More

    ಕೋಮಾಗೆ ಜಾರಿದ್ದ ಪ್ರೇಯಸಿ: ನಿಜ ಪ್ರೀತಿಗೆ ಎಲ್ಲವನ್ನು ಗೆಲ್ಲುವ ಸಾಮರ್ಥ್ಯವಿದೆ ಎಂಬುದು ಸಾಬೀತು!

    ನವದೆಹಲಿ: ಪವಿತ್ರ ಪ್ರೀತಿಗೆ ಬೆಲೆಯನ್ನು ಕಟ್ಟಲಾಗದು. ನಿಜವಾದ ಪ್ರೀತಿಗೆ ಎಲ್ಲವನ್ನು ಗೆಲ್ಲುವ ಸಾಮರ್ಥ್ಯವಿದೆ ಎಂಬುದನ್ನು ಈ ಒಂದು ಘಟನೆ ಸಾಬೀತು ಮಾಡಿದೆ. ಸುಮಾರು ಒಂದೂವರೆ ತಿಂಗಳಿಂದ ಕೋಮಾಗೆ ಜಾರಿದ್ದ ಪ್ರೇಯಸಿ, ಯಾವಾಗ ಕೋಮಾದಿಂದ ಹೊರ ಬರುತ್ತಾಳೆ ಎಂದು ಕಾದು, ಆಕೆಯ ಚೇತರಿಕೆಯ ನಂತರ ತನ್ನ ಪ್ರೇಮ ನಿವೇದನೆ ಮಾಡಿಕೊಂಡಂತಹ ಕಣ್ಣಂಚಲಿ ನೀರು ತುಂಬಿಸುವ ಪ್ರೇಮ ಕತೆ ಇದಾಗಿದೆ.

    ಕೋಮಾದಿಂದ ಮತ್ತೆ ಜೀವನಕ್ಕೆ ಮರಳಿದ ತನ್ನ ಪ್ರೇಯಿಸಿ ಅಗಾಧವಾದ ಪ್ರೀತಿಯನ್ನು ತೋರಿದ ಪ್ರಿಯಕರ, ಆಕೆಗೆ ರಿಂಗ್​ ತೊಡಿಸಿ, ನೀನು ನನ್ನ ಮದುವೆ ಆಗಲು ಬಯಸುವೆಯಾ ಎಂದು ಪ್ರಶ್ನಿಸಿದಾಗಲೇ ಆಕೆಯ ಕಣ್ತುಂಬಿತು. ಇಂತಹ ಪ್ರೀತಿಯನ್ನು ಬಿಟ್ಟು ಕೊಡುವುದಾದರು ಹೇಗೆ ಅಂದುಕೊಂಡ ಯುವತಿಯ ಮನಸ್ಸಲ್ಲಿ ನಾನೆಷ್ಟು ಅದೃಷ್ಟವಂತೆ ಎಂಬ ಭಾವನೆಯು ತುಂಬಿತ್ತು.

    ಅಂದಹಾಗೆ ಈ ಘಟನೆ ನಡೆದಿರುವುದು ಅಮೆರಿಕದ ಚಿಕಾಗೋದಲ್ಲಿರುವ ಫಿಲಿಫೈನ್ಸ್​ನಲ್ಲಿ. ಯುವತಿ ಹೆಸರು ವಿಕ್ಟೋರಿಯಾ. ಈಕೆ 2016ರಿಂದ ಲಪಸ್​ ಸಿಂಡ್ರೋಮ್​ನಿಂದ ಬಳಲುತ್ತಿದ್ದಳು. ಅಲ್ಲದೆ, ವಿರಳಾತಿವಿರಳ ಜಾನ್ಸನ್​ ಸಿಂಡ್ರೋಮ್​ ಹೆಸರಿನ ಅಪಾಯಕಾರಿ ಚರ್ಮ ಕ್ಯಾನ್ಸರ್​ಗೆ ಒಳಗಾಗಿದ್ದಳು. ಎರಡು ಕಾಯಿಲೆ ಒಟ್ಟಿಗೆ ದಾಳಿ ಮಾಡಿದ್ದರಿಂದ ಚಿಕಿತ್ಸೆಯಿಲ್ಲದೇ ಆಕೆ ಒಂದೂವರೆ ತಿಂಗಳು ಕೋಮಾಗೆ ಜಾರಿದ್ದಳು.

    ವಿಕ್ಟೊರಿಯಾ ಬಾಯ್​ಫ್ರೆಂಡ್​ ಸ್ಟೀವನ್​ ಸುಮಾರು ಒಂದು ವರ್ಷದಿಂದಲೂ ಪರಿಚಯವಿದ್ದ. ವಿಕ್ಟೊರಿಯಾಳನ್ನು ತುಂಬಾ ಪ್ರೀತಿಸುತ್ತಿದ್ದ. ಆದರೆ, ಇದ್ದಕ್ಕಿದ್ದಂತೆ ಆಕೆ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗಿ ಆಕೆ ಕೋಮಾಗೆ ಜಾರಿದ್ದು, ಸ್ಟೀವನ್​ಗೆ ಬರಸಿಡಿಲು ಬಡಿದಂತಾಯಿತು. ಆಕೆಯನ್ನು ಹೆಚ್ಚಾಗಿ ಅಚ್ಚುಕೊಂಡಿದ್ದ ಆತ ಆಕೆ ಖಂಡಿತ ಕೋಮಾದಿಂದ ಬಂದೇ ಬರುತ್ತಾಳೆ ಎಂದು ನಂಬಿದ್ದ. ಒಂದೂವರೆ ತಿಂಗಳಲ್ಲೇ ವಿಕ್ಟೋರಿಯಾ ಕೋಮಾದಿಂದ ಹೊರಬಂದಿದ್ದಾಳೆ.

    ಅಂದುಕೊಂಡಂತೆ ಪ್ರೇಯಸಿ ಸಾವನ್ನೇ ಗೆದ್ದು ಬಂದಿರುವುದು ಸ್ಟೀವನ್​ಗೆ ತುಂಬಾ ಖುಷಿಯಾಗಿದ್ದು, ತಕ್ಷಣವೇ ಆಕೆಗೆ ಪ್ರೇಮ ನಿವೇದನೆಯನ್ನು ಮಾಡಿ, ರಿಂಗ್​ ಕೂಡ ತೊಡಿಸಿದ್ದಾನೆ. ಆಕೆ ಸಂಪೂರ್ಣ ಚೇತರಿಕೆಗೊಂಡ ಬಳಿಕ ಮದುವೆ ಆಗಲು ನಿರ್ಧರಿಸಿದ್ದಾನೆ. ವಿಕ್ಟೋರಿಯಾ ಕಣ್ಣಲ್ಲೂ ಭಾವುಕತೆ ತುಂಬಿದ್ದು, ಇಂತಹ ಜೀವನ ಸಂಗಾತಿಗಿಂತ ಹೆಚ್ಚಿನದನ್ನು ಇನ್ನೇನು ಪಡೆಯಲು ಸಾಧ್ಯ ಎಂಬ ಮನದಾಳವನ್ನು ಹೊರ ಹಾಕಿದ್ದಾಳೆ.

    ಕೋಮಾದಿಂದ ಹೊರಬಂದು ಸುಮಾರು 7 ತಿಂಗಳ ಚೇತರಿಕೆ ಬಳಿಕ ವಿಕ್ಟೋರಿಯಾ ಡಿಸ್ಚಾರ್ಜ್​ ಆಗಿದ್ದಾಳೆ. ಇದೀಗ ಆಕೆಯ ಮನೆಯಲ್ಲಿ ಮದುವೆಗೆ ಸಿದ್ಧತೆಗಳು ನಡೆದಿದ್ದು, ಇಬ್ಬರು ಹೊಸ ಬಾಳಿನ ಪಯಣವನ್ನು ಆರಂಭಿಸಲು ಸಜ್ಜಾಗಿದ್ದಾರೆ. ಮುಂದಿನ ವರ್ಷದ ಆರಂಭದಲ್ಲೇ ಮದುವೆ ನಡೆಯಲಿದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. (ಏಜೆನ್ಸೀಸ್​)

    ರಾಜೀವ್​ಗೆ ಹೊಸ ಉಸಿರು; ಬಿಗ್ ಬಾಸ್ ಮುಗಿಸಿ ಬರುತ್ತಿದ್ದಂತೆಯೇ ಚಿತ್ರ ಪ್ರಾರಂಭ

    ಫುಲ್ ಸ್ಪೀಡ್​ನಲ್ಲಿ ನಂದಕಿಶೋರ್; ಚಿತ್ರ ತಡವಾಗಿದ್ದು ನನ್ನಿಂದಲ್ಲ, ಮೇಕಿಂಗ್​ನಿಂದ..

    ಪತ್ನಿಯ ಚಟದಿಂದ ಹಾಳಾದ ಸಂಸಾರ: ಆ ಕ್ಷಣ ಅಂಕಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts