More

    ಮದ್ವೆಯಾಗುವುದಾಗಿ ನಂಬಿಸಿ‌ ಯುವತಿ ಜತೆ ಪೋಟೋ ತೆಗೆಸಿಕೊಂಡು ಬ್ಲ್ಯಾಕ್‌ಮೇಲ್‌ ಮಾಡ್ತಿದ್ದ ವಂಚಕ ಅರೆಸ್ಟ್

    ಬೆಂಗಳೂರು: ಕನ್ನಡ ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿದ್ದ ಯುವತಿಗೆ ಮದುವೆಯಾಗುವುದಾಗಿ ಭರವಸೆ ನೀಡಿ ಆಕೆಯೊಂದಿಗೆ ತೆಗೆಸಿಕೊಂಡಿದ್ದ ಸಲುಗೆಯ ಪೋಟೊಗಳನ್ನೇ ಸೋಶಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಬೆದರಿಸಿ ಹಣಕ್ಕೆ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಆರೋಪಿಯನ್ನು ನಗರ ಈಶಾನ್ಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

    ಕೆಲ‌ ತಿಂಗಳ ಹಿಂದೆ ಯುವತಿಯು ಕನ್ನಡ ಮ್ಯಾಟ್ರಿಮೋನಿ ವೆಬ್ ಸೈಟಿನಲ್ಲಿ ರಿಜಿಸ್ಟರ್ ಮಾಡಿಕೊಂಡಿದ್ದಳು. ವಂಚಿಸುವ ಉದ್ದೇಶದಿಂದ ಬಂಧಿತ ಆರೋಪಿಯಾಗಿರುವ ರಾಜಾಜಿನಗರದ ನಿವಾಸಿ ವಿಜಯ್ ಕುಮಾರ್ ಸಹ ನೋಂದಾಯಿಸಿದ್ದ.

    ಮ್ಯಾಟ್ರಿಮೋನಿ‌‌ ಮುಖಾಂತರ ಇಬ್ಬರ ಪರಿಚಯವಾಗಿದೆ.‌ ಪರಿಚಯ ಸ್ನೇಹಕ್ಕೆ ತಿರುಗಿದೆ.‌ ಇದೇ ಸಲುಗೆಯಿಂದ ಇಬ್ಬರು ಆಗಾಗ ಭೇಟಿಯಾಗುತ್ತಿದ್ದರು. ಕೆಲ ದಿನಗಳ ಬಳಿಕ ಮದುವೆಯಾಗುವ ಒಪ್ಪಂದಕ್ಕೆ‌ ಬಂದಿದ್ದರು. ಈ ವೇಳೆ ಯುವತಿಯೊಂದಿಗೆ ತನ್ನ ಮೊಬೈಲ್ ನಲ್ಲಿ ಪೋಟೊಗಳನ್ನು ಕ್ಲಿಕ್ಕಿಸಿಕೊಂಡಿದ್ದ. ಬಳಿಕ‌ ಇದೇ ಪೋಟೊಗಳನ್ನೇ ಇಟ್ಟುಕೊಂಡೇ ಯುವತಿಗೆ ಹಣ ನೀಡುವಂತೆ ಬ್ಲ್ಯಾಕ್ ಮೇಲ್ ಮಾಡಿದ್ದಾನೆ‌.‌

    ಯುವತಿ ಬೆದರಿಕೆಗೆ ಸೊಪ್ಪು ಹಾಕದಿದ್ದರಿಂದ ಆಕೆಯ ಹೆಸರಿನಲ್ಲಿ ಇನ್ ಸ್ಟ್ರಗ್ರಾಮ್ ಖಾತೆ ತೆರೆದು ಸಾಮಾಜಿಕ ಜಾಲತಾಣದಲ್ಲಿ ಪೋಟೊಗಳನ್ನು ಅಪ್ ಲೋಡ್ ಮಾಡಿದ್ದ.‌ ಇದರಿಂದ ಆತಂಕಗೊಂಡ ಯುವತಿಯು ಆರೋಪಿಗೆ 50 ಸಾವಿರ‌ ರೂಪಾಯಿ ನೀಡಿ, ನಕಲಿ ಖಾತೆ ಡಿಲೀಟ್ ಮಾಡುವಂತೆ ಹೇಳಿದರೂ ಮತ್ತೆ ಹೆಚ್ಚು ಹಣ ನೀಡುವಂತೆ ಬೆದರಿಸುತ್ತಿದ್ದ.

    ಹಣ ನೀಡದಿದ್ದರೆ ಕುಟುಂಬಸ್ಥರಿಗೆ ಹಾಗೂ ಸಂಬಂಧಿಕರ ಪ್ರೋಫೈಲ್ ಗಳಿಗೆ ಪೋಟೋಸ್ ಟ್ಯಾಗ್ ಮಾಡುವುದಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಸಿಇಎನ್ ಪೊಲೀಸರು ಆರೋಪಿಯನ್ನು ವಿದ್ಯಾರಣ್ಯಪುರದಲ್ಲಿ ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.

    ದೂರು ನೀಡಲು ಬಂದಾಕೆಯನ್ನೇ ಮಂಚಕ್ಕೆ ಕರೆದ ಪೊಲೀಸ್​ ಇನ್​ಸ್ಪೆಕ್ಟರ್​! ಸಂತ್ರಸ್ತೆ ಬಿಚ್ಚಿಟ್ಟ ನೋವು ಇಲ್ಲಿದೆ

    ಯೂಟ್ಯೂಬರ್ಸ್​ ಮತ್ತು ವೆಬ್​ಸೈಟ್​ಗಳಿಗೆ ಎಚ್ಚರಿಕೆ ನೀಡಿದ ಕೇಂದ್ರ ಸಚಿವ ಅನುರಾಗ್​ ಠಾಕೂರ್​

    ಚುನಾವಣಾ ಪ್ರಚಾರಕ್ಕೆ ಬಂದ ಬಿಜೆಪಿ ಶಾಸಕನನ್ನು ಅಟ್ಟಾಡಿಸಿದ ಗ್ರಾಮಸ್ಥರು: ಸ್ವಕ್ಷೇತ್ರದಲ್ಲೇ ಮುಖಭಂಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts