More

    ಭಾರಿ ಮಳೆಯಿಂದ ಅವಾಂತರ ಸೃಷ್ಟಿಯಾದ್ರೂ ಮಂಡ್ಯಕ್ಕೆ ಬಾರದ ಸಂಸದೆ ಸುಮಲತಾ ವಿರುದ್ಧ ಜನಾಕ್ರೋಶ

    ಮಂಡ್ಯ: ಭಾರಿ ಮಳೆಯಿಂದ ಅವಾಂತರ ಸೃಷ್ಟಿಯಾದರೂ ಮಂಡ್ಯಕ್ಕೆ ಬಾರದ ಸಂಸದೆ ಸುಮಲತಾ ಅಂಬರೀಷ್​ ವಿರುದ್ಧ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.

    ಮಂಡ್ಯಕ್ಕೆ ಬರದೇ ಮನೆಯಲ್ಲೇ ಕುಳಿತು ಫೇಸ್​ಬುಕ್ ಮುಖಾಂತರ ಮಳೆ ಅನಾಹುತ ವಿಡಿಯೋಗಳನ್ನು ಪೋಸ್ಟ್​ ಮಾಡುವ ಮೂಲಕ ವರ್ಕ್ ಫ್ರಮ್​ ಹೋಮ್​ ಮಾಡುತ್ತಿರುವ ಸ್ವಾಭಿಮಾನಿ ಸಂಸದೆಯ ನಡೆಗೆ ಭಾರಿ ಟೀಕೆ ವ್ಯಕ್ತವಾಗಿದೆ. ​

    ಕಳೆದ ನಾಲ್ಕು ದಿನ ಹಿಂದೆ ಮಂಡ್ಯದ ಗಂಟೇಗೌಡನದೊಡ್ಡಿ, ಗುಡುಗೇನಹಳ್ಳಿಯಲ್ಲಿ ನೂರಾರು ಎಕರೆ ಜಮೀನು ಜಲಾವೃತಗೊಂಡಿದೆ. ಶ್ರೀರಂಗಪಟ್ಟಣ, ನಾಗಮಂಗಲ ಹಾಗೂ ಮದ್ದೂರು ವ್ಯಾಪ್ತಿಯಲ್ಲಿಯೂ ಜಮೀನುಗಳಿಗೆ ನೀರು ನುಗ್ಗಿದೆ. ಜಿಲ್ಲೆಯಾದ್ಯಂತ ಮಳೆಯಿಂದ ಅದ್ವಾನವಾದ್ರು ಸ್ಥಳಕ್ಕೆ ಮಾತ್ರ ಸಂಸದೆ ಸುಮಲತಾ ಮಾತ್ರ ಸುಳಿದಿಲ್ಲ.

    ಫೇಸ್​ಬುಕ್ ಮೂಲಕವೇ ಮಳೆ ಅವಾಂತರಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಪೋಸ್ಟ್ ಮಾಡಿ ಅಧಿಕಾರಿಗಳೊಂದಿಗೆ ಮಳೆ ಹಾಗೂ ಮಳೆಯಿಂದಾದ ಅನಾಹುತಗಳ ಬಗ್ಗೆ ಮಾಹಿತಿ ಪಡೆದಿದ್ದೇನೆ. ಸೂಕ್ತ ಕ್ರಮವಹಿಸುವಂತೆ ಸೂಚಿಸಿದ್ದೇನೆ. ಸರ್ಕಾರಕ್ಕೆ ರೈತರಿಗೆ ಶೀಘ್ರ ಪರಿಹಾರ ನೀಡುವಂತೆ ಮನವಿ ಮಾಡುವೆ ಎಂದು ಪೋಸ್ಟ್ ಮಾಡಿದ್ದಾರೆ.

    ಸುಮಲತಾ ಫೇಸ್​ಬುಕ್ ಪೋಸ್ಟ್​ ನೋಡಿ ಮಂಡ್ಯ ಜನತೆ ಆಕ್ರೋಶ ಹೊರ ಹಾಕುತ್ತಿದ್ದಾರೆ. ಡಿಜಿಟಲ್ ಇಂಡಿಯಾವನ್ನು ಯಾರಾದ್ರೂ ಸರಿಯಾಗಿ ಬಳಸಿಕೊಂಡಿದ್ದಾರೆ ಅಂದ್ರೆ ಅದು ಸುಮಕ್ಕ ಮಾತ್ರ. ಮುಂದಿನ ಚುನಾವಣೆ ಮನೆಯಲ್ಲಿ ಕುಳಿತು ಮತಯಾಚನೆ ಮಾಡಿ, ಫೇಸ್​ಬುಕ್, ಟ್ವಿಟರ್ ಮೂಲಕವೇ ಮತ ಹಾಕಿಸಿಕೊಳ್ಳಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

    ಕಳೆದ ಚುನಾವಣೆಯಲ್ಲಿ ಸುಮಲತಾ ಜೊತೆ ನಿಂತ ಕನ್ನಡಪರ ಸಂಘಟನೆಗಳು ಕೂಡ ಅಸಮಾಧಾನ ಹೊರಹಾಕಿವೆ. (ದಿಗ್ವಿಜಯ ನ್ಯೂಸ್​)

    ಅಪ್ಪಳಕ್ಕಾಗಿ ಮದುವೆ ಮಂಟಪದಲ್ಲಿ ನಡೆಯಿತು ಭಾರಿ ಗಲಾಟೆ: ನಷ್ಟವಾಗಿದ್ದು ಬರೋಬರಿ 1.5 ಲಕ್ಷ ರೂಪಾಯಿ

    ಅಕ್ಕಿ ವ್ಯಾಪಾರಿ ಬಳಿ 5 ಲಕ್ಷ ರೂ.ಗೆ ಬೆದರಿಕೆ ಹಾಕಿ ಪೊಲೀಸರ ಕೈಗೆ ಸಿಕ್ಕಿಬಿದ್ದ 6 ಮಂದಿ ನಕಲಿ ಪತ್ರಕರ್ತರು!

    ಜಾಲತಾಣದಲ್ಲಿ ಪೋಸ್ಟ್​ ಹಾಕಿದ್ದಕ್ಕೇ ಮಹಿಳೆಗೆ ಶಿಕ್ಷೆ- ಮಾನವ ಹಕ್ಕುಗಳ ಕಾರ್ಯಕರ್ತರ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts