More

    ಹಾಟ್​ ಫೋಟೋ ಹರಿಬಿಟ್ಟ ಕ್ರಿಕೆಟಿಗ ಮೊಹಮ್ಮದ್​ ಶಮಿ ಪತ್ನಿ: ಹಸಿನ್​ ಮಾದಕ ನೋಟಕ್ಕೆ ನೆಟ್ಟಿಗರು ಫಿದಾ!

    ನವದೆಹಲಿ: ಟೀಮ್​ ಇಂಡಿಯಾದ ವೇಗದ ಬೌಲರ್​ ಮೊಹಮ್ಮದ್​ ಶಮಿ ಅವರ ಪತ್ನಿ ಹಸಿನ್​ ಜಹಾನ್​, ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯರಾಗಿರುತ್ತಾರೆ. ಆಗಾಗ ತಮ್ಮ ಮಾದಕ ಫೋಟೋಗಳನ್ನು ಶೇರ್​ ಮಾಡಿಕೊಳ್ಳುವ ಹಸಿನ್​ ಇದೀಗ ಇನ್​ಸ್ಟಾಗ್ರಾಂನಲ್ಲಿ ಬೋಲ್ಡ್​ ಫೋಟೋ ಹರಿಬಿಡುವ ಮೂಲಕ ನೆಟ್ಟಿಗರ ಹುಬ್ಬೇರಿಸಿದ್ದಾರೆ.

    ಹಸಿನ್​ ಅವರು ಇನ್​ಸ್ಟಾಗ್ರಾಂನಲ್ಲಿ ಒಂದು ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾರೆ. ಆಗಾಗ ತಮ್ಮ ಬೋಲ್ಡ್​ ಫೋಟೋಗಳನ್ನು ಹಸಿನ್​ ಅಪ್​ಲೋಡ್​ ಮಾಡುತ್ತಿರುತ್ತಾರೆ. ಅನೇಕರು ಹಸಿನ್​ ಬ್ಯೂಟಿಗೆ ಫಿದಾ ಆಗಿ ಅವರನ್ನು ಪ್ರಶಂಸಿಸಿದರೆ, ಇನ್ನು ಕೆಲವರು ಅವರನ್ನು ಟ್ರೋಲ್​ ಮಾಡುತ್ತಾರೆ. ಆದರೆ, ಟ್ರೋಲಿಗರಿಗೆ ತಲೆಕೆಡಿಸಿಕೊಳ್ಳದ ಹಸಿನ್​ ತಮ್ಮ ಮಾದಕ ಫೋಟೋಶೂಟ್​ ಅನ್ನು ಮುಂದುವರಿಸಿದ್ದಾರೆ.

    ಪ್ರಸ್ತುತ ಅಪ್​ಲೋಡ್​ ಮಾಡಿರುವ ಫೋಟೋದಲ್ಲಿ ಹಸಿನ್​ ತುಂಬಾ ಹಾಟ್​ ಆ್ಯಂಡ್​ ಬ್ಯೂಟಿಫುಲ್​ ಆಗಿ ಕಾಣಿಸುತ್ತಿದ್ದಾರೆ. ಫೋಟೋದಲ್ಲಿ ರಗಡ್​ ಜಿನ್ಸ್​ ಮತ್ತು ಕಪ್ಪು ಬಣ್ಣ ಟಾಪ್​ ಧರಿಸಿರುವ ಹಸಿನ್​ ನೇರವಾಗಿ ಕ್ಯಾಮರಾ ಕಡೆ ನೋಡುತ್ತಾ ಪೋಸ್​​ ನೀಡಿದ್ದಾರೆ. ನಿನ್ನೆಯಷ್ಟೇ ಅಪ್​ಲೋಡ್​ ಮಾಡಿದ್ದು, 7 ಸಾವಿರಕ್ಕೂ ಅಧಿಕ ಲೈಕ್ಸ್​ಗಳು ಬಂದಿವೆ.

    ಇನ್ನು ಹಸಿನ್​ ಅವರ ವೈಯಕ್ತಿಕ ಬದುಕಿನ ಬಗ್ಗೆ ತಿಳಿಯುವುದಾದರೆ, ಮೊಹಮ್ಮದ್​ ಶಮಿ ಅವರನ್ನು ಮದುವೆ ಆಗಿರುವ ಹಸಿನ್​, ಮನಸ್ತಾಪಗಳಿಂದಾಗಿ ಇಬ್ಬರು ಪರಸ್ಪರ ಬೇರೆಯಾಗಿ ಬದುಕು ಸಾಗಿಸುತ್ತಿದ್ದಾರೆ. ಅನೇಕ ವರ್ಷಗಳಿಂದ ಇಬ್ಬರ ವೈವಾಹಿಕ ಜೀವನದ ಸಂಘರ್ಷ ಮುಂದುವರಿದುಕೊಂಡು ಬರುತ್ತಿದೆ. ಆದರೆ, ಈವರೆಗೂ ಇಬ್ಬರು ಡಿವೋರ್ಸ್​ ತೆಗೆದುಕೊಂಡಿಲ್ಲ ಎಂಬುದು ವಿಶೇಷ.

    ಮದುವೆ ಆದ ಕೆಲವು ವರ್ಷಗಳ ಬಳಿಕ ಪತಿ ಮೊಹಮ್ಮದ್​ ಶನಿ ಬೇರೆ ಮಹಿಳೆಯರೊಂದಿಗೆ ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ಹಸಿನ್​ ಆರೋಪ ಮಾಡಿಕೊಂಡಿದ್ದಾರೆ. ಆದರೆ, ಈ ಸಂಬಂಧ ಯಾವುದೇ ಪ್ರಕರಣವಾಗಲಿ ಶಮಿ ವಿರುದ್ಧ ದಾಖಲಾಗಿಲ್ಲ. ಇನ್ನು ಹಸಿನ್​, ಕೊಲ್ಕತ ಮೂಲದ ಮಾಡೆಲ್​. 2014 ಏಪ್ರಿಲ್​ 7ರಂದು ಶಮಿ ಅವರನ್ನು ಮದುವೆ ಆಗಿದ್ದಾರೆ. ಇಬ್ಬರ ವೈವಾಹಿಕ ಜೀವನಕ್ಕೆ ಸಾಕ್ಷಿಯಾಗಿ ಒಬ್ಬ ಮಗಳಿದ್ದಾಳೆ. (ಏಜೆನ್ಸೀಸ್​)

    ತಾರೆಯರ ಪೂಜಾರತಿ; ನಟಿಯರ ಹಬ್ಬದ ಸಂಭ್ರಮ 

    ವಿಮಾನದಿಂದ ಕೆಳಗೆ ಬಿದ್ದವರ ಗುರುತು ಪತ್ತೆ: ಅಂದು ಮನೆಯ ಮೇಲೆ ನಡೆದ ಭಯಾನಕ ಘಟನೆ ಬಿಚ್ಚಿಟ್ಟ ಮಾಲೀಕ

    ಬಳ್ಳಾರಿಗೆ ತೆರಳಲು ರೆಡ್ಡಿಗೆ ಸುಪ್ರೀಂ ಸಮ್ಮತಿ; 8 ವಾರಕ್ಕೆ ಸೀಮಿತಗೊಳಿಸಿ ಆದೇಶ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts