ಹಾವೇರಿ: ಅನ್ಯ ಧರ್ಮದ ಯುವಕನೊಬ್ಬ ಹಿಂದು ಯುವತಿಯನ್ನು ಅಪಹರಿಸಿಕೊಂಡು ಹೋಗಿರುವ ಆರೋಪ ಕೇಳಿಬಂದಿದ್ದು, ನಮ್ಮ ಧರ್ಮದ ಯುವತಿಯನ್ನು ಕಾಪಾಡಿ, ಜಿಹಾದಿಯನ್ನು ಬಂಧಿಸಿ ಎಂದು ಶ್ರೀರಾಮ ಸೇನೆ ಸಂಘಟನೆಯ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ.
ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದಲ್ಲಿ ತಮಟೆ ಬಾರಿಸಿ ರಸ್ತೆ ಜಾಥಾ ಮಾಡಿ ಆಕ್ರೋಶ ಹೊರಹಾಕಿದ್ದಾರೆ. 24 ವರ್ಷದ ಕಡಕೋಳ ಗ್ರಾಮದ ಯುವತಿಯನ್ನು ಲಕ್ಷ್ಮೇಶ್ವರ ಮೂಲದ ಭಾಷಾ ರತನಖಾನ್ ಎಂಬಾತ ಅಪಹರಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಪ್ರೀತಿಯ ನೆಪದಲ್ಲಿ ಲವ್ ಜಿಹಾದ್ ನಡೆದಿದೆ ಎಂದು ಬೃಹತ್ ಪ್ರತಿಭಟನೆ ನಡೆಸಿದರು. ಇನ್ನೆರಡೂ ದಿನಗಳಲ್ಲಿ ಯುವತಿಯನ್ನು ಕರೆದುಕೊಂಡು ಬಾರದಿದ್ದರೆ, ಲಕ್ಷ್ಮೇಶ್ವರ ಯುವಕನ ಮನೆಯ ಮುಂದೆ ಪ್ರತಿಭಟಿಸುವುದಲ್ಲದೇ, ಸವಣೂರು ಬಂದ್ ಮಾಡುವುದಾಗಿ ಕಾರ್ಯಕರ್ತರು ಎಚ್ವರಿಕೆ ನೀಡಿದ್ದಾರೆ.
ಎಲ್ಲ ಸತ್ಯ ಗೊತ್ತಿದ್ದರು ಆರೋಪಿಯನ್ನು ಯಾಕೆ ಹಿಡಿಯುತ್ತಿಲ್ಲಾ? ಇದು ಪೋಲಿಸ್ ಇಲಾಖೆಯ ನಿರ್ಲಕ್ಷ್ಯ ಹಾಗೂ ವೈಫಲ್ಯ ಎಂದು ಸವಣೂರು ತಹಶೀಲ್ದಾರ ಕಚೇರಿ ಮುಂದೆ ತಮಟೆ ಹೊಡೆದು ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ. ಲವ್ ಜಿಹಾದ್ ಆರೋಪ ಸಂಬಂಧ ಸವಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)
ಸಮಂತಾ ಯಾಕೆ ಈ ರೀತಿ ಟ್ವೀಟ್ ಮಾಡಿದ್ರು? ನೆಟ್ಟಿಗರ ತಲೆಗೆ ಹುಳ ಬಿಟ್ಟ ಸೌತ್ ಬ್ಯೂಟಿಯ ಈ ಒಂದು ಟ್ವೀಟ್!
2ನೇ ಮದ್ವೆಯಾದ ಸೆಲೆಬ್ರಿಟಿ IAS ಅಧಿಕಾರಿ ಟೀನಾ ಡಾಬಿ: ಕೋವಿಡ್ ಸಂದರ್ಭದ ಭೇಟಿಗೆ ಮದುವೆಯ ಬೆಸುಗೆ
ಖ್ಯಾತ ಗಾಯಕಿ ಶಿಲ್ಪಿ ರಾಜ್ ಅಶ್ಲೀಲ ವಿಡಿಯೋ ಲೀಕ್: ಲೈವ್ನಲ್ಲಿ ಕಣ್ಣೀರಿಟ್ಟು ಮನವಿ ಮಾಡಿದ ಗಾಯಕಿ