More

    ಬರೋಬ್ಬರಿ 9 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ! ತಾಯಿ ಮತ್ತು ಮಕ್ಕಳ ಆರೋಗ್ಯ ಸ್ಥಿರ

    ಬಮಾಕೋ (ಮಾಲಿ): ವೈದ್ಯ ಲೋಕವೇ ಅಚ್ಚರಿ ಪಡುವಂತಹ ಘಟನೆ ಮಾಲಿ ರಾಷ್ಟ್ರದ ಬಮಾಕೋದಲ್ಲಿ ಮಂಗಳವಾರ ನಡೆದಿದೆ. ಮಾಲಿಯನ್​ ಮಹಿಳೆ ಬರೋಬ್ಬರಿ 9 ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಎರಡಕ್ಕಿಂತ ಹೆಚ್ಚಿನ ವೈದ್ಯರು ಮಕ್ಕಳನ್ನು ಪತ್ತೆ ಹಚ್ಚಿದ್ದು, ನಿಜಕ್ಕೂ ಇದು ಪವಾಡವೇ ಆಗಿದೆ.

    25 ವರ್ಷದ ಹಲಿಮಾ ಸಿಸ್ಸೆ ಗರ್ಭಧಾರಣೆಯು ಪಶ್ಚಿಮ ಆಫ್ರಿಕಾದ ರಾಷ್ಟ್ರವನ್ನು ಆಕರ್ಷಿಸಿತ್ತು. ಇದರೊಂದಿಗೆ ದೇಶದ ನಾಯಕರ ಗಮನವನ್ನೂ ಸೆಳೆದಿತ್ತು. ಸಿಸ್ಸೆಗೆ ತಜ್ಞರ ಆರೈಕೆಯ ಅಗತ್ಯವಿದೆ ಎಂದು ಕಳೆದ ಮಾರ್ಚ್​ನಲ್ಲಿ ವೈದ್ಯರು ಹೇಳಿದಾಗ ಆಕೆಯನ್ನು ವಿಮಾನದ ಮೂಲಕ ಅಧಿಕಾರಿಗಳು ಮೊರೊಕ್ಕೋದ ಆಸ್ಪತ್ರೆಗೆ ದಾಖಲಿಸಿದ್ದರು.

    ಇದೀಗ ಮಂಗಳವಾರ ಸಿಸ್ಸೆ 9 ಮಕ್ಕಳಿಗೆ (ಐದು ಹೆಣ್ಣು ಮತ್ತು ನಾಲ್ಕು ಗಂಡು) ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಕ್ಕಳೆಲ್ಲರೂ ಆರೋಗ್ಯವಾಗಿದ್ದಾರೆ ಎಂದು ಮಾಲಿ ಆರೋಗ್ಯ ಸಚಿವ ಫಾಂಟ ಸಿಬಿ ಹೇಳಿಕೆ ನೀಡಿದ್ದಾರೆ.

    ಮಾಲಿ ಮತ್ತು ಮೊರೊಕ್ಕೊದಲ್ಲಿ ಅಲ್ಟ್ರಾಸೌಂಡ್​ ಮಾಡಿದಾಗ ಸಿಸ್ಸೆ7 ಮಕ್ಕಳಿಗೆ ಜನ್ಮ ನೀಡಲಿದ್ದಾಳೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, 9 ಮಕ್ಕಳಿಗೆ ಜನ್ಮ ನೀಡಿರುವುದು ನಿಜಕ್ಕೂ ಅಚ್ಚರಿಯಾಗಿದ್ದು, ಸಿಸೇರಿಯನ್​ ಮೂಲಕ ಮಕ್ಕಳನ್ನು ಹೊರತಗೆಯಲಾಗಿದೆ.

    ಏಕಕಾಲದಲ್ಲಿ ಒಂಬತ್ತು ಮಕ್ಕಳು ಹುಟ್ಟುವುದು ವಿರಾಳಾತಿ ವಿರಳ ಘಟನೆ. ಇಂತಹ ಪ್ರಕರಣಗಳಲ್ಲಿ ಕೆಲವು ಮಕ್ಕಳು ಅವಧಿಗೂ ಮುನ್ನ ಹುಟ್ಟುವುದರಿಂದ ಮಕ್ಕಳಲ್ಲಿ ವೈದ್ಯಕೀಯ ಸಂಕೀರ್ಣತೆಯು ಇರುತ್ತದೆ ಎಂದು ತಜ್ಞರು ಹೇಳಿದ್ದಾರೆ. ಸದ್ಯ ತಾಯಿ ಮತ್ತು ಮಕ್ಕಳ ಆರೋಗ್ಯ ಸ್ಥಿರವಾಗಿದ್ದು, ವೈದ್ಯರ ನಿಗಾದಲ್ಲಿ ಇರಿಸಲಾಗಿದೆ. (ಏಜೆನ್ಸೀಸ್​)

    ಮೂಗಿನಲ್ಲಿ ಔಷಧ ಪದ್ಧತಿಗೆ ಇತಿಹಾಸದ ಪುರಾವೆ: ಪಂಚಕರ್ಮದ ಪ್ರಧಾನ ಚಿಕಿತ್ಸೆಗಳಲ್ಲಿ ನಸ್ಯಕರ್ಮವೂ ಒಂದು; ಲಿಂಬೆರಸಕ್ಕಿದೆ ಕಫ ನಿವಾರಿಸುವ ವಿಶೇಷ ಗುಣ

    ದುರಂತಕ್ಕೆ ನಿರ್ಲಕ್ಷ್ಯವೇ ಮುಖ್ಯ ಹೊಣೆ!; ಚಾಮರಾಜನಗರ ಆಕ್ಸಿಜನ್ ಎಮರ್ಜೆನ್ಸಿ ಮುಖ್ಯ ಕಾರ್ಯದರ್ಶಿಗೆ ಮೊದಲೇ ತಿಳಿದಿತ್ತು..

    ಒದ್ದಾಡುತ್ತಿರೋ ತಂದೆಗೆ ನೀರು ಕುಡಿಸಲು ಬಿಡದ ತಾಯಿ: ಕರೊನಾ 2ನೇ ಅಲೆ ಭೀಕರತೆಗೆ ಈ ಘಟನೆಯೇ ಸಾಕ್ಷಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts