More

    ಸರ್ಕಾರಿ ನಿವಾಸದಲ್ಲಿದ್ದ ಮರ ಕಡಿದ ಪ್ರಕರಣ: ಮಂಡ್ಯ SP ವಿರುದ್ಧ ಗೃಹ ಸಚಿವರಿಗೆ ದೂರು

    ಮಂಡ್ಯ: ಪೊಲೀಸ್​ ವರಿಷ್ಠಾಧಿಕಾರಿ ನಿವಾಸದಲ್ಲಿದ್ದ ಮರಗಳನ್ನು ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್​ಪಿ ಡಾ. ಅಶ್ವಿನಿ ವಿರುದ್ಧ ಪ್ರಕರಣ ದಾಖಲಿಸಬೇಕೋ? ಬೇಡವೋ? ಎಂಬ ಗೊಂದಲದಲ್ಲಿ ಅಧಿಕಾರಿಗಳು ಸಿಲುಕಿದ್ದಾರೆ.

    ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಮಂಡ್ಯ ಡಿಸಿಎಫ್ ರವಿಶಂಕರ್, ಎಸ್ಪಿ ಮನೆ ಒಳಗಿದ್ದ 9 ಅಶೋಕ ಮರಗಳನ್ನು ಕಡಿಯಲಾಗಿದೆ. ಅಶೋಕ ಮರ ಕಡಿಯಲು ಅನುಮತಿ ಬೇಕಿಲ್ಲ. ಆದರೆ, ಸರ್ಕಾರಿ ಜಾಗದಲ್ಲಿ ಮರ ಕಡಿಯುವ ಮೊದಲು ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕಿತ್ತು. ಆದರೆ, ಮಾಹಿತಿ ನೀಡಿರಲಿಲ್ಲ. ಈ ವಿಚಾರದಲ್ಲಿ ಕ್ರಮ ತೆಗೆದುಕೊಳ್ಳಲು ಕೆಲವೊಂದು ಗೊಂದಲಗಳಿವೆ. ತಜ್ಞರು ಹಾಗೂ ಮೇಲಾಧಿಕಾರಿಗಳ ಸಲಹೆ ಪಡೆದು ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

    ಕ್ರಮಕ್ಕೆ ಒತ್ತಾಯ
    ಸರ್ಕಾರಿ ನಿವಾಸದಲ್ಲಿದ್ದ ಮರಗಳ ಕಡಿದಿರುವ ಎಸ್​ಪಿ ಅಶ್ವಿನಿ ವಿರುದ್ಧ ವರ್ಲ್ಡ್ ವಿಶ್ವಮಾನವ ಹಕ್ಕುಗಳು ಸೇವಾ ಕೇಂದ್ರದಿಂದ ಗೃಹ ಸಚಿವರಿಗೆ ದೂರು ನೀಡಲಾಗಿದೆ. ಸಿದ್ದಲಿಂಗೇಗೌಡ ಎಂಬುವರು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್, ಡಿಜಿಐಜಿ ಪ್ರವೀಣ್ ಸೂದ್​ ಹಾಗೂ ಗೃಹ ಸಚಿವರಿಗೆ ದೂರು ನೀಡಿದ್ದಾರೆ. ನಿನ್ನೆ ಮಂಡ್ಯ ಎಸ್ಪಿ ಅಶ್ವಿನಿ ಅವರ ಸರ್ಕಾರಿ ನಿವಾಸದಲ್ಲಿ ಮರಗಳನ್ನ ಕಡಿಯಲಾಗಿತ್ತು. ಮರ ಕಡಿದು, ಸಾಗಿಸಲು ಟ್ರೈನಿ ಪೊಲೀಸರ ಬಳಕೆ ಮಾಡಲಾಗಿತ್ತು. ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಸಿದ್ದಲಿಂಗೇಗೌಡ ಆಗ್ರಹಿಸಿದ್ದಾರೆ. ಆಧುನಿಕರಣ ನೆಪದಲಿ ಸರ್ಕಾರಿ ಬಂಗಲೆ ವಿರೂಪಗೊಳಿದ ಬಗ್ಗೆಯೂ ಕ್ರಮಕ್ಕೆ ಒತ್ತಾಯಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಮಂಡ್ಯ ಎಸ್​ಪಿ ಸರ್ವಾಧಿಕಾರಿ ಧೋರಣೆಗೆ ಜನರ ಆಕ್ರೋಶ: ತರಬೇತಿನಿರತ ಪೇದೆಗಳು ಇವರ ಜೀತದಾಳುಗಳಾ?

    ಲೈಂಗಿಕ ಸಂಭೋಗ ಅಥವಾ ಆಹಾರ! ಎರಡರಲ್ಲಿ ನಿಮ್ಮ ಆಯ್ಕೆ ಯಾವುದೆಂಬ ಪ್ರಶ್ನೆಗೆ ಶ್ರುತಿ ಕೊಟ್ಟ ಉತ್ತರ ವೈರಲ್​

    40 ವರ್ಷ ಕಾಡಿನಲ್ಲೇ ನೆಮ್ಮದಿಯಾಗಿದ್ದ ಈತ ನಾಗರಿಕ ಜಗತ್ತಿಗೆ ಮರಳಿದ ಎಂಟೇ ವರ್ಷಕ್ಕೆ ಕ್ಯಾನ್ಸರ್​ನಿಂದ ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts