ತಾಂತರ ಮಾಡಿದ್ದಾರೆ. ಇನ್ನೊಂದೆಡೆ ದಿಲೀಪ್​ ಬಂಧನದ ಭೀತಿಯಲ್ಲಿದ್ದು, ಅವರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಇಂದು ಕೋರ್ಟ್​ ನಡೆಸಲಿದೆ. ದಿಲೀಪ್​ ಅವರ ಹಳೆಯ ಫೋನ್​ನಲ್ಲಿ ಲೈಂಗಿಕ ದೌರ್ಜನ್ಯ ಮತ್ತು ತನಿಖಾಧಿಕಾರಿಗಳ ಮೇಲಿನ ಕೊಲೆಗೆ ಸಂಚು ರೂಪಿಸಿದ್ದರ ಕುರಿತು ಮಹತ್ವದ ದಾಖಲೆಗಳಿವೆ ಎಂದು ಹೇಳಲಾಗುತ್ತದೆ. ಸದ್ಯ ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)

    ಖ್ಯಾತ ನಟಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ: ನಟ ದಿಲೀಪ್​ಗೆ ಶಾಕ್​ ಕೊಟ್ಟ ಕೇರಳ ಹೈಕೋರ್ಟ್​

    ಖ್ಯಾತ ನಟಿಯ ಮೇಲಿನ ಲೈಂಗಿಕ ದೌರ್ಜನ್ಯ ವಿಡಿಯೋ ಕುರಿತು ಸ್ಫೋಟಕ ಹೇಳಿಕೆ ಕೊಟ್ಟ ನಟ ದಿಲೀಪ್​!

    ಬ್ಯೂಟಿ ಪಾರ್ಲರ್​ನಲ್ಲಿ ಕೆಲ್ಸ ಸಿಗುತ್ತೆ ಅಂತಾ ಆಸೆಯಿಂದ ಬಂದ ನಾಲ್ವರು ಹೆಣ್ಣುಮಕ್ಕಳಿಗೆ ಕಾದಿತ್ತು ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts