ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ಹಾಗೂ ತಮ್ಮ ಪತಿ ಚಿರಂಜೀವಿ ಸರ್ಜಾ ಒಟ್ಟಿಗೆ ಇರುವಂತೆ ಎಡಿಟ್ ಮಾಡಿರುವ ಫೋಟೋವನ್ನು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿರುವ ನಟಿ ಮೇಘನಾ ರಾಜ್, ಅಕಾಲಿಕವಾಗಿ ಮರಣ ಹೊಂದಿರುವ ಇಬ್ಬರು ಕೂಡ ವರ್ತಮಾನ ಅಥವಾ ಪ್ರಸ್ತುತ ಜೀವನ ಎಷ್ಟು ಮಹತ್ವಪೂರ್ಣ ಎಂಬುದನ್ನು ಎಲ್ಲರಿಗೂ ಕಲಿಸಿದ್ದಾರೆಂದು ಮೇಘನಾ ಬರೆದುಕೊಂಡಿದ್ದಾರೆ.
ಚಿರಂಜೀವಿ ಸರ್ಜಾ 2020 ಜೂನ್ 7ರಂದು ಮೃತಪಟ್ಟರೆ, ಪುನೀತ್ 2021 ಅಕ್ಟೋಬರ್ 29ರಂದು ಕೊನೆಯುಸಿರೆಳೆದಿದ್ದಾರೆ. ಸರ್ಜಾಗೆ 39 ವರ್ಷಕ್ಕೆ ಮೃತಪಟ್ಟರೆ, ಪುನೀತ್ 46ನೇ ವರ್ಷಕ್ಕೆ ಅಕಾಲಿಕ ನಿಧನರಾಗಿದ್ದಾರೆ. ಯುವ ವಯಸ್ಸಿನಲ್ಲೇ ಇಬ್ಬರು ನಟರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಚಿರು ಮೃತಪಟ್ಟಾಗ ಮೇಘನಾ 5 ತಿಂಗಳ ಗರ್ಭಿಣಿ ಆಗಿದ್ದರು.
ಇದೀಗ ಪುನೀತ್ ಹಾಗೂ ತಮ್ಮ ಪತ್ನಿ ಚಿರು ಇಬ್ಬರ ಫೋಟೋವನ್ನು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿರುವ ಮೇಘನಾ ಅಡಿಬರಹವನ್ನು ಬರೆದಿದ್ದಾರೆ. ಸ್ಯಾಂಡಲ್ವುಡ್ ಈ ಎರಡು ಮುತ್ತುಗಳು ಪ್ರಸ್ತುತ ಎಂಬುದು ಎಷ್ಟು ಮುಖ್ಯ ಎಂದು ತಿಳಿಸಿ ಹೋಗಿದ್ದಾರೆಂದು ಬರೆದುಕೊಂಡಿದ್ದಾರೆ. ಭವಿಷ್ಯವನ್ನು ಮರೆತು ಪ್ರಸ್ತುತ ಜೀವನದ ಬಗ್ಗೆ ಮಾತ್ರ ಯೋಚಿಸಬೇಕು. ಜೀವನ ಅನಿರೀಕ್ಷಿತ. ಜೀವವು ನೀರಿನ ಮೇಲಿನ ಗುಳ್ಳೆ. ಯಾವಾಗ ಬೇಕಿದ್ದರ ಒಡೆಯಬಹುದು. ನಮ್ಮ ಜೀವ ನಮ್ಮ ಕೈಯಲ್ಲಿಲ್ಲ. ಹೀಗಾಗಿ ಇದ್ದಷ್ಟು ದಿನ ಖುಷಿ ಖುಷಿಯಾಗಿ ಸಂತೋಷವಾಗಿ ಕಳೆಯಬೇಕೆಂದು ಇಬ್ಬರು ಪ್ರಸ್ತುತ ಜೀವನದ ಮಹತ್ವದ ಪಾಠ ಮಾಡಿ ಹೋಗಿದ್ದಾರೆ. ಇದು ಎಲ್ಲರಿಗೂ ಎಲ್ಲಾ ಕಾಲಕ್ಕೂ ಅನ್ವಯವಾಗುತ್ತದೆ.
ಚಿರು ಮತ್ತು ಪುನೀತ್ ಇಬ್ಬರು ಕೂಡ ಹೃದಯಾಘಾತದಿಂದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇಬ್ಬರ ಸಾವು ಸ್ಯಾಂಡಲ್ವುಡ್ಗೆ ಭಾರೀ ಆಘಾತ ನೀಡಿದೆ. ಸರ್ಜಾ ಮತ್ತು ಪುನೀತ್ ಎರಡು ಕುಟುಂಬ ಸಿನಿಮಾ ಹಿನ್ನೆಲೆ ಹೊಂದಿದೆ. (ಏಜೆನ್ಸೀಸ್)
ಪುನೀತ್ ಸಾವಿನ ಬಗ್ಗೆ ನಟಿ ಲಕ್ಷ್ಮೀ ಮಂಚು ಟ್ವೀಟ್: ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ನೆಟ್ಟಿಗರು
ರಾಜ್ ಕುಟುಂಬ ರಾಜಕೀಯದಿಂದ ದೂರ ಉಳಿದಿದ್ದೇಕೆ? ರಾಜ್ ನಿರ್ಧಾರಕ್ಕೆ ಕಾರಣವಾದ 1978ರ ಘಟನೆ ಇದು!
ಪುನೀತ್ ಸಾವಲ್ಲೂ ಲಾಭ ಹುಡುಕುವ ‘ರಣಹದ್ದುಗಳು’: ಜಾಹೀರಾತಿನ ವಿರುದ್ಧ ಭಾರಿ ಆಕ್ರೋಶ