More

    ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿಯವರಿಗೆ ಮತ್ತೊಂದು ಗರಿ: ಅರಸಿ ಬಂದ ಗೌರವ ಡಾಕ್ಟರೇಟ್ ಪದವಿ

    ವಿಜಯನಗರ: ಪದ್ಮಶ್ರೀ ಪುರಸ್ಕೃತೆ, ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಬಿ. ಮಂಜಮ್ಮ ಜೋಗತಿ ಅವರು ಮತ್ತೊಂದು ಗೌರವಕ್ಕೆ ಪಾತ್ರರಾಗಿದ್ದಾರೆ. ಅವರ ಸೇವೆಯನ್ನು ಪರಿಗಣಿಸಿ, ಗೌರವ ಡಾಕ್ಟರೇಟ್ ಪದವಿ ಅವರನ್ನು ಅರಸಿ ಬಂದಿದೆ.

    ಕಲಬುರಗಿ ಶರಣಬಸವ ವಿವಿ ವತಿಯಿಂದ ಮಂಜಮ್ಮ ಜೋಗತಿ ಅವರನ್ನು ಗೌರವ ಡಾಕ್ಟರೇಟ್ ಪದವಿಗೆ ಆಯ್ಕೆ ಮಾಡಲಾಗಿದೆ. ಸೆಪ್ಟೆಂಬರ್ 8ಕ್ಕೆ ಶರಣಬಸವ ವಿಶ್ವ ವಿದ್ಯಾಲಯ ಘಟಿಕೋತ್ಸವದ ವೇಳೆ ಮಂಜಮ್ಮಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಾಗುತ್ತದೆ. ಈ ಕುರಿತು ಮಂಜಮ್ಮಗೆ ಶರಣಬಸವ ವಿವಿ ಪತ್ರ ಬರೆದಿದೆ.

    ಮಂಜಮ್ಮ ಜೋಗತಿ ಅವರು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ನಿವಾಸಿ. ಸದ್ಯ ಅವರು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಆಗಿದ್ದಾರೆ. ಇದೀಗ ಅವರ ಸೇವೆಗೆ ಮತ್ತೊಂದು ಗರಿ ಸಿಕ್ಕಿದ್ದು, ಸಾಕಷ್ಟು ಅಭಿನಂದನೆಗಳು ಹರಿದು ಬರುತ್ತಿದೆ.

    ಮಂಜುನಾಥ ಶೆಟ್ಟಿಯಾಗಿ ಜನಿಸಿದ ಮಂಜಮ್ಮ ಜೋಗತಿ ಅವರು ಭಾರತೀಯ ಕನ್ನಡ ರಂಗಭೂಮಿ ಕಲಾವಿದೆ, ಉತ್ತರ ಕರ್ನಾಟಕದ ಜಾನಪದ ನೃತ್ಯ ಪ್ರಕಾರವಾದ ಜೋಗ್ತಿ ನೃತ್ಯದ ನರ್ತಕಿ ಮತ್ತು ಗಾಯಕಿ. 2019 ರಲ್ಲಿ ಮಂಜಮ್ಮ ಜೋಗತಿ ಅವರು ಜಾನಪದ ಕಲೆಗಳ ರಾಜ್ಯದ ಉನ್ನತ ಸಂಸ್ಥೆಯಾದ ಕರ್ನಾಟಕ ಜಾನಪದ ಅಕಾಡೆಮಿಯನ್ನು ಮುನ್ನಡೆಸಿದ ಮೊದಲ ಟ್ರಾನ್ಸ್‌ವುಮನ್ ಆದರು. 2021 ರಲ್ಲಿ, ಜಾನಪದ ಕಲೆಗಳ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಮಂಜಮ್ಮ ಅವರಿಗೆ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು. (ದಿಗ್ವಿಜಯ ನ್ಯೂಸ್​)

    ದೇವರ ಗೂಳಿಯನ್ನು ಕಸಾಯಿಖಾನೆಗೆ ಸಾಗಿಸಿರುವ ಪ್ರಕರಣ: ನಂಜನಗೂಡಿನಲ್ಲಿ ಗೋಶಾಲೆ ಆರಂಭಕ್ಕೆ ಹಕ್ಕೊತ್ತಾಯ

    ನನ್ನ ಲೈಂಗಿಕ ಜೀವನ ಆಸಕ್ತಿಕರವಾಗಿಲ್ಲದಿರಬಹುದು! ಕರಣ್​ ಜೋಹರ್​ಗೆ ಟಾಂಗ್​ ಕೊಟ್ಟ ತಾಪ್ಸಿ ಪನ್ನು

    ಕಮಲ್​ ಹಾಸನ್​ ವಿರುದ್ಧ ಗಂಭೀರ ಆರೋಪ ಮಾಡಿದ ಖ್ಯಾತ ಕಿರುತೆರೆ ಕಲಾವಿದೆ: ಅಭಿಮಾನಿಗಳಿಗೆ ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts