More

    ಜಮೀನು ಗಡಿ ನಿಗದಿಗೆ 70 ಲಕ್ಷ ರೂ. ಲಂಚಕ್ಕೆ ಬೇಡಿಕೆ: ಎಡಿಎಲ್​ಆರ್​ ಅಧಿಕಾರಿ ಬಂಧನ, ಮನೆಯಲ್ಲಿತ್ತು ಭಾರೀ ಹಣ!

    ಬೆಂಗಳೂರು: ಜಮೀನಿನ ಗಡಿ ನಿಗದಿ ಮಾಡಲು ಬರೋಬ್ಬರಿ 70 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಆರೋಪಿಗಳನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

    ಬಂಧಿತರನ್ನು ಆನಂದ (ADLR-ಅಸಿಸ್ಟೆಂಟ್ ಡೈರೆಕ್ಟರ್ ಆಫ್ ಲ್ಯಾಂಡ್ ರಿಕಾರ್ಡ್)ಹಾಗೂ ಸಿಬ್ಬಂದಿ ರಮೇಶ್ ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ನಿನ್ನೆ ರಾತ್ರಿ ಬೆಂಗಳೂರಿನ ಮೂರು ಕಡೆ ಎಸಿಬಿ ದಾಳಿ ನಡೆಸಿತ್ತು.

    ಯಲಹಂಕ ತಾಲ್ಲೂಕಿನ ಕುದುರುಗೆರೆಯ ಜಮೀನು ಸರ್ವೆ ನಂಬರ್ 145, 146ರ ಗಡಿಯನ್ನು ನಿಗದಿ ಮಾಡಲು ADLR ಆನಂದ್​ 70 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ. ಮುಂಗಡವಾಗಿ 20 ಲಕ್ಷ ರೂ. ಹಣ ಮತ್ತು ಬ್ಯಾಂಕ್‌ ಚೆಕ್ ಪಡೆದಿದ್ದ.

    ಆನಂದ್​ನ ಜಾಲಹಳ್ಳಿ ಮನೆ, DDLR ಕುಸುಮ ಲತಾ ಮನೆ ಮತ್ತು ಸರ್ವೆ ಅಧಿಕಾರಿ ಶ್ರೀನಿವಾಸ್​ರ ತುಮಕೂರಿನ ಮನೆ ಸೇರಿ ಮೂರು ಕಡೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ಆನಂದ್ ಮನೆಯಲ್ಲಿ 25.50 ಲಕ್ಷ ರೂ. ನಗದು ಹಾಗೂ 70 ಲಕ್ಷ ಮೊತ್ತದ ಮೂರು ಚೆಕ್ ಮತ್ತು ಕೆಲ‌ ದಾಖಲೆಗಳು ಜಪ್ತಿಯಾಗಿವೆ.

    DDLR ಕುಸುಮಾ ಲತಾ ಮನೆಯಲ್ಲಿ ಏನು ಸಿಕ್ಕಿಲ್ಲ. ಸರ್ವೆಯರ್ ಶ್ರೀನಿವಾಸ್ ಮನೆಯಲ್ಲಿ‌ ಕೆಲ ದಾಖಲೆಗಳು ಸೀಜ್ ಮಾಡಲಾಗಿದೆ. ಎಸಿಬಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. (ದಿಗ್ವಿಜಯ ನ್ಯೂಸ್​)

    ತನ್ನ ಮದುವೆ ದಿಬ್ಬಣದಲ್ಲಿ ಸೊಂಟ ಬಳುಕಿಸಿದ ವಧುವಿಗೆ ಖುಲಾಯಿಸಿದ ಲಕ್​: ಹುಡುಕಿಕೊಂಡು ಬಂತು ಬಿಗ್​ ಆಫರ್!​

    ಮತ್ತೆ “ವಚನ ಭ್ರಷ್ಟ” ಪಕ್ಷವಾದ ಜೆಡಿಎಸ್: ರಾಜಕೀಯ ದಾಳವಾಗಿ ಬಳಸಿಕೊಂಡ ಜೆಡಿಎಸ್ ವರಿಷ್ಠರು

    ಆಫ್ಘಾನ್​ನಲ್ಲಿ ಅರಾಜಕತೆ: 1 ಬಾಟಲ್ ನೀರಿಗೆ​ 3000 ರೂ. ಆದ್ರೆ, ಒಂದು ಪ್ಲೇಟ್​ ಊಟದ ಬೆಲೆ ತಲೆ ತಿರುಗುವಂತಿದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts