More

    ಬದುಕಿದರೆ ಅಪ್ಪು ಹಾಗೆ ಬದುಕಬೇಕು: ಪುನೀತ್​ ನೆನೆದು ಕಣ್ಣೀರಿಟ್ಟ ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ

    ವಿಜಯನಗರ: ದಿವಂಗತ ನಟ ಪುನೀತ್​ ರಾಜ್​ಕುಮಾರ್​ ಪುಷ್ಪನಮನ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿಯವರು ತುಂಬಾ ಭಾವುಕರಾದ ಸನ್ನಿವೇಶ ಜರುಗಿತು.

    ಹೊಸಪೇಟೆಯ ಪತ್ರಿಕಾಭವನದಲ್ಲಿ ವಿಜಯನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಂಜಮ್ಮ ಜೋಗತಿಯವರು ಅಪ್ಪು ನನೆದು ಕಣ್ಣೀರಾಕಿದರು.

    ಬದುಕಿದರೆ ಅಪ್ಪು ಹಾಗೆ ಬದುಕಬೇಕು. ಅವರು ಮಾಡಿರೋ ಸಮಾಜಸೇವೆ ಎಲ್ಲರಿಗೂ ಆದರ್ಶಪ್ರಾಯವಾಗಿದೆ. ಸಾಧ್ಯವಾದರೆ ಎಲ್ಲರೂ ಅವರ ಹಾಗೆ ನಡೆಯಿರಿ. ಅಪ್ಪು ಅವರು ಬೆಲೆಕಟ್ಟಲಾಗದಂತ ವಸ್ತು. ಮಾಣಿಕ್ಯ ಮಸಿ ಬಟ್ಟೆಯಲ್ಲಿದ್ದರೂ ಅಷ್ಟೇ ರೇಷ್ಮೆ ಬಟ್ಟೆಯಲ್ಲಿದ್ದರೂ ಅಷ್ಟೇ, ಅದರ ಬೆಲೆ ಅದಕ್ಕಿದ್ದೇ ಇರುತ್ತದೆ ಎಂದರು.

    ಚಿಕ್ಕವರಿಗೆ ಆಶೀರ್ವಾದ ಮಾಡಬೇಕು, ದೊಡ್ಡವರಿಗೆ ನಮಸ್ಕರಿಸಬೇಕು. ಆದ್ರೆ ಅಪ್ಪು ದೇವರಾಗಿದ್ದಾರೆ. ದೇವರನ್ನು ಒಳ್ಳೇದಾಗಲಿ ಅಂತ ಬೇಡಿಕೊಳ್ತೇವೆ, ಆಗ ಇಂತಹ ದೇವರಂತ ವ್ಯಕ್ತಿಗಳನ್ನು ಕಳಿಸುತ್ತಾನೆ. ತಂದೆ-ತಾಯಿಗೆ, ಚಿಕ್ಕವರಿಗೆ ಹಾಗೂ ದೊಡ್ಡವರಿಗೆ ಗೌರವ ಕೊಡೋಣ ಎಂದು ಮನವಿ ಮಾಡಿದರು.

    ಪುನೀತ್​ ತಂದೆಗೆ ತಕ್ಕ ಮಗ. ತುಂಬಾ ಸಮಾಜಸೇವೆ ಮಾಡಿದ್ದಾರೆ. ನಮ್ಮ ಮಕ್ಕಳು ಮೊಮ್ಮಕ್ಕಳ ಕಾಲಕ್ಕೆ ಪುನೀತ್ ದೇವಸ್ಥಾನ ಕಟ್ಟಿಸ್ತಾರೆ ಎಂದು ಪದ್ಮಶ್ರೀ ಮಾತಾ ಮಂಜಮ್ಮ ಜೋಗತಿ ಅವರು ಅಪ್ಪು ಗುಣಗಾನ ಮಾಡಿದರು. (ದಿಗ್ವಿಜಯ ನ್ಯೂಸ್​)

    ಜೈಪುರ ವಿಮಾನ ನಿಲ್ದಾಣದಲ್ಲಿ ಐಪಿಎಸ್​ ಅಧಿಕಾರಿಯ ಬ್ಯಾಗ್ ಚೆಕ್​ ಮಾಡಿದ ಸಿಬ್ಬಂದಿಗೆ ಕಾದಿತ್ತು ಅಚ್ಚರಿ!

    ಪತ್ನಿ ಸಾಕ್ಷಿ ಬಗ್ಗೆ ಅಭಿಮಾನಿ ಕೇಳಿದ ವೈಯಕ್ತಿಕ ಪ್ರಶ್ನೆಗೆ ಎಂ.ಎಸ್​. ಧೋನಿ ಕೊಟ್ಟ ಉತ್ತರ ವೈರಲ್!​

    ಜೇಮ್ಸ್​ ಪೈರಸಿ ಮಾಡಬೇಡಿ, ಇದು ದೇವರ ಸಿನಿಮಾ: ಕೈ ಮುಗಿದು ಬೇಡಿಕೊಂಡ ಅಭಿಮಾನಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts